ಸಂಸದರ ಬಾಗಿನ ಅರ್ಪಣೆ ವೇಳೆ ಹೆಜ್ಜೇನು ಕಡಿತ ಪ್ರಕರಣ
1 min readಸಂಸದರ ಬಾಗಿನ ಅರ್ಪಣೆ ವೇಳೆ ಹೆಜ್ಜೇನು ಕಡಿತ ಪ್ರಕರಣ
ಕಿಡಿಗೇಡಿಗಳ ಕೃತ್ಯ ಎಸಗಿರುವ ಶಂಕೆ ವ್ಯಕ್ತಪಡಿಸಿದ ಉಪಾಧ್ಯಕ್ಷ
ಹೆಜ್ಜೇನು ಕಡಿತದ ವಿಚಾರ ತನಿಖೆಗೆ ಒತ್ತಾಯಿಸಿದ ನಾಗರಾಜ್
ಚಿಕ್ಕಬಳ್ಳಾಪುರ ಮತ್ತು ದೊಡ್ಡಬಳ್ಳಾಪುರ ನಗರಗಳಿಗೆ ಜೀವಜಲ ಪೂರೈಸುತ್ತಿರುವ ಜಕ್ಕಲಮಡಗು ಜಲಾಶಯಕ್ಕೆ ಸಂಸದರ ಬಾಗಿನ ಅರ್ಪಿಸುವ ವೇಳೆ ಹೆಜ್ಜೇನು ಕಡಿದ ವಿಚಾರಕ್ಕೆ ಸಂಬ0ಧಿಸಿ ನಗರಸಭೆ ಅಧ್ಯಕ್ಷ ನಾಗರಾಜ್ ಶಂಕೆ ವ್ಯಕ್ತಪಡಿಸಿದ್ದಾರೆ. ಹೆಜ್ಜೇನು ಕಡಿಯಲು ಕಿಡಿಗೇಡಿಗಳ ಕೃತ್ಯ ಇರಬಹುದಾಗಿದ್ದು, ಅಂತಹವರಿಗೆ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.
ಹೌದು, ಸಂಸದ ಡಾ.ಕೆ. ಸುಧಾಕರ್ ಅವರು ಹೆಜ್ಜೇನು ಕಡಿತದಿಂದ ತೃಣ ಮಾತ್ರದಲ್ಲಿ ಬಚಾವಾಗಿದ್ದಾರೆ. ಸುಮಾರು 20ಕ್ಕೂ ಹೆಚ್ಚು ಮಂದಿಗೆ ಹೆಜ್ಜೇನು ಕಡಿದಿದ್ದು, ಇಬ್ಬರ ಪರಿಸ್ಥಿತಿಯಂತೂ ಗಂಭೀರವಾಗಿದೆ. ಇನ್ನು ನಗರಸಭೆ ಅಧ್ಯಕ್ಷ ಅವರ ತಂದೆಗೆ ಸುಮಾರು ೫೦ಕ್ಕೂ ಹೆಚ್ಚು ಜೇನುಹುಳ ಚುಚ್ಚಿದ್ದು, ಅವರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಎಲ್ಲ ಅವಾಂತರಕ್ಕೆ ಕಾರಣ ಕಿಡಿಗೇಡಿಗಳ ಕೃತ್ಯ ಎನ್ನೋದು ನಗರಭೆ ಉಪಾಧ್ಯಕ್ಷ ನಾಗರಾಜ್ ಅವರ ಶಂಕೆ.
ಇಂದು ನಗರಸಭೆ ಉಪಾಧ್ಯಕ್ಷ ನಾಗರಾಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರನ್ನು ಭೇಟಿ ಮಾಡಿ, ಆರೋಗ್ಯ ವಿಚಾರಿಸಿದ ನಂತರ ಮಾಧ್ಯಮದೊಂದಿಗೆ ಮಾತನಾಡಿ, ಬಾಗಿನ ಅರ್ಪಣೆ ವೇಳೆ ಜೇನು ಅವಾಂತರ ಸೃಷ್ಟಿಯಾಗಿದ್ದು ವಿಷಾಧನೀಯ, ಬಾಗಿನ ಅರ್ಪಣೆ ಮಾಡುವ ಸಂದರ್ಭದಲ್ಲಿಯೇ ಜೇನುಹುಳ ಎದ್ದು 20ಕ್ಕೂ ಹೆಚ್ಚು ಮಂದಿಯನ್ನು ಕಡಿದು ಹಲವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರೋದು ನೋವಿನ ಸಂಗತಿ ಎಂದರು.
ಜೇನುಹುಳ ಎದ್ದ ವೇಳೆ 100ಕ್ಕೂ ಹೆಚ್ಚು ಮಂದಿ ಸ್ಥಳದಲ್ಲಿದ್ದರು, ಈ ಬಗ್ಗೆ ಸೂಕ್ತ ತನಿಖೆ ಆಗಬೇಕಿದೆ, ವಿಘ್ನೇಶ್ವರನ ಪೂಜೆ ಮುಗಿಸಿ, ಪಂಪ್‌ಹೌಸ್ ಬಳಿ ಬಂದಾಗ ಜೇನುಹುಳ ಎದ್ದು ಕಚ್ಚಲು ಆರಂಭಿಸಿದವು. ಈ ವೇಳೆ ಯಾರಾದರೂ ಜೇನುಗೂಡುನಲ್ಲಿದ್ದ ಜೇನುಹುಳಗಳಿಗೆ ಕಿರಿಕಿರಿಯಾಗುವ ರೀತಿಯಲ್ಲಿ ಏನಾದರೂ ಮಾಡಿದರೆ ಎಂಬ ಸಂಶಯ ಇದ್ದು, ಈ ಬಗ್ಗೆ ತನಿಖೆ ನಡೆಯಬೇಕು ಎಂದು ಆಗ್ರಹಿಸಿದರು.