ಡಾ. ಸ್ವಾಮಿನಾಥನ್ ಆಯೋಗದ ವರದಿ ಜಾರಿಗೆ ಆಗ್ರಹ

ನೆಲಮಂಗಲದಲ್ಲಿ ಕೈಗಾರಿಕಾ ಉದ್ದೇಶಕ್ಕೆ ಭೂಸ್ವಾಧೀನ

ಅಕ್ರಮ ಭೂಮಿ ಮಂಜೂರು ವಜಾಗೆ ಒತ್ತಾಯ

ತಗಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉದ್ಘಾಟನೆ

December 25, 2024

Ctv News Kannada

Chikkaballapura

ಗುಡಿಬಂಡೆ ಕೆರೆ ಕೋಡಿ ಮೇಲ್ಸುತುವೆ ನಿರ್ಮಾಣಕ್ಕೆ ಮತ್ತೊಮ್ಮೆ ಪ್ರಸ್ತಾವನೆ

1 min read

ಗುಡಿಬಂಡೆ ಕೆರೆ ಕೋಡಿ ಮೇಲ್ಸುತುವೆ ನಿರ್ಮಾಣಕ್ಕೆ ಮತ್ತೊಮ್ಮೆ ಪ್ರಸ್ತಾವನೆ
ಶಾಸಕ ಸುಬ್ಬಾರೆಡ್ಡಿ ಕುಟುಂಬ ಗುಡಿಬಂಡೆ ಕೆರೆಗೆ ಬಾಗಿನ
ಶಾಸಕರ ವಿಶೇಷ ಅನುದಾನದಲ್ಲಿ ರಾಜಕಾಲುವೆ ಅಭಿವೃದ್ಧಿ ಭರವಸೆ

ಜಿ¯್ಲೆಯಾದ್ಯ0ತ `ಧಾರಾಕಾರ ಮಳೆಯಾಗುತ್ತಿರುವ ಪರಿಣಾಮ ಕೆರೆ ಕುಂಟೆಗಳು ತುಂಬಿದ್ದು, ಗುಡಿಬಂಡೆ ಹೊರವಲಯದ ಐತಿಹಾಸಿಕ ಹಿನ್ನೆಲೆಯ ಅಮಾನಿ ಬೈರಸಾಗರ ಕೆರೆ ತುಂಬಿ ಕೋಡಿ ಹರಿಯುತ್ತಿದೆ. ಈ ಹಿನ್ನೆಲೆಯಲ್ಲಿ ಶಾಸಕ ಸುಬ್ಬಾರೆಡ್ಡಿ ಕುಟುಂಬ ಸಮೇತ ಆಗಮಿಸಿ ಬಾಗೀನ ಅರ್ಪಿಸಿದರು.

ಗುಡಿಬಂಡೆ ಅಮಾನಿ ಬೈರಸಾಗರ ಕೆರೆಗೆ ಬಾಗಿನ ಅರ್ಪಿಸಿದ ವೇಳೆ ಮಾತನಾಡಿದ ಶಾಸಕ ಸುಬ್ಬಾರೆಡ್ಡಿ, ಗುಡಿಬಂಡೆ ಕೆರೆ ಕೋಡಿಯ ಮೇಲ್ಸುತುವೆ ನಿರ್ಮಾಣ ಮಾಡಲು ಮತ್ತೊಮ್ಮೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ `ಭರವಸೆ ನೀಡಿದರು. 2022ರಲ್ಲೂ ಇದೇ ರೀತಿಯ ಮಳೆಯಾಗಿ, ಸುಮಾರು ಒಂದು ತಿಂಗಳಿಗೂ ಹೆಚ್ಚು ಕಾಲ ಕೆರೆ ಕೋಡಿ ಹರಿದ ಪರಿಣಾಮ ಜನ ಜೀವನ ಅಸ್ತವ್ಯಸ್ತವಾಗಿತ್ತು. ಆ ಸಮಯದಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿತ್ತು. ನಾನು ಗುಡಿಬಂಡೆ ಕೆರೆ ಕೋಡಿಯ ಬಳಿ ಮೇಲ್ಸುತುವೆ ನಿರ್ಮಾಣ ಮಾಡಲು ಬಿಜೆಪಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾ.

ಪ್ರಸ್ತಾವನೆ ಸಲ್ಲಿಸಿದರೂ ಕೆಲ ಕಾರಣಗಳಿಂದ ಮೇಲ್ಸೇತುವೆ ಮಂಜೂರಾಗಲಿಲ್ಲ. ಇದೀಗ ನಮ್ಮದೇ ಸರ್ಕಾರವಿದ್ದು, ಮತ್ತೊಮ್ಮೆ ಮೇಲ್ಸುತುವೆ ಕಾಮಗಾರಿಗೆ ಪ್ರಸ್ತಾವನೆ ಸಲ್ಲಿಸುತ್ತೇನೆ. ಜೊತೆಗೆ ಪ್ರಸ್ತಾವನೆ ಮಂಜೂರು ಮಾಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಜನರಿಗೆ ಸಮಸ್ಯೆಯಾಗದಂತೆ ತಾಲೂಕು ಮಟ್ಟದ ಅಧಿಕಾರಿಗಳಿಗೆ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಿದ್ದಾನೆ ಎಂದರು.

ಕೆರೆ ತುಂಬಿ ಕೋಡಿ ಹರಿದರೇ ಆ ನೀರು ಆಂಧ್ರಪ್ರದೇಶಕ್ಕೆ ಸೇರುತ್ತದೆ. ಕಳೆದ ಬಾರಿ ಕೆರೆಯ ನೀರು ಕುಡಿಯಲು ಜಿಲ್ಲಾಡಳಿತದಿಂದ ಮೀಸಲು ಇಡಲಾಗಿತ್ತು. ಇದೀಗ ಕೆರೆ ತುಂಬಿ ಹರಿಯುತ್ತಿದ್ದು, ಈ ಸಂಬ0ಧ ಸಂಬ0ಧಪಟ್ಟ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಆ ನೀರು ಕೆರೆಯ ಅಚ್ಚುಕಟ್ಟು ವ್ಯಾಪ್ತಿಯ ರೈತರು ಬೆಳೆ ಬೆಳೆಯಲು ಅನುಕೂಲವಾಗುವಂತೆ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದರು. ಪಟ್ಟಣ ಪಂಚಾಯತಿ ಹಿಂಭಾಗ ೩ ಮತ್ತು 4 ನೇ ವಾರ್ಡ್ಗಳ ವ್ಯಾಪ್ತಿಯ ರಾಜಕಾಲುವೆ ಮಳೆ ಬಂದರೇ ತುಂಬಿ ಹರಿಯುತ್ತದೆ. ಇದರಿಂದಾಗಿ ರಾಜಕಾಲುವೆ ಪಕ್ಕದ ಮನೆಗಳ ಒಳಗೆ ನೀರು ನುಗ್ಗಿ ಜನರಿಗೆ ಸಮಸ್ಯೆಯಾಗಿದೆ ಶಾಸಕರು ತಮ್ಮ ವಿಶೇಷ ಅನುದಾನದಲ್ಲಿ ಈ ಸಮಸ್ಯೆ ಬಗೆಹರಿಸಲು ಸಹಕರಿಸಬೇಕೆಂದು ಪ.ಪಂ. ಅಧ್ಯಕ್ಷ ವಿಕಾಸ್ ಮನವಿ ಮಾಡಿದರು. ಮನವಿಗೆ ಸ್ಪಂಧಿಸಿದ ಶಾಸಕ ಸುಬ್ಬಾರೆಡ್ಡಿ ಆದಷ್ಟು ಶೀಘ್ರ ವಿಶೇಷ ಅನುದಾನ ತಂದು ಸಮಸ್ಯೆಬಗೆಹರಿಸುವುದಾಗಿ `ಭರವಸೆ ನೀಡಿದರು.

ಈ ವೇಳೆ ತಹಸಿಲ್ದಾರ್ ಸಿಗ್ಬತ್ತುಲ್ಲಾ, ಸರ್ಕಲ್ ಇನ್ಸ್ ಪೆಕ್ಟರ್ ನಯಾಜ್ ಬೇಗ್, ಸಣ್ಣ ನೀರಾವರಿ ಇಲಾಖೆಯ ಸುನಿಲ್, ಲೋಕೋಪಯೋಗಿ ಇಲಾಖೆಯ ಪ್ರದೀಪ್, ಪೂಜಪ್ಪ, ಪ.ಪಂ. ಮುಖ್ಯಾಧಿಕಾರಿ ಶ್ರೀನಿವಾಸ್, ಅಧ್ಯಕ್ಷ ವಿಕಾಸ್, ಉಪಾಧ್ಯಕ್ಷ ರಾಜು ಇದ್ದರು.

 

About The Author

Leave a Reply

Your email address will not be published. Required fields are marked *