ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ ಜಲಕಂಟಕದಿ0ದ ಪಾರು
1 min readತುಂಬಿ ಹರಿಯುತ್ತಿರುವ ಜಕ್ಕಲಮಡಗು ಜಲಾಶಯ
ಎರಡು ನಗರಗಳಿಗೆ ಜೀವಜಲ ಒದಗಿಸೋ ಜಲಾಶಯ
ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ ಜಲಕಂಟಕದಿ0ದ ಪಾರು
ನಾಲ್ಕು ವರ್ಷಗಳ ಹಿಂದೆ ತುಂಬಿದ್ದ ಜಲಾಶಯ ಮತ್ತೆ ಈಗ ಭರ್ತಿ
ಕೇವಲ ಎರಡು ತಿಂಗಳ ಹಿಂದಷ್ಟೇ ಚಿಕ್ಕಬಳ್ಳಾಪುರ ನಗರಕ್ಕೆ ಜಲಕಂಟಕ ಎಂಬ ಸುದ್ದಿಯನ್ನು ನೀವು ನಿಮ್ಮ ಸಿಟಿವಿ ನ್ಯೂಸ್‌ನಲ್ಲಿ ನೋಡಿದ್ದು ನೆನಪಿರಬಹುದು. ಇದಕ್ಕೆ ಕಾರಣ ಜಕ್ಕಲಮಡಗು ಜಲಾಶಯ ಖಾಲಿಯಾಗುವ ಹಂತ ಮುಟ್ಟಿತ್ತು. ಆದರೆ ಇದೀಗ ಅದೇ ಜಲಾಶಯ ಭರ್ತಿಯಾಗಿದೆ. ಜಕ್ಕಮಡಗು ಜಲಾಶಯ ತುಂಬಿ ಕೋಡಿ ಹರಿಯುತ್ತಿದ್ದು, ಚಿಕ್ಕಬಳ್ಳಾಪುರ ಮತ್ತು ದೊಡ್ಡಬಳ್ಳಾಪುರ ನಗರಗಳು ಜಲಕಂಟಕದಿ0ದ ಪಾರಾಗಿವೆ.
ಇದು ಇಡೀ ಚಿಕ್ಕಬಳ್ಳಾಪುರ ನಗರದ ಜನತೆ ಖುಷಿ ಪಡೋಸುದ್ದಿ. ಕೇವಲ ಎರಡು ತಿಂಗಳ ಹಿಂದಷ್ಟೇ ಕುಡಿಯುವ ನೀರಿನ ಆತಂಕ ಎದುರಿಸುತ್ತಿದ್ದ ಚಿಕ್ಕಬಳ್ಳಾಪುರ ನಗರಕ್ಕೆ ಇದೀಗ ನೀರಿನ ಸಮಸ್ಯೆ ದೂರವಾಗಿದೆ. ಇದಕ್ಕೆ ಕಾರಣ ನಗರಕ್ಕೆ ಜೀವಜಲ ಪೂರೈಸುತ್ತಿರುವ ಜಕ್ಕಲಮಡಗು ಜಲಾಶಯ ತುಂಬಿ ಹರಿಯುತ್ತಿದೆ. ಕಳೆದ ನಾಲ್ಕು ವರ್ಷಗಳ ಹಿಂದೆ ತುಂಬಿದ್ದ ಜಲಾಶಯ ಇದೀಗ ಮತ್ತೆ `ಭರ್ತಿಯಾಗಿದ್ದು, ಚಿಕ್ಕಬಳ್ಳಾಪುರ ಮಾತ್ರವಲ್ಲದೆ ದೊಡ್ಡಬಳ್ಳಾಪುರ ಜನತೆಗೂ ನೀರಿನ ಆತಂಕ ದೂರವಾಗಿದೆ.
ಹೌದು, ಚಿಕ್ಕಬಳ್ಳಾಪುರ ನಗರಕ್ಕೆ ಜೀವಜಲ ಪೂರೈಸುವ ಐಕೈಕ ಜಲಾಶಯ ಜಕ್ಕಲಮಡಗು. ಇದು ಖಾಲಿಯಾದರೆ ಚಿಕ್ಕಬಳ್ಳಾಪುರ ಮಾತ್ರವಲ್ಲದೆ ದೊಡ್ಡಬಳ್ಳಾಪುರ ಜನತೆಗೂ ಕುಡಿಯಲು ನೀರಿಲ್ಲ. ಕೇವಲ ಬೆಂಬಲಕ್ಕೆ ಎಂಬ0ತೆ ಇರುವ ಕೊಳವೆ ಬಾವಿಗಳು ಅಷ್ಟೂ ಜನರ ದಾಹ ತೀರಿಸುವಲ್ಲಿ ವಿಲವಾಗಲಿದ್ದು, ಜನರು ತೀವ್ರ ಸಮಸ್ಯೆ ಎದುರಿಸಬೇಕಾಗುತ್ತದೆ. ಕಳೆದ ಏಳೆಂಟು ವರ್ಷಗಳ ಹಿಂದೆ ಜಕ್ಕಲಮಡಗು ಜಲಾಶಯ ಸಂಪೂರ್ಣ ಖಾಲಿಯಾಗಿ ನಗರದ ಜನತೆ ಕುಡಿಯುವ ನೀರಿಗಾಗಿ ತೀವ್ರ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.
ಅದರ ನಂತರ ಹಾಗೂ ಹೀಗೂ ಜಲಾಶಯದಲ್ಲಿ ನೀರು ಶೇಖರಣೆಯಾಗಿ ಉಭಯ ನಗರಗಳಿಗೆ ನೀರಿನ ಸಮಸ್ಯೆ ಎದುರಾಗದಂತೆ ಇದೆ. ಆದರೆ ಕಳೆದ ವರ್ಷ ತೀವ್ರ ಬರ ಕಾಡಿದ ಪರಿಣಾಮ ಜಲಾಶಯದಲ್ಲಿ ಶೇಖರಣೆಯಾಗಿದ್ದ ನೀರು ಬಹುತೇಕ ಖಾಲಿಯಾಗಿ ಇನ್ನೇನು ಎರಡು ವಾರದಲ್ಲಿ ಜಲಾಶಯ ಸಂಪೂರ್ಣ ಖಾಲಿಯಾಗಲಿದೆ ಎಂಬ ಆತಂಕ ಎದುರಾಗಿತ್ತು. ಇದರಿಂದ ನಗರ ಜನತೆಯ ಕುಡಿಯುವ ನೀರಿಗಾಗಿ ಪರ್ಯಾಯ ವ್ಯವಸ್ಥೆ ಹುಡುಕಲು ನಗರಸಭೆ ಅಧಿಕಾರಿಗಳು ತೀವ್ರ ಪರದಾಡಿದ್ದರು. ಆದರೆ ಅದೃಷ್ಟವಶಾತ್ ವರುಣ ಕೃಪೆ ತೋರಿದ ಪರಿಣಾಮ ಜಲಾಶಯಕ್ಕೆ ಮತ್ತೆ ನೀರು ಹರಿದು ಬಂದಿತ್ತು.
ಕಳೆದ ಒಂದು ವಾರದಿಂದ ಸತತವಾಗಿ ಮಳೆಯಾಗುತ್ತಿದೆ. ಅದರಲ್ಲೂ ಬೆಂಗಳೂರು ಗದ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ವ್ಯಾಪ್ತಿಯಲ್ಲಿ ಯಥೇಚ್ಛವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಕ್ಕಲಮಡಗು ಜಲಾಶಯಕ್ಕೆ ಹೇರಳವಾಗಿ ನೀರು ಹರಿದುಬಂದಿದ್ದು, ಇಂದು ಮುಂಜಾನೆ ಕೋಡಿ ಬಿದ್ದಿದೆ. ಇದರಿಂದ ಉಭಯ ನಗರಗಳ ನೀರಿನ ಆತಂಕ ದೂರವಾಗಿದ್ದು, ಮುಂದಿನ ಎರಡು ವ್ರಷಗಳ ಕಾಲ ಎರಡೂ ನಗರಗಳಿಗೆ ನೀರಿನ ಸಮಸ್ಯೆ ಎದುರಾಗದ ಕಾರಣ ನಗರಸಭ ಅಧಿಕಾರಿಗಳು ನಿಟ್ಟುಸಿರು ಬಿಡುವಂತಾಗಿದೆ.
ಚಿಕ್ಕಬಳ್ಳಾಪುರ ನಗರಸಬೆ ಅಧ್ಯಕ್ಷ ಗಜೇಂದ್ರ, ಉಪಾಧ್ಯಕ್ಷ ನಾಗರಾಜ್ ಜೆ ಸೇರಿದಂತೆ ಇತರೆ ನಗರಸಭೆ ಸದಸ್ಯರು ಮತ್ತು ಅಧಿಕಾರಿಗಳು ಇಂದು ಕೋಡಿ ಹರಿಯುತ್ತಿರುವ ಜಕ್ಕಲಮಡಗು ಜಲಾಶಯಕ್ಕೆ ಭೇಟಿ ನೀಡಿದ್ದರು. ತುಂಬಿ ಹರಿಯುತ್ತಿರುವ ಜಲಾಶಯದ ಕೋಡಿಯ ಮೇಲೆ ನಿಂತು ಜಲಾಶಯ ವೀಕ್ಷಣೆ ಮಾಡಿದ ಅಧ್ಯಕ್ಷ ಉಪಾಧ್ಯಕ್ಷರು ನಗರದ ಜನತೆಯ ನೀರಿನ ಸಮಸ್ಯೆ ದೂರ ಮಾಡಿದ ವರುಣನಿಗೆ ನಮಸ್ಕರಿಸಿದರು.
ಈ ವೇಳೆ ಮಾತನಾಡಿದ ನಗರಸಭೆ ಅಧ್ಯಕ್ಷ ಗಜೇಂದ್ರ, ಜಕ್ಕಲಮಡಗು ಜಲಾಶಯ ತುಂಬಿ ಹರಿಯುತ್ತಿದೆ, ನಗರ ಜನತೆಯ ಕುಡಿಯುವ ನೀರಿನ ಸಮಸ್ಯೆ ನೀಗಿದೆ, ಸಂಸದರೊAದಿಗೆ ಜಲಾಶಯಕ್ಕೆ ಬಾಗಿನ ಅರ್ಪಿಸಲಾಗುತ್ತದೆ, ಕಳೆದ ನಾಲ್ಕು ವರ್ಷಗಳ ಹಿಂದೆ ಅಂದರೆ ೨೦೨೧ರಲ್ಲಿ ಜಲಾಶಯ ತುಂಬಿತ್ತು, ಮತ್ತೆ ಈಗ ಭರ್ತಿಯಾಗಿದೆ ಇದು ನಗರಸಬೆಗೆ ಮಾತ್ರವಲ್ಲದೆ ನಗರದ ನಾಗರಿಕರಿಗೂ ಸಂತಸ ತಂದಿದೆ ಎಂದರು.
ಉಪಾಧ್ಯಕ್ಷ ನಾಗರಾಜ್ ಮಾತನಾಡಿ, ಚಿಕ್ಕಬಳ್ಳಾಪುರ ಮತ್ತು ದೊಡ್ಡಬಳ್ಳಾಪುರ ನಗರಗಳಿಗೆ ಜೀವಜಲ ಒದಗಿಸುತ್ತಿರುವ ಜಕ್ಕಲಮಡಗು ಜಲಾಶಯ ತುಂಬಿ ಕೋಡಿ ಗರಿಯುತ್ತಿದೆ. ಇದರಿಂದ ಎರಡೂ ನಗರಗಳ ಜನತೆಗೆ ನೀರಿನ ಸಮಸ್ಯೆ ನಿವಾರಣೆಯಾಗಿದೆ. ನಾಲ್ಕು ವರ್ಷಗಳ ಹಿಂದೆ ಜಲಾಶಯ ತುಂಬಿತ್ತು, ಈಗ ಮತ್ತೆ ತುಂಬಿದೆ, ನಾವು ಅಧ್ಯಕ್ಷ, ಉಪಾಧ್ಯಕ್ಷರಾದ ಒಂದೇ ತಿಂಗಳಲ್ಲಿ ಜಲಾಶಯ ತುಂಬಿರೋದು ಸಂತಸ ತಂದಿದೆ ಎಂದರು.
ಈ ಹಿಂದೆ ಸಚಿವರಾಗಿದ್ದ ವೇಳೆ ಡಾ.ಕೆ. ಸುಧಾಕರ್ ಅವರು ಬಂದು ಜಕ್ಕಲಮಡಗು ಜಲಾಶಯಕ್ಕೆ ಬಾಗಿನ ಅರ್ಪಿಸಿದ್ದರು, ಈಗ ಸಂಸದರಾಗಿ ಬಂದು ಬಾಗಿನ ಅರ್ಪಿಸಲಿದ್ದಾರೆ. ನಾಳೆ ಬೆಳಗ್ಗೆ ಸಂಸದರು ಜಲಾಶಯಕ್ಕೆ `ಭೇಟಿ ನಡೀಇ ಬಾಗಿನ ಅರ್ಪಿಸಲಿದ್ದಾರೆ ಎಂದು ಹೇಳಿದರು. ಅಲ್ಲದೆ ಸದಾ ಜಲಾಶಯ ಹೀಗೇ ತುಂಬಿರಬೇಕು, ವರುಣ ಇದೇ ರೀತಿಯಲ್ಲಿ ಕರುಣೆ ತೋರಿ, ರೈತರಿಗೂ ಅನುಕೂಲವಾಗಬೇಕು, ರೈತರು ಮತ್ತು ಜನರು ಸಂತಸವಾಗಿರಬೇಕು ಎಂದು ಪ್ರಾರ್ಥಿಸುವುದಾಗಿ ಹೇಳಿದರು.
ಇನ್ನು ಭಾರತ ರತ್ನ ಸರ್.ಎಂ. ಸರ್‌ಎಂ ವಿಶ್ವೇಶ್ವರಯ್ಯ ಅವರು ಚಿಕ್ಕಬಳ್ಳಾಪುರದ ಶ್ರೀನಿವಾಸ ಸಾಗರ ಮತ್ತು ಜಕ್ಕಲಮಡಗು ಜಲಾಶಯಗಳನ್ನು ನಿರ್ಮಿಸಿದ್ದಾರೆ. ಅಂದು ಅವರು ಜಲಾಶಯ ನಿರ್ಮಸಿಇದ ಕಾರಣ ಇಂದು ಎರಡು ನಗರಗಳ ಲಕ್ಷಾಂತರ ಮಂದಿಯ ದಾಹ ತೀರಲು ಸಾಧ್ಯವಾಗಿದೆ. ಹಾಗಾಗಿ ಸರ್‌ಎಂವಿ ಅವರನ್ನು ಇಂದು ಸ್ಮರಿಸಬೇಕಿದೆ ಎಂದರು.