ರೈತರಿಗೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ರವಿ ಕಿವಿಮಾತು
1 min readಮಣ್ಣು, ನೀರನ್ನು ಸಂರಕ್ಷಿಸಲು ಮನವಿ
ರೈತರಿಗೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ರವಿ ಕಿವಿಮಾತು
ರೈತರು ಮಣ್ಣು ಮತ್ತು ನೀರನ್ನು ಸಂರಕ್ಷಣೆ ಮಾಡಿ ಉಳಿಸಬೇಕಿದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ರವಿ ಹೇಳಿದರು. ನಂಜನಗೂಡು ನಗರದ ಕೃಷಿ ಇಲಾಖೆ ಕಛೇರಿಯಲ್ಲಿ ಮೈರಾಡ ಕಾವೇರಿ ಪ್ರಾದೇಶಿಕ ಸಂಸ್ಥೆ ಆಯೋಜಿಸಿದ್ದ ಐಟಿಸಿ ಬಂಗಾರ `ಭವಿಷ್ಯ ಕಡೆಗೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ರೈತರು ಮಣ್ಣು ಮತ್ತು ನೀರನ್ನು ಸಂರಕ್ಷಣೆ ಮಾಡಿ ಉಳಿಸಬೇಕಿದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ರವಿ ಹೇಳಿದರು. ಐಟಿಸಿ ಬಂಗಾರ `ಭವಿಷ್ಯ ಕಡೆಗೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮೈರಾಡ ಸಂಸ್ಥೆ ತಮ್ಮದೇ ಆದ ಕೆಲಸ ಮಾಡುತ್ತಿದ್ದು, ತಾಲ್ಲೂಕಿನಲ್ಲಿ ಮಣ್ಣು ಮತ್ತು ನೀರು ಸಂರಕ್ಷಣೆ ಮಾಡಲು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಸರ್ಕಾರದ ಜೊತೆಗೂಡಿ ಕೆಲಸ ಮಾಡುತ್ತಿರುವ ಮೈರಾಡ ಸಂಸ್ಥೆ ಬಯೋಸಿಟಿ ಕಾರ್ಯಕ್ರಮವನ್ನು ಹಳ್ಳಿಗಳಿಗೆ ವಿಸ್ತರಿಸಿದ್ದಾರೆ. ಅರಣ್ಯ ಇಲಾಖೆ, ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿಯ ಸಹಯೋಗದಲ್ಲಿ ಸುಮಾರು 25ಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ನೀgರು ಉಳಿಸಲು ಬದು ನಿರ್ಮಾಣ, ಕೃಷಿಹೊಂಡ ನಿರ್ಮಾಣ, ಚೆಕ್ ಡ್ಯಾಂ ಗಳ ನಿರ್ಮಾಣ, ಕಲ್ಲು ತಡೆಗೊಡೆ ನಿರ್ಮಾಣ, ಹಳೆ ಬಾವಿಗಳ ಪುನರ್ ಚೇತನ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ರೈತರು ಫಲವತ್ತಾದ ಮಣ್ಣನ್ನು ಮಾರಾಟ ಮಾಡುತ್ತಿದ್ದಾರೆ. ಮಣ್ಣು ಅತ್ಯಂತ ಸಂಪನ್ಮೂಲ ಸಂಪತ್ತಾಗಿದ್ದು, ಒಂದು ಅಡಿ ಮಣ್ಣು ಉತ್ಪತ್ತಿಯಾಗಲು 1 ಸಾವಿರ ದಿನಗಳ ಕಾಲಾವಕಾಶಬೇಕು. ಹಾಗಾಗಿ ರೈತರು ಮಣ್ಣಿಗೆ ಹೆಚ್ಚು ಪ್ರಾಮುಖ್ಯತೆ ನೀಡಬೇಕು. ನೀರನ್ನು ಪೋಲು ಮಾಡದೆ ಜೀವ ಜಲವನ್ನು ಉಳಿಸಿಕೊಳ್ಳಬೇಕು ಎಂದು ರೈತರಿಗೆ ತಿಳಿಸಿದರು.
ಈ ಸಂರ್ಭದಲ್ಲಿ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಚಂದ್ರು, ಮೈರಾಡ ಸಂಸ್ಥೆಯ ಅಶ್ರ, ಕೃಷಿ ಕೇಂದ್ರದ ಚಾಮರಾಜ, ಅರಣ್ಯ ಇಲಾಖೆಯ ಮದನ್, ಮನೋಜ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಮಂಜುನಾಥ್, ಶಬಾನ, ಗೀತಾ, ಗಣೇಶ್ ಇದ್ದರು.