07 ಹಳ್ಳಿಗಳಿಗೆ ಭೇಟಿ ನೀಡಿ ಜನರ ಸಮಸ್ಯೆ ಆಲಿಸಿದ ಪ್ರದೀಪ್ ಈಶ್ವ
1 min readಶಾಸಕ ಪ್ರದೀಪ್ ಈಶ್ವರ್ ನಮ್ಮ ಶಾಸಕ ನಮ್ಮ ಊರು ಕಾರ್ಯಕ್ರಮ
ಮಂಚೇನಹಳ್ಳಿ ತಾಲೂಕಿನ ಪುರ ಗ್ರಾಮಪಂಚಾಯತಿಯಲ್ಲಿ ಕಾರ್ಯಕ್ರಮ
07 ಹಳ್ಳಿಗಳಿಗೆ ಭೇಟಿ ನೀಡಿ ಜನರ ಸಮಸ್ಯೆ ಆಲಿಸಿದ ಪ್ರದೀಪ್ ಈಶ್ವರ್
ಆಂಕರ್: ಶಾಸಕ ಪ್ರದೀಪ್ ಈಶ್ವರ್ ನಮ್ಮ ಊರಿಗೆ ನಮ್ಮ ಶಾಸಕರು ಕಾರ್ಯಕ್ರಮ ಮುಂದುವರೆದಿದ್ದು, ಇಂದು ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಂಚೇನಹಳ್ಳಿ ತಾಲೂಕಿನ ಪುರ ಗ್ರಾಮ ಪಂಚಾಯತಿಯ 7 ಹಳ್ಳಿಗಳಿಗೆ ಭೇಟಿ ನೀಡಿ ಜನರ ಸಮಸ್ಯೆ ಆಲಿಸುವ ಕಾಯಕ ನಡೆಸಿದರು.
ಇಂದು ಬೆಳ್ಳಂಬೆಳಿಗ್ಗೆ 6 ಗಂಟೆಗೆ ಜಕ್ಕಲಮಡುಗು ಜಲಾಶಯಕ್ಕೆ ಬಾಗಿನ ಅರ್ಪಿಸಿದ ಶಾಸಕರು ನಂತರ ಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಬೀರಮಂಗಲ, ಚನ್ನಭೈರೇನಹಳ್ಳಿ, ಬಿಸಿಲಹಳ್ಳಿ, ಕೊಂಡೇನಹಳ್ಳಿ, ಪಿ.ನಾಗೇನಹಳ್ಳಿ, ಭಕ್ತರಹಳ್ಳಿ, ಸೇರಿದಂತೆ ಪುರ ಗ್ರಾಮಗಳಿಗೆ ಭೇಟಿ ನೀಡಿ ಜನರ ಜೊತೆ ಸಮಸ್ಯೆಗಳನ್ನ ಬಗೆಹರಿಸುವ ಕೆಲಸ ಮಾಡಿದರು. ಈಗಾಗಲೇ ಮುದ್ದೇನಹಳ್ಳಿ ಹಾಗೂ ನಂದಿ ಗ್ರಾಮ ಪಂಚಾಯತಿ ಮುಗಿಸಿರುವ ಶಾಸಕ ಪ್ರದೀಪ್ ಈಶ್ವರ್ ಇಂದು ಪುರ ಗ್ರಾಮ ಪಂಚಾಯತಿಯ ಗ್ರಾಮಗಳಿಗೆ ಭೇಟಿ ನೀಡಿದ್ದು, ನಾಳೆಯೂ ಉಳಿದ ಗ್ರಾಮಗಳಿಗೂ ಅಧಿಕಾರಿಗಳೊಂದಿಗೆ ಭೇಟಿ ನೀಡಲಿದ್ದಾರೆ. ಬಿಸಲಿಹಳ್ಳಿ ಗ್ರಾಮದಲ್ಲಿ ವಾಟರ್ ಮೆನ್ ಸಮಸ್ಯೆ ಬಗ್ಗೆ ಗಮನಕ್ಕೆ ತಂದಿದ್ದು, ಸೇರಿದಂತೆ ಜಮೀನು ಒತ್ತುವರಿ ಸೇರಿ ಹಲವು ಸಮಸ್ಯೆಗಳ ಬಗ್ಗೆ ಗಮನಕ್ಕೆ ಬಂದಿದ್ದು ಸಮಸ್ಯಗೆಳ ಪರಿಹಾರಕ್ಕೆ ಕೂಡಲೇ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಇನ್ನೂ ಬುಲೆಟ್ ಬೈಕ್ ಚಾಲನೆ ಮಾಡುವ ಮೂಲಕ ಪ್ರದೀಪ್ ಈಶ್ವರ್ ಎಲ್ಲರ ಗಮನ ಸೆಳೆದರು.