ಗೌರಿಬಿದನೂರು ನಗರ ತಲುಪಿದ ಉತ್ತರ ಪಿನಾಕಿನಿ ನದಿ
1 min readಗೌರಿಬಿದನೂರು ನಗರ ತಲುಪಿದ ಉತ್ತರ ಪಿನಾಕಿನಿ ನದಿ
ಗೌರಿಬಿದನೂರಿನಲ್ಲಿ ವಾಹನ ಸಂಚಾರಕ್ಕೆ ತಾತ್ಕಾಲಿಕ ಸೇತುವೆ ನಿರ್ಮಾಣ
ಪ್ರಸ್ತುತ ನದಿ ಹರಿಯುವ ರಬಸಕ್ಕೆ ಸೇತುವೆ ಕೊಚ್ಚಿಹೋಗುವ ಆತಂಕ
ಕಳೆದ ಕೆಲ ದಿನಗಳಿಂದ ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಮಳೆಯಿಂದಾಗಿ ಇಂದು ಉತ್ತರ ಪಿನಾಕಿನಿ ನದಿ ಹರಿಯುತ್ತಿದೆ. ನಗರದಲ್ಲಿ ರಾಷ್ಟಿಯ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು, ಉತ್ತರ ಪಿನಾಕಿನಿ ಸೇತುವೆ ದುರಸ್ತಿ ಮಾಡುವ ಕಾಮಗಾರಿಗೆ 19ರಂದು ಚಾಲನೆ ನೀಡಿದ್ದು, ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗ ಮಾಡಲಾಗಿದೆ.
ಗೌರಿಬಿದನೂರು ಹೊರವಲಯದಲ್ಲಿ ಹರಿಯುವ ಉತ್ತರ ಪಿನಾಕಿನಿ ನದಿಯ ಸೇತುವೆ ಕಾಮಗಾರಿ ಆರಂಭಿಸಲಾಗಿದ್ದು, ವಾಹನಗಳ ಸಂಚಾರ ಬದಲಾಯಿಸಲಾಗಿತ್ತು, ಬೈಕ್, ಆಟೋ, ಕಾರು ಹೋಗುವುದಕ್ಕೆ ಮಾತ್ರ ತಾತ್ಕಾಲಿಕ ರಸ್ತೆ ನಿರ್ಮಾಣ ಮಾಡಿದ್ದು. ಹಳೆ ಸೇತುವೆ ಸುಮಂಗಲಿ ಕಲ್ಯಾಣ ಮಂಟಪದ ಕಡೆ ಕೆಡವಿದ್ದರೆ. ಇದೀಗ ನದಿ ಹರಿಯುತ್ತಿರುವ ಕಾರಣ ತಾತ್ಕಾಲಿಕವಾಗಿ ಮಾಡಿರುವ ರಸ್ತೆಗೆ 100 ಮೀಟರ್ ಉದ್ದದ ನದಿ ಭಾಗಕ್ಕೆ ನೀರು ಹರಿಯಲು ಕೇವಲ ಐದು ಸಿಮೆಂಟ್ ಪೈಪ್ ಅಳವಡಿಸಿದ್ದು, ಇದೀಗ ನೀರಿನ ರಭಸ ಹೆಚ್ಚಾದರೆ ಕಿತ್ತು ಹೋಗುವ ಸ್ಥಿತಿ ನಿರ್ಮಾಣವಾಗಿದೆ.
ಒಂದು ಕಡೆ ಹಳೇ ಸೇತುವೆ ಕೆಡವಿದ್ದಾರೆ, ಮತ್ತೊಂದು ಕಡೆ ತಾತ್ಕಾಲಿಕವಾಗಿ ನಿರ್ಮಾಣ ಮಾಡಿರುವ ಸೇತುವೆ ಮಣ್ಣು ಬಿರುಕು ಬಿಟ್ಟಿದೆ. ರಾತ್ರಿಗೆ ಹೆಚ್ಚಿನ ಮಳೆ ಆದರೆ ನದಿ ನೀರಿಗೆ ತಾತ್ಕಾಲಿಕ ಸೇತುವೆ ಕೊಚ್ಚಿ ಹೋಗುವ ಆತಂಕ ಎದುರಾಗಿದೆ. ಇದರಿಂದ ವಾಹನ ಸವಾರರು, ಬಡಾವಣೆಗಳಿಗೆ ತೆರಳುವ ನಿವಾಸಿಗಳು ಹಾಗೂ ಶಾಲಾ ಕಾಲೇಜು ಆಸ್ಪತ್ರೆಗಳಿಗೆ ಹೋಗುವ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿದೆ.
ಪ್ರಸ್ತುತ ಪರಿಸ್ಥಿತಿಯನ್ನು ಕಂಡ ರಾಷ್ಟಿಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಸೇತುವೆ ನಿರ್ಮಾಣದ ಗುತ್ತಿಗೆದಾರರು ಕೆಡವಿದ ಸೇತುವೆಗೆ ಜೆಸಿಬಿ ಮೂಲಕ ಜಲ್ಲಿ ಮತ್ತು ಮಣ್ಣು ತುಂಬಿ ಸೇತುವೆ ಸಮವಾಗಿ ಮಾಡಿ ವಾಹನಗಳ ಸಂಚಾರಕ್ಕೆ ತಾತ್ಕಾಲಿಕವಾಗಿ ನಿರ್ಮಾಣ ಮಾಡಿಕೊಡಲು ಮುಂದಾಗಿದ್ದಾರೆ.