ಸಸ್ಯ ಸಂರಕ್ಷಣಾ ಔಷಧಿಗಳ ಬಳಕೆ ತರಬೇತಿ
1 min readಸಾವಯವ ಕೃಷಿಗೆ ಆಸಕ್ತಿ ತೋರಲು ಮನವಿ
ಸಸ್ಯ ಸಂರಕ್ಷಣಾ ಔಷಧಿಗಳ ಬಳಕೆ ತರಬೇತಿ
ಇತ್ತೀಚಿನ ದಿನಗಳಲ್ಲಿ ಕೃಷಿ ಮತ್ತು ತೋಟಗಾರಿಕೆ ಬೆಳೆಗಳಲ್ಲಿ ಬಳಸುತ್ತಿರುವ ಕೀಟನಾಶಕಗಳು ಹೆಚ್ಚಾಗಿದ್ದು, ಇದರ ಪರಿಣಾಮ ಪ್ರಕೃತಿಯ ಮೇಲೆ ಬೀರುತ್ತಿದ್ದು, ಇದರಿಂದ ನಾವು ಆಹಾರ ಸೇವನೆ ಮಾಡಲಾಗುತ್ತದೆ ಎಂದು ಉಪ ಕೃಷಿ ನಿರ್ದೇಶಕ ದೀಪಾಶ್ರೀ ಆತಂಕ ವ್ಯಕ್ತಪಡಿಸಿದರು.
ಗುಡಿಬಂಡೆ ತಾಲೂಕಿನ ದಪ್ಪರ್ತಿ ಸರಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ 2024-2025ನೇ ಸಾಲಿನ ಸಸ್ಯ ಸಂರಕ್ಷಣಾ ಯೋಜನೆಯಡಿ ಸಸ್ಯ ಸಂರಕ್ಷಣಾ ಔಷಧಿಗಳ ಶಿಪರಸ್ಸು ಮತ್ತು ಸುರಕ್ಷಿತ ಬಳಕೆ ತರಬೇತಿ ವಿಶೇಷ ಅಂದೋಲನದಲ್ಲಿ ಮಾತನಾಡಿದ ಉಪ ಕೃಷಿ ನಿರ್ದೇಶಕ ದೀಪಾಶ್ರೀ, ರೈತರು ವಿಜ್ಞಾನಿಗಳ ಸಲಹೆ ಹಾಗೂ ಇಲಾಖಾ ಅಧಿಕಾರಿಗಳ ಮಾರ್ಗದರ್ಶನದಂತೆ ರೈತರು ಕೀಟನಾಶಕಗಳನ್ನು ಬಳಸಬೇಕು ಎಂದರು.
ವಿಜ್ಞಾನಿ ಡಾ. ಸ್ವಾತಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮುಸುಕಿನ ಜೋಳ, ನೆಲಗಡಲೆ. ತೊಗರಿ ಬೆಳೆಗಳಲ್ಲಿ ಹೆಚ್ಚಾಗಿ ಕೀಟಬಾದೆ ಕಂಡುಬ0ದಿದ್ದು, ಅವುಗಳ ಹತೋಟಿ ಕ್ರಮಗಳ ಬಗ್ಗೆ ವಿವರವಾಗಿ ತರಬೇತಿ ನೀಡಿ, ಇತ್ತೀಚಿಗೆ ಬೆಳೆಗಳಲ್ಲಿ ರೈತರಿಗೆ ಸೈನಿಕ ಹುಳುವಿನ ಬಾದೆ ಹೆಚ್ಚಾಗಿರುವುದರಿಂದ ಸಮಗ್ರ ಹತೋಟಿ ಕೈಗೊಳ್ಳಲು ತಿಳಿಸಿದರು. ಸಾವಯವ ಕೃಷಿಕ ಲಕ್ಷ್ಮೀನಾರಾಯಣರೆಡ್ಡಿ ಮಾತನಾಡಿ, ಸಮಗ್ರ ಕೃಷಿಯಿಂದ ರೈತರ ಆದಾಯ ದ್ವಿಗುಣವಾಗಲಿದ್ದು, ಸಾವಯವ ಕೃಷಿಯ ಬಗ್ಗೆ ಎಲ್ಲಾ ರೈತರು ಅರಿಯಬೇಕು ಎಂದರು.
ಈ ಸಂದರ್ಭದಲ್ಲಿ ತಾಲೂಕು ಸಹಾಯಕ ಕೃಷಿ ನಿರ್ದೇಶಕ ಕೇಶವರೆಡ್ಡಿ, ಕೃಷಿಕ ಸಮಾಜದ ಕಾರ್ಯದರ್ಶಿ ರಾಜಗೋಪಾಲ್, ರೈತ ಸಂಘದ ನಾರಾಯಣಸ್ವಾಮಿ, ಕೃಷಿ ಅಧಿಕಾರಿಗಳಾದ ಶಂಕರಯ್ಯ, ವರದರಾಜು, ರಾಘವೇಂದ್ರ ಇದ್ದರು.