ವಿಕಲಚೇತನ ಮಕ್ಕಳಿಗಾಗಿ ಉಚಿತಆರೋಗ್ಯ ಶಿಬಿರ
1 min readವಿಕಲಚೇತನ ಮಕ್ಕಳಿಗಾಗಿ ಉಚಿತಆರೋಗ್ಯ ಶಿಬಿರ
ಚಿಕ್ಕಬಳ್ಳಾಪುರ ಬಿಇಒ ಕಚೇರಿಯಲ್ಲಿ ನಡೆದ ಯಶಸ್ವಿ ಶಿಬಿರ
ಚಿಕ್ಕಬಳ್ಳಾಪುರ ನಗರದ ಬಿಇಒ ಕಚೇರಿಯಲ್ಲಿಇಂದು ವಿಕಲಚೇತನ ಮಕ್ಕಳಿಗೆ ಉಚಿತಆರೋಗ್ಯ ಶಿಬಿರ ಏರ್ಪಡಿಸಲಾಗಿತ್ತು. ಜಿಲ್ಲೆಯಾಧ್ಯ0ತ ಎರಡು ವರ್ಗಗಳಾಗಿ ವಿಂಗಡಿಸಿದ್ದ ಒಟ್ಟು 671 ಮಕ್ಕಳಿಗೆ ಈ ಶಿಬಿರದ ಸದುಪಯೋಗ ಪಡೆಯುವಂತೆ ಸೂಚಿಸಿಲಾಗಿತ್ತು.
ಚಿಕ್ಕಬಳ್ಳಾಪುರದ ಬಿಇಒ ಕಚೇರಿಯಲ್ಲಿಇಂದು ಆಯೋಜಿಸಿದ್ದ ವಿಕಲಚೇತನ ಮಕ್ಕಳಿಗೆ ಉಚಿತಆರೋಗ್ಯ ಶಿಬಿರವನ್ನು ಜಿಲ್ಲಾಡಳಿತ ಜಿಲ್ಲಾಪಂಚಾಯತ್,ಶಿಕ್ಷಣ ಇಲಾಖೆ ಹಾಗೂ ಅಲಿಂಕೋ ಸಂಸ್ಥೆ ಸಹಯೋಗದೊಂದಿಗೆ 1 ರಿಂದ 12 ನೇ ತರಗತಿ ಮಕ್ಕಳಿಗೆ ಶಿಬಿರ ಏರ್ಪಡಿಸಲಾಗಿತ್ತು. ನಗರಸಭೆ ಅಧ್ಯಕ್ಷ ಗಂಜೇದ್ರ ಹಾಗೂ ಕ್ಷೇತ್ರ ಶಿಕ್ಷಾಣಾಧಿಕಾರಿ ನೇತೃತ್ವದಲ್ಲಿ ನಡೆದ ಶಿಬಿರದಲ್ಲಿ ಶಿಕ್ಷಣ ಇಲಾಖೆಯ ವಿವಿಧ ಅಧಿಕಾರಿಗಳು ಭಗಿಯಾಗಿಆರೋಗ್ಯ ಶಿಬಿರದ ಬಗ್ಗೆ ಮಾಹಿತಿ ನೀಡಿದರು.
ಬಿಇಒ ಕಚೇರಿಆವರಣದಲ್ಲಿ ವಿಕಲಚೇತನ ಮಕ್ಕಳಿಗೆ ಆರೋಗ್ಯತಪಾಸಣೆ, ಮೌಲ್ಯಾಂಕನ ಶಿಬಿರ, ಮಂದದೃಷ್ಟಿ, ಶ್ರವಣ ಹಾಗೂ ದೈಹಿಕ ನ್ಯೂನತೆ ಬಗ್ಗೆ ಪರಿಶೀಲನೆ ನಡೆಸಲಾಯಿತು.ಚಿಕ್ಕಬಳ್ಳಾಪುರ ನಗರಸಭೆಯಿಂದ ನಗರದಾದ್ಯಂತ ವಿಕಲಚೇತನ ಮಕ್ಕಳಿಗೆ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಿಕೊಡಲಾಗುವುದೆಂದು ನಗರಸಭೆ ಅಧ್ಯಕ್ಷ ಗಜೇಂದ್ರ ತಿಳಿಸಿದರು.