ಕೆಆರ್ ಬ್ಯಾಂಕ್ ಚುನಾವಣೆಯಲ್ಲಿ ಸತತ ೫ನೇ ಬಾರಿಗೆ ಗೆಲುವು
1 min readಕೆಆರ್ ಬ್ಯಾಂಕ್ ಚುನಾವಣೆಯಲ್ಲಿ ಸತತ ೫ನೇ ಬಾರಿಗೆ ಗೆಲುವು
ಬೆಂಕಿ ಮಹಾದೇವ ಸಮಾಧಿ ಬಳಿ ಆಶೀರ್ವಾದ ಪಡೆದ ಪ್ರತಿಧ್ವನಿ ಪ್ರಸಾದ್
ಮೈಸೂರಿನ ಕೃಷ್ಣರಾಜೇಂದ್ರ ಬ್ಯಾಂಕ್ ಚುನಾವಣೆಯಲ್ಲಿ ಸತತವಾಗಿ ಐದನೇ ಬಾರಿ ಗೆಲುವು ಪಡೆದ ಕರ್ನಾಟಕ ಪ್ರತಿಧ್ವನಿ ವೇದಿಕೆ ರಾಜ್ಯಾಧ್ಯಕ್ಷ ಪ್ರಸಾದ್ ನಂಜನಗೂಡು ಸಮೀಪದ ಗಾಂಧಿ ಗ್ರಾಮದ ಬೆಂಕಿ ಮಹದೇವ ಅವರ ಜಮೀನಿನಲ್ಲಿರುವ ಸಮಾಧಿ ಬಳಿ ತೆರಳಿ ಪುಷ್ಪ ನಮನ ಸಲ್ಲಿಸಿ ಆಶೀರ್ವಾದ ಪಡೆದರು.
ಬೆಂಕಿ ಮಹಾದೇವ ಅವರ ಅಭಿಮಾನಿಯಾಗಿರುವ ಪ್ರತಿಧ್ವನಿ ಪ್ರಸಾದ್ ಮೊದಲು ನಂಜನಗೂಡಿನಲ್ಲಿರುವ ಬೆಂಕಿ ಮಹಾದೇವು ಮನೆಗೆ ತೆರಳಿ ಅವರ ಪತ್ನಿ ಆಶೀರ್ವಾದ ಪಡೆದು, ನಂತರ ಸನ್ಮಾನ ಮಾಡಿ ಮಾತನಾಡಿ, ಹಿರಿಯ ಮುತ್ಸದ್ದಿ , ನೇರ, ನಿಷ್ಠರವಾದಿ ಬೆಂಕಿ ಮಹಾದೇವು ಅವರು ಸಾವಿರಾರು ಯುವಕರಿಗೆ ಮಾರ್ಗದರ್ಶನ ನೀಡಿದ್ದರು. ಇವರ ಆಶೀರ್ವಾದದೊಂದಿಗೆ ಕರ್ನಾಟಕ ಪ್ರತಿಧ್ವನಿ ವೇದಿಕೆ ಪ್ರಾರಂಭಗೊ0ಡಿತು. ಇವರ ಅಭಿಮಾನಿಯಾಗಿ ನಾನು ಇಂದು ಐದನೇ ಬಾರಿ ಚುನಾವಣೆಯಲ್ಲಿ ಗೆದ್ದು ಬಂದಿದ್ದೇನೆ ಎಂದರು.
ವಿಶೇಷವಾಗಿ ನಂಜನಗೂಡಿನ ಪ್ರತಿಧ್ವನಿ ವೇದಿಕೆಯೊಂದಿಗೆ ಅವಿನಾಭವ ಸಂಬ0ಧವಿದ್ದು, ಮಹದೇವ ಅವರ ಬೆಂಬಲದೊ0ದಿಗೆ ಕರ್ನಾಟಕ ಪ್ರತಿಧ್ವನಿ ವೇದಿಕೆಯನ್ನು ಸ್ಥಾಪನೆ ಮಾಡಲಾಗಿತ್ತು. ಇಂದು ವೇದಿಕೆ ಯಶಸ್ವಿಯಾಗಿ ನಡೆಯುತ್ತಿದೆ. ಮಹದೇವು ಅವರ ಆಶೀರ್ವಾದ ಸದಾಕಾಲ ಇರಲಿ ಎಂದು ಸಮಾಧಿ ಸ್ಥಳಕ್ಕೆ ಬಂದು ಆಶೀರ್ವಾದ ಪಡೆದಿರುವುದಾಗಿ ತಿಳಿಸಿದರು. ಮೈಸೂರು ಜಿಲ್ಲಾಧ್ಯಕ್ಷ ತ್ರಿನೇಶ್ ಮಾತನಾಡಿ, ರಾಜ್ಯಾಧ್ಯಕ್ಷ ಪ್ರಸಾದ್ ಕೆ ಆರ್ ಬ್ಯಾಂಕ್ ಚುನಾವಣೆಯಲ್ಲಿ ಅಭುತಪೂರ್ವ ಯಶಸ್ಸು ಸಾಧಿಸಿದ್ದಾರೆ. ಧೀಮಂತ ನಾಯಕ ಮಹಾದೇವು ಅವರನ್ನು ಪ್ರಸಾದ್ ಸದಾ ಪೂಜಿಸುತ್ತಿದ್ದು, ಪ್ರಸಾದ್ ಅವರಿಗೆ ಇನ್ನು ಹೆಚ್ಚಿನ ಅಧಿಕಾರ ಸಿಗಲಿ ಎಂದು ಆಶಿಸಿದರು.
ಈ ಸಂದರ್ಭದಲ್ಲಿ ಪ್ರತಿಧ್ವನಿ ವೇದಿಕೆ ನಗರ ಅಧ್ಯಕ್ಷ ಆನಂದ್, ನಗರಸಭ ಉಪಾಧ್ಯಕ್ಷ ದೇವರಾಜು, ಮಂಗಳ ಪ್ರಕಾಶ್, ವಾಸು, ಲೋಕೇಶ್, ಎಲ್ ಐ ಸಿ ಮಹದೇವಸ್ವಾಮಿ, ಗೌಡಿಕೆ ಪುಟ್ಟಸಿದ್ದಪ್ಪ, ದೇವೇಗೌಡನಪುರ ಪ್ರಕಾಶ್, ರೇಚಣ್ಣ ಮಂಜು, ರಾಜಶೇಖರ್, ಕೇಬಲ್ ಅರುಣ್ ಇದ್ದರು.