ಹುಲ್ಲಹಳ್ಳಿ ಪ್ರವಾಸಿ ಮಂದಿರದಲ್ಲಿ ದಲಿತ ಮುಖಂಡರ ಸಭೆ
1 min readಹುಲ್ಲಹಳ್ಳಿ ಪ್ರವಾಸಿ ಮಂದಿರದಲ್ಲಿ ದಲಿತ ಮುಖಂಡರ ಸಭೆ
ದೇಶದ ಪ್ರಬುದ್ಧ ಸಂವಿಧಾನವೇ ದಲಿತರಿಗೆ ಶ್ರೀರಕ್ಷೆ
ದಲಿತ ಸಂಘರ್ಷ ಸಮಿತಿ ಸಂಚಾಲಕ ಮಂಜು ಶಂಕರಪುರ
ರಾಜ್ಯದ ಸಾಕಷ್ಟು ಭಾಗಗಳಲ್ಲಿ ಅಸ್ಪಶ್ಯತೆ ಇನ್ನೂ ಜೀವಂತವಾಗಿದೆ, ಮೇಲ್ವರ್ಗದ ಪ್ರಭಾವಿಗಳಿಂದ ದೌರ್ಜನ್ಯ ನಿರಂತರವಾಗಿ ನಡೆಯುತ್ತಿವೆ, ಇವುಗಳನ್ನು ಮೆಟ್ಟಿನಿಂತು ಹೋರಾಟವೇ ಅಸ್ತç, ದೇಶದ ಪ್ರತಿಯೊಬ್ಬ ದಲಿತರಿಗೂ ಸಂವಿಧಾನವೇ ಶ್ರೀರಕ್ಷೆ ಎಂದು ದಲಿತ ಸಂಘರ್ಷ ಸಮಿತಿ ಮೈಸೂರು ಉಪ ವಿಭಾಗೀಯ ಸಂಚಾಲಕ ಮಂಜುಶ0ಕರಪುರ ಹೇಳಿದರು.
ಮೈಸೂರು ಜಿಲ್ಲೆಯ ದಲಿತ ಸಂಘರ್ಷ ಸಮಿತಿ ಮೈಸೂರು ಉಪ ವಿಭಾಗೀಯ ಸಂಚಾಲಕ ಮಂಜುಶ0ಕರಪುರ ಅಧ್ಯಕ್ಷತೆಯಲ್ಲಿ ಸಮಲೋಚನ ಸಭೆಯನ್ನು ಹುಲ್ಲಹಳ್ಳಿ ಪ್ರವಾಸಿ ಮಂದಿರದಲ್ಲಿ ಇಂದು ಆಯೋಜಿಸಲಾಗಿತ್ತು. ಹುಲ್ಲಹಳ್ಳಿ ಹೋಬಳಿ ಕೇಂದ್ರವಾಗಿದ್ದು, ಅತಿ ಹೆಚ್ಚು ಹಿಂದುಳಿದವರೆ ವಾಸ ಮಾಡುವ ತಾಣವಾಗಿದೆ. ಕಡ್ಡಾಯವಾಗಿ ತಿಂಗಳಿಗೊಮ್ಮೆ ತಪ್ಪದೇ ನಂಜನಗೂಡು ತಾಲೂಕಿನ ಎಲ್ಲಾ ಹೋಬಳಿ ಕೇಂದ್ರಗಳಲ್ಲಿ ಸಭೆಗಳನ್ನು ನಡೆಸಲಾಗುವುದು, ಕುಂದು ಕೊರತೆಗಳ ಬಗ್ಗೆ ಚರ್ಚಿಸಿ ಗಂಭೀರ ವಿಚಾರಗಳ ಪರಿಹಾರಕ್ಕಾಗಿ ಸಮಾಲೋಚನೆ ನಡೆಸಲಾಗುವುದು ಎಂದರು.
ದ ಸಂಸ ಕಾರ್ಯಕರ್ತರು ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ಸಮಸ್ಯೆಗಳ ಬಗ್ಗೆ ಚರ್ಚಿಸಿ ಸಭೆಗಳಲ್ಲಿ ಮುಂಬರುವ ನಿರ್ಧರಗಳನ್ನು ತೆಗೆದುಕೊಳ್ಳಬೇಕು. ಸಂಕಷ್ಟದಲ್ಲಿರುವವರು ಮತ್ತು ನೊಂದವರಿಗೆ ಬೆನ್ನೆಲುಬಾಗಿ ದ ಸಂಸ ಕಾರ್ಯನಿರ್ವಹಿಸುತ್ತಿದೆ. ಎಷ್ಟೇ ಪ್ರಭಾವಿ ಆದರೂ ಅವರ ವಿರುದ್ಧ ಕಾನೂನು ಬದ್ಧವಾಗಿ ತಕ್ಕ ಪಾಠ ಕಲಿಸಲು ನಾವು ಮುಂದಾಗಿದ್ದೇವೆ ಎಂದು ಸಭೆಯಲ್ಲಿ ಚರ್ಚಿಸಿದರು. ಇತ್ತೀಚೆಗೆ ಕೊಪ್ಪಳದಲ್ಲಿ ದಲಿತರ ಮೇಲೆ ನಡೆದಿದ್ದ ಪ್ರಕರಣಕ್ಕೆ ಬರೋಬರಿ ೯೮ ಜನರಿಗೆ ಜೀವಾವಧಿ ಶಿಕ್ಷೆ ಆಗಿರುವುದು ನಿಜವಾಗಿಯೂ ಖುಷಿಯ ಸಂಗತಿ. 10 ವರ್ಷಗಳ ಕಾಲ ನ್ಯಾಯಕ್ಕಾಗಿ ಹೋರಾಡಿದ ಅಲ್ಲಿನ ದಲಿತರಿಗೆ ನಾವು ಅಭಿನಂದನೆ ಸಲ್ಲಿಸಬೇಕು, ಜೊತೆಗೆ ಅಲ್ಲಿಯ ತಾಲೂಕು ಆಡಳಿತ ಜಿಲ್ಲಾಡಳಿತ ಮತ್ತು ನೊಂದವರ ಬೆನ್ನಿಗೆ ನಿಂತ ಎಲ್ಲರಿಗೂ ದಲಿತ ಸಂಘರ್ಷ ಸಮಿತಿಯಿಂದ ಭೀಮ ನಮನ ಸಲ್ಲಿಸುತ್ತೇವೆ ಎಂದು ಮಂಜು ಶಂಕರಪುರ ಮತ್ತು ಗಟ್ಟವಾಡಿ ಮಹೇಶ್ ಹೇಳಿದರು.
ಕಾರ್ಯಕ್ರಮದಲ್ಲಿ ಬೆಳಲೆ ಮಹೇಶ್, ಆಕಲ ರವಿ, ಸೋನಹಳ್ಳಿ ಮಹದೇವಸ್ವಾಮಿ, ಅಂಬಳೆ ಸಿದ್ದರಾಜು, ರಾಜೂರು ರತ್ನಯ್ಯ, ಏಚಗಳ್ಳಿ ಹೊಳೆಯಪ್ಪ, ಶಂಕರಪುರ ದರ್ಶನ್, ಹುಲ್ಲಹಳ್ಳಿ ಇದ್ದರು.