ನಂಜನಗೂಡು ಎಲ್‌ಐಸಿ ಕಚೇರಿ ಮುಂದೆ ಪ್ರತಿಭಟನೆ
1 min readನಂಜನಗೂಡು ಎಲ್‌ಐಸಿ ಕಚೇರಿ ಮುಂದೆ ಪ್ರತಿಭಟನೆ
ಎಲ್‌ಐಸಿ ಪ್ರತಿನಿಧಿಗಳ ಒಕ್ಕೂಟ ದಿಂದ ಹೋರಾಟ
ಕೇಂದ್ರದ ಎಲ್‌ಐಸಿ, ಐಆರ್‌ಡಿಎ ವಿರುದ್ಧ ಆಕ್ರೋಶ
ಪ್ರತಿನಿಧಿಗಳು ಮತ್ತು ಪಾಲಿಸಿದಾರರಿಗೆ ಕೇಂದ್ರ ಎಲ್‌ಐಸಿ ಮತ್ತು ಐಆರ್‌ಡಿಎ ಇಲ್ಲಸಲ್ಲದ ನೀತಿ ನಿಯಮ ಜಾರಿ ಮಾಡಿ ಸಮಸ್ಯೆ ಸೃಷ್ಟಿಗೆ ಕಾರಣರಾಗಿದೆ ಎಂದು ಆರೋಪಿಸಿ ನಂಜನಗೂಡು ನಗರದ ಹುಲ್ಲಹಳ್ಳಿ ಮುಖ್ಯರಸ್ತೆಯ ಎಲ್‌ಐಸಿ ಕಚೇರಿ ಮುಂದೆ ಪ್ರತಿನಿಧಿಗಳು ಪ್ರತಿಭಟನೆ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.
ನಂಜನಗೂಡು ತಾಲೂಕು ಎಲ್‌ಐ.ಸಿ ಪ್ರತಿನಿಧಿಗಳ ಒಕ್ಕೂಟದ ಅಧ್ಯಕ್ಷ ಕೆಂಪೇಗೌಡ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದು, ಎಲ್‌ಐಸಿ ಪ್ರತಿನಿಧಿಗಳು ಕೇಂದ್ರ ಎಲ್‌ಐಸಿ ಮತ್ತು ಐಆರ್‌ಡಿಎ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ, ಧಿಕ್ಕಾರದ ಘೋಷಣೆಗಳನ್ನು ಕೂಗಿದರು. ನಂತರ ಮಾತನಾಡಿದ ಹಿರಿಯ ಎಲ್‌ಐಸಿ ಪ್ರತಿನಿಧಿ ಆಶಾ ಕೆ ದಾಸ್ ಮತ್ತು ಶ್ರೀಧರ್ ರಾವ್ ಮಾತನಾಡಿ, ಪಾಲಿಸಿದಾರರು ಮತ್ತು ಪ್ರತಿನಿಧಿಗಳು ಎಲ್‌ಐಸಿಯ ಬೆನ್ನೆಲುಬು ಎನ್ನಲಾಗುತ್ತಿತ್ತು .ಆದರೆ ಇಂದು ಅದು ತದ್ವಿರುದ್ಧವಾಗಿದೆ ಎಂದರು.
ಕೇ0ದ್ರದ ಎಲ್‌ಐಸಿ ಮತ್ತು ಐ ಆರ್‌ಡಿಎ ಕೆಲ ತಪ್ಪು ನಿಯಮಗಳನ್ನು ಜಾರಿ ಮಾಡಿದ ಪರಿಣಾಮ ಸಾಕಷ್ಟು ಸಮಸ್ಯೆ ಎದುರಿಸುವ ಸ್ಥಿತಿ ನಿರ್ಮಾಣವಾಗಿದೆ. ಪಾಲಿಸಿದಾರರಿಗೆ ಈವರೆಗೂ ಒಂದು ಲಕ್ಷಕ್ಕೂ ಅಧಿಕ ಬೋನಸ್ ಹಣ ಸಿಗುತ್ತಿತ್ತು. ಆದರೆ ಇದನ್ನು ಏಕಾಏಕಿ ಶೇ.೪೦ ಕಡಿತಗೊಳಿಸಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ವಿಮೆ ಮೊತ್ತ 1 ಲಕ್ಷ ಸಿಗುತ್ತಿತ್ತು. ಆದರೆ ಈಗ ಎರಡು ಲಕ್ಷ ಕಡ್ಡಾಯ ಮಾಡಿದ್ದಾರೆ. ಪಾಲಿಸಿದಾರರಿಗೆ ೫೫ ವರ್ಷ ವಯೋಮಿತಿ ನಿಗಧಿಗೊಳಿಸಲಾಗಿತ್ತು ಆದರೆ ಈಗ ೫೦ ವರ್ಷಕ್ಕೆ ಸ್ಥಗಿತಗೊಳಿಸಲಾಗಿದೆ. ಇನ್ನು ಸಾಕಷ್ಟು ದ್ವಂದ್ವ ನಿಲುವುಗಳನ್ನು ಕೇಂದ್ರ ಎಲ್‌ಐಸಿ ಮತ್ತು ಐಆರ್‌ಡಿಎ ಜಾರಿ ಮಾಡಿದ ಪರಿಣಾಮ ಪ್ರತಿನಿಧಿಗಳು ಮತ್ತು ಪಾಲಿಸಿದಾರರು ಸಮಸ್ಯೆಗಳನ್ನು ಎದುರಿಸುವ ವಾತಾವರಣ ನಿರ್ಮಾಣವಾಗಿದೆ ಎಂದರು.
ಕೂಡಲೇ ಅನನುಕೂಲದ ನೀತಿ ನಿಯಮಗಳನ್ನು ರದ್ದುಗೊಳಿಸಿ, ಯಥಾ ಸ್ಥಿತಿ ಕಾರ್ಯ ನಿರ್ವಹಿಸುವಂತೆ ಅನುವು ಮಾಡಿಕೊಡಲು ಕೇಂದ್ರ ಎಲ್‌ಐಸಿ ಮತ್ತು ಐಆರ್‌ಡಿಎ ಮುಂದಾಗಬೇಕು ಎಂದು ಪ್ರತಿಭಟನಾ ಸಂದರ್ಭದಲ್ಲಿ ಅಗ್ರಹಿಸಿದರು. ಪ್ರತಿಭಟನೆಯಲ್ಲಿ ಪ್ರತಿನಿಧಿಗಳ ಅಧ್ಯಕ್ಷ ಕೆಂಪೇಗೌಡ, ಉಪಾಧ್ಯಕ್ಷರಾದ ನಾಗೇಂದ್ರ, ಪ್ರಧಾನ ಕಾರ್ಯದರ್ಶಿ ರಂಗಸ್ವಾಮಿ, ಪ್ರಸಾದ್, ಶ್ರೀಧರ್ ರಾವ್, ಮಹದೇವಯ್ಯ, ಆಶಾ ಕೆ. ದಾಸ್, ಇಂದ್ರ, ಶೈಲಜಾ, ಪೂರ್ಣಿಮಾ. ಕೃಷ್ಣಮೂರ್ತಿ, ರವಿ ಇದ್ದರು.