ಮಳೆಹಾನಿ ಪ್ರದೇಶಕ್ಕೆ ಶಾಸಕರ ಭೇಟಿ, ಪರಿಶೀಲನೆ
1 min readಮಳೆಹಾನಿ ಪ್ರದೇಶಕ್ಕೆ ಶಾಸಕರ ಭೇಟಿ, ಪರಿಶೀಲನೆ
ಶಾಸಕ ಪುಟ್ಟಸ್ವಾಮಿಗೌಡರಿಂದ ಪರಿಹಾರ ಘೋಷಣೆ
ಕಳೆದ ಒಂದು ವಾರದಿಂದ ಸುರಿದ ಹಿಂಗಾರು ಮಳೆಯಿಂದ ತಾಲ್ಲೂಕಿನಲ್ಲಿ ಅಪಾರ ಬೆಳೆ ಹಾನಿಯಾಗಿದೆ. ಅಲ್ಲದೆ ಮನೆಗಳ ಕುಸಿತವಾಗಿ ಲಕ್ಷಾಂತರ ರೂ ನಷ್ಟವಾಗಿದೆ, ಸ್ಥಳಕ್ಕೆ ಶಾಸಕ ಕೆ.ಎಚ್. ಪುಟ್ಟಸ್ವಾಮಿಗೌಡ ಭೇಟಿ ನೀಡಿ ಸಂತ್ರಸ್ತರಿಗೆ ಸ್ವಾಂತನ ಹೇಳಿದರು.
ಗೌರಿಬಿದನೂರು ತಾಲೂಕಿನ ಕಸಬಾ ಹೋಬಳಿಯ ಕಾದಲವೇಣಿ, ಹೊಸೂರು, ಗೆದರೆ ಕಾಚಮಾಚೇನಹಳ್ಳಿ ಮುಂತಾದ ಹಳ್ಳಿಗಳಿಗೆ `ಭೇಟಿ ನೀಡಿದ ಶಾಸಕ ಪುಟ್ಟಸ್ವಾಮಿಗೌಡರು ಮಾತನಾಡಿ, ಈ ಬಾರಿ ಹಿಂಗಾರು ಮಳೆ ಅರ್ಭಟ ಹೆಚ್ಚಾಗಿ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. ಜೊತೆಗೆ ಬೆಳೆ, ಮನೆಗಳ ಕುಸಿತ ಆಗಿದೆ, ತಾಲ್ಲೂಕಿನಲ್ಲಿ ಸುಮಾರು 38 ಮನೆಗಳಿಗೆ ಹಾನಿಯಾಗಿದ್ದು, ಬೆಳೆಗಳೂ ಹಾಳಾಗಿವೆ, ಸಂಪೂರ್ಣ ಮನೆ ಕುಸಿತಕ್ಕೆ 1.20 ಲಕ್ಷರೂ, ಅಲ್ಪಸ್ವಲ್ಪ ಹಾನಿ ಅಗಿದ್ದರೆ ೬,೫೦೦ ರೂ ಸರ್ಕಾರದಿಂದ ಸಹಾಯ `ಧನ ನೀಡಲಾಗುವುದು. ರೈತರಿಗೆ ಒಂದು ಹೆಕ್ಟೇರ್‌ಗೆ 13 ಸಾವಿರ ರೂ ನೇರವಾಗಿ ಅವರ ಖಾತೆಗೆ ಜಮೆ ಮಾಡಲಾಗುವುದು ಎಂದರು.
ತಹಸೀಲ್ದಾರ್ ಮಹೇಶ್ ಪತ್ರಿ ಮಾತನಾಡಿ, ಹಿಂಗಾರು ಮಳೆಯಿಂದ ತಾಲ್ಲೂಕಿನಲ್ಲಿ ಅಪಾರ ನಷ್ಟ ಆಗಿದೆ, ಇದರ ಸಮೀಕ್ಷೆಗೆ ಕೃಷಿ ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಬೇಟಿ ನೀಡಿ ಮಾಹಿತಿ ಸರ್ಕಾರಕ್ಕೆ ನೀಡಲು ಮುಂದಾಗಿದ್ದಾರೆ ಎಂದರು. ಇಒ ಹೊನ್ನಯ್ಯ, ಕಂದಾಯ ಅಧಿಕಾರಿ ಅಮರನಾರಾಯಣ್, ಸಿ,ಮೋಹನ್, ರವಿಕುಮಾರ್, ಕೃಷಿ ಅಧಿಕಾರಿ ಮೋಹನ್ ಇದ್ದರು.