ಚಿಕ್ಕಬಳ್ಳಾಪುರ ನಗರಸಭೆಗೆ ನೂತನ ಪೌರಾಯುಕ್ತರು
1 min readಚಿಕ್ಕಬಳ್ಳಾಪುರ ನಗರಸಭೆಗೆ ನೂತನ ಪೌರಾಯುಕ್ತರು
ಕಳೆದ ಒಂದೂವರೆ ತಿಂಗಳಿನಿ0ದ ಇಲ್ಲದ ಆಯುಕ್ತರು
ಮನ್ಸೂರ್ ಆಲಿ ನೂತನ ಆಯುಕ್ತರಾಗಿ ಪದಗ್ರಹಣ
ನಾಗರಿಕರು, ಸದಸ್ಯರ ಸಹಕಾರದಿಂದ ಕರ್ತವ್ಯದ ಭರವಸೆ
ಕಳೆದ ಒಂದೂವರೆ ತಿಂಗಳಿನಿ0ದ ಚಿಕ್ಕಬಳ್ಳಾಪುರ ನಗರ¸ಭೆಗೆ ಆಯುಕ್ತರಿಲ್ಲದೆ ತೀವ್ರ ಸಂಕಷ್ಟ ಎದುರಾಗಿದ್ದು, ಇದೀಗ ಚಿಕ್ಕಬಳ್ಳಾಪುರ ನಗರಸಭೆಭೆಗೆ ನೂತನ ಆಯುಕ್ತರ ಆಗಮನವಾಗಿದೆ. ಆ ಮೂಲಕ ಚಿಕ್ಕಬಳ್ಳಾಪುರ ನಗರಸಭೆಯಲ್ಲಿ ನೆನೆಗುದಿಗೆ ಬಿದ್ದಿದ್ದ ಕೆಲಸಗಳಿಗೆ ಮುಕ್ತಿ ದೊರಕಿಸಿಕೊಡಲು ಶ್ರಮಿಸುವುದಾಗಿ ನೂತನ ಆಯುಕ್ತ ಮನ್ಸೂರ್ ಆಲಿ ಹೇಳಿದ್ದಾರೆ.
ಚಿಕ್ಕಬಳ್ಳಾಪುರ ನಗರಸಭೆಗೆ ಕಳೆದ ಒಂದೂವರೆ ತಿಂಗಳಿಗೂ ಹೆಚ್ಚು ಕಾಲದಿಂದ ಪೌರಾಯುಕ್ತರಿಲ್ಲದೆ ತೀವ್ರ ಸಂಕಷ್ಟ ಎದುರಿಸುವ ಸ್ಥಿತಿ ನಗರಸಭೆಗೆ ಎದುರಾಗಿತ್ತು. ಇದಕ್ಕೆ ಕಾರಣ ಈ ಹಿಂದೆ ಆಯುಕ್ತರಾಗಿದ್ದ ಮಂಜುನಾಥ್ ಅವರು ಆ ಹುದ್ದೆಗೆ ಅರ್ಹರಲ್ಲ ಎಂದು ಕೋರ್ಟ್ ಹೇಳಿದ ಪರಿಣಾಮ ಅವರು ಹುದ್ದೆಯಿಂದ ತೆರುವಾಗಿದ್ದರು. ಅದರ ನಂತರ ಪ್ರಬಾರಿಯಾಗಿ ಉಮಾಶಂಕರ್ ಅವರು ಕರ್ತವ್ಯ ನಿರ್ವಹಿಸಿದ್ದು, ನಂತರ ಚಿಕ್ಕಬಳ್ಳಾಪುರ ಉಪ ವಿಭಾಗಾಧಿಕಾರಿಯವರನ್ನು ಪ್ರಬಾರಿ ಆಯುಕ್ತರಾಗಿ ನೇಮಿಸಲಾಗಿತ್ತು.
ಉಪ ವಿಭಾಗಾಧಿಕಾರಿಗಳು ನಗರಸಭೆ ಪೌರಾಯುಕ್ತರಾಗಿ ಪ್ರ`ಭಾರಿಯಾಗಿ ನಿಯೋಜನೆಗೊಂಡ ದಿನದಿಂದಲೂ ಅವರು ನಗರಸಭೆ ಕೆಲಸಗಳತ್ತ ಗಮನ ಹರಿಸಿರಲಿಲ್ಲ. ಇದರಿಂದ ನಗರಸಭೆ ಕೆಲಸಗಳಿಗೆ ತೊಂದರೆಯಾಗಿತ್ತು. ಆದರೆ ಇಂದು ನೂತನ ಪೌರಾಯುಕ್ತರು ಚಿಕ್ಕಬಳ್ಳಾಪುರ ನಗರಸಭೆಭೆಗೆ ಆಗಮಿಸಿದ್ದಾರೆ. ಇದರಿಂದಾಗಿ ಪ್ರಬಾರ ಸಮಸ್ಯೆ ಕೊನೆಗೊಂಡಿದ್ದು, ಇನ್ನು ಮುಂದೆ ಪೂರ್ಣಾವಧಿ ಪೌರಾಯುಕ್ತರು ನಗರಸಭೆಯಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ.
ನೂತನ ಆಯುಕ್ತ ಮನ್ಸೂರ್ ಆಲಿಯವರು ಇಂದು ಚಿಕ್ಕಬಳ್ಳಾಪುರ ನಗರಸಭೆಯಲ್ಲಿ ವರದಿ ಮಾಡಿಕೊಂಡಿದ್ದು, ರಾಜಧಾನಿ ಬೆಂಗಳೂರಿಗೆ ಅತಿ ಸಮೀಪದಲ್ಲಿರುವ ಚಿಕ್ಕಬಳ್ಳಾಪುರ ನಗರ ಅಭಿವೃದ್ದಿಯತ್ತ ಹೆಜ್ಜೆ ಇಡುತ್ತಿರುವ ನಗರವಾಗಿದೆ. ಹಾಗಾಗಿ ಜನಪ್ರತಿನಿಧಿಗಳು, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರ ಸಹಕಾರದೊಂದಿಗೆ ನಗರವನ್ನು ಮತ್ತಷ್ಟು ಅಭಿವೃದ್ಧಿಯತ್ತ ಕೊಂಡೊಯ್ಯಲಾಗುವುದು ಎಂದು `ಭರವಸೆ ನೀಡಿದರು.
ಒಟ್ಟಿನಲ್ಲಿ ಕಳೆದ ಒಂದೂವರೆ ವರ್ಷದಿಂದ ನಗರಸಭೆಗೆ ಅಧ್ಯಕ್ಷರಿಲ್ಲದೆ ಅಭಿವೃದ್ಧಿ ಕುಂಟಿತವಾಗಿತ್ತು. ಕೊನೆಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯಾದ ಕ್ಷಣದಿಂದಲೇ ನಗರಸಭೆಯಲ್ಲಿ ಪೌರಾಯುಕ್ತರಿಲ್ಲದೆ ಗ್ರಹಣ ಹಿಡಿದಂತಾಗಿದ್ದ ಚಿಕ್ಕಬಳ್ಳಾಪುರ ನಗರಸಭೆಯಲ್ಲಿ ಇದೀಗ ನೂತನ ಪೌರಾಯುಕ್ತರ ಆಗಮನದಿಂದ ಇನ್ನು ಮುಂದೆ ಅಭಿವೃದ್ಧಿ ವೇಗ ಹೆಚ್ಚಲಿದೆ ಎಂದರೆ ತಪ್ಪಾಗಲಾರದು. ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರು ಮತ್ತು ಪೌರಾಯುಕ್ತರ ಒಗ್ಗಟ್ಟಿನಿಂದ ಚಿಕ್ಕಬಳ್ಳಾಪುರ ನಗರ ಮತ್ತಷ್ಟು ಅಭಿವೃದ್ಧಿಯ ಉತ್ತುಂಗ ಕಾಣಲಿ ಎಂದು ಸಿಟಿವಿ ನ್ಯೂಸ್ ಹಾರೈಸುತ್ತದೆ.