ಇಎಸ್‌ಐ ಆಸ್ಪತ್ರೆ ಅಧಿಕಾರಿ ಗಣೇಶ್ ವರ್ಗಾವಣೆ, ಇದು ಸಿಟಿವಿ ನ್ಯೂಸ್ ಬಿಗ್ ಇಂಪ್ಯಾಕ್ಟ್
1 min readಮಹಿಳಾ ನೌಕರರಿಗೆ ಲೈಂಗಿಕ ಕಿರುಕುಳ ಪ್ರಕರಣ ಅಧಿಕಾರಿ ಗಣೇಶ್ ವರ್ಗಾವಣೆ
ಇಎಸ್‌ಐ ಆಸ್ಪತ್ರೆ ಅಧಿಕಾರಿ ಗಣೇಶ್ ವರ್ಗಾವಣೆ, ಇದು ಸಿಟಿವಿ ನ್ಯೂಸ್ ಬಿಗ್ ಇಂಪ್ಯಾಕ್ಟ್
ಮದ್ಯ ಸೇವಿಸಿ ಕರ್ತವ್ಯಕ್ಕೆ ಬರುತ್ತಿದ್ದ ಅಧಿಕಾರಿ ಬೆನ್ನಿಗೆ ನಿಂತರೆ ತನಿಖಾಧಿಕಾರಿ?
ಇದು ಸಿಟಿವಿ ನ್ಯೂಸ್ ಬಿಗ್ ಇಂಪ್ಯಾಕ್ಟ್
ಮುಖ್ಯಮ0ತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆ, ಮೈಸೂರಿನ ನಂಜನಗೂಡು ತಾಲೂಕು ಕೇಂದ್ರ ಸ್ಥಾನದಲ್ಲಿರುವ ಇಎಸ್‌ಐ ಆಸ್ಪತ್ರೆಯಲ್ಲಿ ಮಹಿಳಾ ನೌಕರರೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪ ಹೊತ್ತ ಆಸ್ಪತ್ರೆ ಹಿರಿಯ ರ್ಮಸಿ ಅಧಿಕಾರಿ ಗಣೇಶ್ ಅವರನ್ನು ವರ್ಗಾವಣೆ ಮಾಡಲಾಗಿದೆ.
ಮೈಸೂರಿನ ಎನ್‌ಆರ್ ಮೊಹಲ್ಲಾದಲ್ಲಿರುವ ಕೇಂದ್ರದಲ್ಲಿ ಒಒಡಿಯಲ್ಲಿ ಕರ್ತವ್ಯ ನಿರ್ವಹಿಸುವಂತೆ ಮದ್ಯ ಸೇವಿಸಿ ಕರ್ತವ್ಯಕ್ಕೆ ಹಾಜರಾಗುತತಿದ್ದ ಅಧಿಕಾರಿಯನ್ನು ವರ್ಗಾಯಿಸಲಾಗಿದೆ. 14 ದಿನ ಕರ್ತವ್ಯ ನಿರ್ವಹಿಸುವಂತೆ ಇಎಸ್‌ಐ ಆಸ್ಪತ್ರೆ ಅಧೀಕ್ಷಕರು ಆದೇಶಿಸಿದ್ದಾರೆ. ನಂಜನಗೂಡು ನಗರದ ಕೈಗಾರಿಕಾ ಪ್ರದೇಶದ ಕಾರ್ಖಾನೆಗಳಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರು ಮತ್ತು ಕುಟುಂಬಸ್ಥರ ಜೊತೆ ಹಾಗೂ ಇಎಸ್‌ಐ ಆಸ್ಪತ್ರೆಯ ಹಲವು ಮಹಿಳಾ ನೌಕರರಿಗೆ ಕರ್ತವ್ಯ ನಿರ್ವಹಿಸುವ ವೇಳೆ ಅಶ್ಲೀಲ ಪದ ಪ್ರಯೋಗ ಮಾಡುವುದು, ಅಶ್ಲೀಲ ಮೊಬೈಲ್ ಸಂದೇಶ ಕಳುಹಿಸುವುದು, ಅವಾಚ್ಯ ಶಬ್ದಗಳಿಂದ ನಿಂದಿಸಿರುವುದಾಗಿ ಆರೋಪಿಸಲಾಗಿತ್ತು.
ಈ ಬಗ್ಗೆ ನಂಜನಗೂಡು ಇಎಸ್‌ಐ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ದೀಪಕ್ ಜಿಲ್ಲಾ ಮತ್ತು ರಾಜ್ಯಮಟ್ಟದ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರು. ಈ ವರದಿ ಸಿಟಿವಿ ನ್ಯೂಸ್ ಪ್ರಸಾರ ಮಾಡಿದ ಲವಾಗಿ ಮೈಸೂರು ಜಿಲ್ಲಾ ಇಎಸ್‌ಐ ಆಸ್ಪತ್ರೆ ಜಿಲ್ಲಾ ಮುಖ್ಯ ಅಧ್ಯಕ್ಷರು ಗಂಭೀರ ಪ್ರಕರಣವಾಗಿರುವ ದೆಸೆಯಿಂದ ಮೈಸೂರಿನ ಜಿಲ್ಲಾ ಕೇಂದ್ರ ಸ್ಥಾನದಲ್ಲಿರುವ ಇಎಸ್‌ಐ ಆಸ್ಪತ್ರೆಯ ಮುಖ್ಯ ಉಗ್ರಾಣದ ಪ್ರಭಾರ ಅಧಿಕಾರಿ ಡಾ .ಆಶಾ ನೇತೃತ್ವದ ಐದು ಜನ ಅಧಿಕಾರಿಗಳ ತನಿಖೆಗೆ ತಂಡ ನಿಯೋಜನೆ ಮಾಡಿ ಸ್ಪಷ್ಟ ಮಾಹಿತಿ ಪಡೆಯಲು ನಂಜನಗೂಡಿನ ಇಎಸ್‌ಐ ಆಸ್ಪತ್ರೆಗೆ `ಭೇಟಿ ನೀಡಿ ಮಹಿಳಾ ಸಿಬ್ಬಂದಿ ಜೊತೆ ಮಾತುಕತೆ ನಡೆಸಿದ ಬಳಿಕ ಅಧಿಕಾರಿಯ ಮತ್ತಿನ ಪುರಾಣ ಕೇಳಿ ಬೆಚ್ಚಿಬಿದ್ದಿದ್ದಾರೆ.
ತನಿಖೆ ವೇಳೆ ಸಾಕಷ್ಟು ಮಾಹಿತಿ ಬೆಳಕಿಗೆ ಬಂದಿದ್ದು, ಮಹಿಳಾ ನೌಕರರು ತಮಗಾಗಿರುವ ಪ್ರತಿ ಅನ್ಯಾಯ, ಲೈಂಗಿಕ ಕಿರುಕುಳದ ಸ್ಪಷ್ಟ ಮಾಹಿತಿಯನ್ನು ತನಿಖೆ ಅಧಿಕಾರಿಗಳ ಬಳಿ ಮಾಹಿತಿ ನೀಡಿ ಅಲವತ್ತುಕೊಂಡಿದ್ದಾರೆ. ಅಧಿಕಾರಿ ನೀಡಿದ ಲೈಂಗಿಕ ಕಿರುಕುಳ ಮತ್ತು ಮೊಬೈಲ್ ಅಶ್ಲೀಲ ಸಂದೇಶಗಳನ್ನು ಪಡೆದ ತನಿಖಾ ತಂಡ, ಇಎಸ್‌ಐ ಆಸ್ಪತ್ರೆ ಜಿಲ್ಲಾ ಮುಖ್ಯ ಅಧಿಕ್ಷಕರ ಗಮನಕ್ಕೆ ತಂದಿದ್ದಾರೆ. ಘಟನೆ ಮಾಹಿತಿಯನ್ನು ಪರಿಶೀಲಿಸಿದ ಅಧೀಕ್ಷಕರು ಮತ್ತಿನ ಅಧಿಕಾರಿ ಅವಾಂತರಗಳ ವಿಚಾರಣೆ ಮುಗಿಯುವ ತನಕ ಅಧಿಕಾರಿ ಗಣೇಶ್‌ನನ್ನು ಮೈಸೂರಿಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.