ರಾಂಪುರ, ವಡ್ಡರಪಾಳ್ಯ ಗ್ರಾಮಸ್ಥರಿಂದ ತಹಶೀಲ್ದಾರ್‌ಗೆ ಮನವಿ
1 min readಆಶ್ರಯ ಯೋಜನೆಯಡಿ ಹಕ್ಕಪತ್ರ ವಿತರಣೆಗೆ ಆಗ್ರಹ
ರಾಂಪುರ, ವಡ್ಡರಪಾಳ್ಯ ಗ್ರಾಮಸ್ಥರಿಂದ ತಹಶೀಲ್ದಾರ್‌ಗೆ ಮನವಿ
ದೊಡ್ಡಬಳ್ಳಾಪುರ ತಾಲ್ಲೂಕಿನ ದೊಡ್ಡಬೆಳವಂಗಲ ಹೋಬಳಿಯ ರಾಂಪುರ ಮತ್ತು ವಡ್ಡರಪಾಳ್ಯ ಗ್ರಾಮದಲ್ಲಿ ಈಗಾಗಲೇ 50 ವರ್ಷಗಳಿಂದ ವಾಸವಾಗಿರುವ ನೂರಾರು ಕುಟುಂಬಗಳ ಮನೆಗಳನ್ನ ಆಶ್ರಯ ಯೋಜನೆಯಡಿ ಗುರುತಿಸಿ ಹಕ್ಕುಪತ ವಿತರಣೆ ಮಾಡುವಂತೆ ತಹಶೀಲ್ದಾರ್ ವಿಭಾ ವಿದ್ಯಾ ರಾಠೋಡ್ ಅವರಿಗೆ ನಗರದ ತಾಲ್ಲೂಕು ಕಚೇರಿಯಲ್ಲಿ ಗ್ರಾಮಸ್ಥರು ಮನವಿ ಸಲ್ಲಿಸಿದರು.
ದೊಡ್ಡಬಳ್ಳಾಪುರ ತಾಲ್ಲೂಕಿನ ದೊಡ್ಡಬೆಳವಂಗಲ ಹೋಬಳಿಯ ರಾಂಪುರ ಮತ್ತು ವಡ್ಡರಪಾಳ್ಯ ಗ್ರಾಮದಲ್ಲಿ ಈಗಾಗಲೇ 50 ವರ್ಷಗಳಿಂದ ವಾಸವಾಗಿರುವ ನೂರಾರು ಕುಟುಂಬಗಳ ಮನೆಗಳನ್ನ ಆಶ್ರಯ ಯೋಜನೆಯಡಿ ಗುರುತಿಸಿ ಹಕ್ಕುಪತ ವಿತರಣೆ ಮಾಡುವಂತೆ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿ ಮಾತನಾಡಿದ ಚನ್ನೆಗೌಡ, ದೊಡ್ಡಬೆಳವಂಗಲ ಹೋಬಳಿ ವ್ಯಾಪ್ತಿಯ ರಾಂಪುರ ಮತ್ತು ವಡ್ಡರಪಾಳ್ಯ ಗ್ರಾಮಗಳಲ್ಲಿ ನೂರಾರು ಬಡ ಕುಟುಂಬಗಳು ಸುಮಾರು ೫೦ ವರ್ಷಗಳಿಂದಲೂ ಮನೆಗಳನ್ನ ನಿರ್ಮಿಸಿಕೊಂಡು ವಾಸವಾಗಿದ್ದಾರೆ ಎಂದರು.
ಮೂಲ ಸೌಕರ್ಯಗಳಾದ ರಸ್ತೆ, ಕುಡಿಯುವ ನೀರು ಮತ್ತು ವಿದ್ಯುತ್ ಸಂಪರ್ಕಗಳನ್ನ ಸ್ಥಳೀಯ ಗ್ರಾಮ ಪಂಚಾಯಿ0ದ ಅಭಿವೃದ್ಧಿ ಪಡಿಸಲಾಗಿದೆ. ವಾಸವಿರುವ ಮನೆಗಳಿಗೆ ಗ್ರಾಮ ಪಂಚಾಯತಿಯಿ0ದ ಖಾತೆ ಮಾಡಲಾಗಿದೆ. ಆದರೆ ಇದೀಗ 11ಎ ಖಾತೆ ಮಾಡಿಸಲು ಗ್ರಾ.ಪಂ ಕಚೇರಿಗೆ ಹೋದಾಗ ನೀವು ವಾಸ ಮಾಡುತ್ತಿರುವ ಜಾಗ ಪಂಚಾಯ್ತಿ ವ್ಯಾಪ್ತಿಗೆ ಬರುವುದಿಲ್ಲ ಎಂದು ಪಿಡಿಒ ತಿಳಿಸಿದ್ದಾರೆ. ಹೀಗಾಗಿ 50 ವರ್ಷಗಳಿಂದಲೂ ವಾಸವಿರುವ ಮನೆಗಳಿಗೆ ದಾಖಲಾತಿಗಳು ಇಲ್ಲದೆ ಪರದಾಡುವಂತಾಗಿದೆ. ಈ ಮನೆಗಳನ್ನ ಆಶ್ರಯ ಯೋಜನೆಯಡಿ ಗುರತಿಸಿ ಮನೆಗಳ ದಾಖಲೆಗಳನ್ನ ಮಾಡಿಕೊಡಬೇಕೆಂದು ಮನವಿ ಮಾಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್ ವಿಭಾ ವಿದ್ಯಾ ರಾಠೋಡ್, ಆಶ್ರಯ ಯೋಜನೆಯಡಿ ಕೈಗೊಳ್ಳಬೇಕಾದ ಕ್ರಮಗಳನ್ನ ಶೀಘ್ರವಾಗಿ ಮುಗಿಸುವಂತೆ ಸ್ಥಳೀಯ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ತಿಳಿಸಿದರು.