ಚಿಕ್ಕಬಳ್ಳಾಪುರದಲ್ಲಿ ಸೌತೆಕಾಯಿ ಬೆಳೆದ ರೈತರ ಕಂಗಾಲು
1 min readಮಳೆಯಿಂದ ಸೌತೆಕಾಯಿ ಬೆಲೆಯಲ್ಲೂ ಭಾರೀ ಇಳಿಕೆ
ಚಿಕ್ಕಬಳ್ಳಾಪುರದಲ್ಲಿ ಸೌತೆಕಾಯಿ ಬೆಳೆದ ರೈತರ ಕಂಗಾಲು
ಮಾರುಕಟ್ಟೆಯಲ್ಲಿ ಸೌತೆಕಾಯಿ ಖರೀದಿ ಮಾಡದ ವರ್ತಕರು
ಮೂಟೆ ಸೌತೆಕಾಯಿ ಬರೀ 100 ರೂಪಾಯಿಗೆ ಮಾರಾಟ
ಮಳೆಯಿಂದ ಸೌತೆಕಾಯಿ ತೋಟಗಳಲ್ಲಿ ಅಧಿಕ ಇಳುವರಿ
ಮಳೆ ನಿಂತರೂ ಮಳೆಯಿಂದಾದ ಅವಾಂತರಗಳು ಮಾತ್ರ ಇನ್ನೂ ನಿಂತಿಲ್ಲ. ಹಗಲು ರಾತ್ರಿ ಎನ್ನದೆ ರೈತರು ಕಷ್ಟಪಟ್ಟು ಹೂವು, ಹಣ್ಣು, ತರಕಾರಿ ಬೆಳೆದ್ರೆ ಇತ್ತೀಚಿಗೆ ಸುರಿದ ಭಾರೀ ಮಳೆಯಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದಾಂತಾಗಿದೆ. ಸಾಲ ಮಾಡಿ ಲಕ್ಷಾಂತರ ರೂಪಾಯಿ ಬಂಡವಾಳ ಹೂಡಿ ಬೆಳೆದ ಸೌತೆಕಾಯಿ ಆರು ಕಾಸು ಮೂರು ಕಾಸಿಗೆ ಬಿಕರಿಯಾಗುತ್ತಿದ್ದು, ಅನ್ನದಾತ ಕಣ್ಣೀರುಡುವಂತಾಗಿದೆ.
ಹೀಗೆ ಮಾರುಕಟ್ಟೆಯಲ್ಲೆ ರಾಶಿ ರಾಶಿಯಾಗಿ ಲೋಡ್ ಗಟ್ಟಲೇ ಇರುವ ಸೌತೆಕಾಯಿ ಮೂಟೆಗಳು, ಸೌತೆಕಾಯಿ ಆಕ್ಷನ್ ಕರೀತಿರೋ ವರ್ತಕರು, ಒಂದು ಮೂಟೆ ಸೌತೆಕಾಯಿ ಕೇವಲ 100 ರಿಂದ 150 ರೂಪಾಯಿಗೆ ಮಾರಾಟ ಆಗುತ್ತಿದೆ. ಚಿಕ್ಕಬಳ್ಳಾಪುರ ಎಪಿಎಂಸಿ ತರಕಾರಿ ಮಾರುಕಟ್ಟೆಯಲ್ಲಿ ಈ ದೃಶ್ಯ ಎದುರಾಗಿತ್ತು. ಚಿಕ್ಕಬಳ್ಳಾಪುರ ಜಿಲ್ಲೆಯ ರೈತರು ಬಂಗಾರದ ಬೆಳೆ ತೆಗೀತಾರೆ. ಹೂ ಹಣ್ಣು ತರಕಾರಿ ಎಲ್ಲವನ್ನ ಬೆಳೆಯುವ ರೈತರು ಈ ಬಾರಿ ಯಥೇಚ್ಛವಾಗಿ ಸೌತೆಕಾಯಿ ಬೆಳೆದಿದ್ದಾರೆ. ನಿರಂತರ ಮಳೆಯಿಂದ ಸೌತೆಕಾಯಿ ಇಳುವರಿಯೂ ಹೆಚ್ಚಾಗಿದ್ದು, ಮಾರುಕಟ್ಟೆಗೆ ಹೆಚ್ಚಿನ ಸೌತೆಕಾಯಿ ಬಂದಿದೆ. ಇದ್ರಿಂದ ಒಂದು ಮೂಟೆ ಸೌತೆಕಾಯಿ ಕೇವಲ 100 ರಿಂದ 150 ರೂಪಾಯಿಗೆ ಬಿಕರಿಯಾಗುತ್ತಿದ್ದು ಸೌತೆಕಾಯಿ ಬೆಳೆದ ರೈತರು ಕೈ ಕೈ ಹಿಸುಕಿಕೊಳ್ಳುವಂತಾಗಿದೆ.
ಅತಿಯಾದ ಮಳೆ ಕಾರಣ ಒಂದು ಕಡೆ ಸೌತೆಕಾಯಿ ಬಂಪರ್ ಇಳುವರಿ ಬಂದಿದೆ. ಮತ್ತೊಂದು ಕಡೆ ಮಳೆ ಹೊಡೆತಕ್ಕೆ ಹೊಸ ಹೂವಿನ ಮೊಗ್ಗು ಎಲ್ಲವೂ ಉದುರಿ ಮುಂದೆ ಫಸಲು ಕುಂಠಿತವಾಗಲಿದೆ. ಮಳೆಯಿಂದ ಸೌತೆಕಾಯಿ ಬೆಳೆಗೆ ರೋಗ ಬಾಧೆ ಆವರಿಸುತ್ತಿದ್ದು, ಸಾವಿರಾರು ರೂಪಾಯಿ ಕ್ರೀಮಿನಾಶಕಗಳಿಗೆ ಖರ್ಚು ಮಾಡಬೇಕಿದೆ. ಇದ್ರಿಂದ ಕಷ್ಟಪಟ್ಟು ಬೆಳೆದ ಬೆಳೆಗೆ ಬೆಲೆ ಇಲ್ಲದೆ ಅನ್ನದಾತ ಆತಂಕಕ್ಕೀಡಾಗುವ0ತಾಗಿದೆ.
ಓಟ್ನಲ್ಲಿ ಮಳೆ ಬಂದರೂ ಕಷ್ಟ, ಬರಿದಿದ್ದರೂ ಕಷ್ಟ ಅನ್ನೋ ಹಾಗೆ ರೈತರಿಗೆ ನಷ್ಟ ಮಾತ್ರ ತಪ್ಪಿಲ್ಲ ಎಂಬ0ತಾಗಿದೆ. ಸಾಲ ಮಾಡಿ ಬೆಳೆದ ಬೆಳೆ ಕೇವಲ ಆರು ಕಾಸು ಊರು ಕಾಸಿಗೆ ಬಿಕರಿಯಾಗುತ್ತಿದ್ದು, ಅನ್ನದಾತನ ನೆರವಿಗೆ ಸರ್ಕಾರ ಧಾವಿಸುವಂತೆ ರೈತರು ಆಗ್ರಹಿಸಿದ್ದಾರೆ.