ಟೆಸ್ಟ್ ಸೀರೀಸ್ ಕಾರ್ಯಕ್ರಮಕ್ಕೆ ಚಾಲನೆಗೆ ಮುಂದಾದ ಶಾಸಕ ಪ್ರದೀಪ್ ಈಶ್ವರ್
1 min readಟೆಸ್ಟ್ ಸೀರೀಸ್ ಕಾರ್ಯಕ್ರಮಕ್ಕೆ ಚಾಲನೆಗೆ ಮುಂದಾದ ಶಾಸಕ ಪ್ರದೀಪ್ ಈಶ್ವರ್
ಎಸ್‌ಎಸ್‌ಎಲ್‌ಸಿ ಫಲಿತಾಂಶ ಹೆಚ್ಚಳ ಮಾಡಲು ಕಾರ್ಯಕ್ರಮ
ಶಾಸಕ ಪ್ರದೀಪ್ ಈಶ್ವರ್
ಇತ್ತೀಚೆಗಷ್ಟೇ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ವಿದ್ಯಾರ್ಥಿಗಳಿಗೆ ವೈಯುಕ್ತಿಕ ಸ್ಕಾಲರ್ ಶಿಫ್ ಸ್ಕೀಂ ಘೋಷಣೆ ಮಾಡಿರುವ ಶಾಸಕ ಪ್ರದೀಪ್ ಈಶ್ವರ್, ಈ ಬಾರಿ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಎಸ್ ಎಸ್ ಎಲ್ ಸಿ ಫಲಿತಾಂಶ ಹೆಚ್ಚಳ ಮಾಡಲು ಎಂಎಲ್ಎಾ ಪ್ರದೀಪ್ ಈಶ್ವರ್ ಟೆಸ್ಟ್ ಸೀರೀಸ್ ಎಂಬ ಮತ್ತೊಂದು ಹೊಸ ಕಾರ್ಯಕ್ರಮ ಚಾಲನೆಗೆ ಮುಂದಾಗಿದ್ದು ಶಿಕ್ಷಣ ಕ್ಷೇತ್ರದಲ್ಲಿ ಮತ್ತೊಂದು ದಿಟ್ಟ ಹೆಜ್ಜೆ ಇಡುತ್ತಿದ್ದಾರೆ….ಅಂದಹಾಗೆ ಏನಪ್ಪಾ ಇದು ಟೆಸ್ಟ್ ಸಿರೀಸ್ ಅಂದ್ರಾ ಈ ಸ್ಟೋರಿ ನೋಡಿ.
ಹೌದು ಸ್ವತಃ ಉಪನ್ಯಾಸಕರಾಗಿ ನೀಟ್ ಪರಿಶ್ರಮ ಆಕಾಡೆಮಿ ಎಂಬ ಸಂಸ್ಥೆ ಕಟ್ಟಿ ಸಾವಿರಾರು ಮಂದಿಯನ್ನ ವೈದ್ಯರನ್ನಾಗಿಸಿ ನಂತರ ಶಾಸಕರೂ ಆದ ಪ್ರದೀಪ್ ಈಶ್ವರ್ ಅವರಿಗೆ ಶೈಕ್ಷಣಿಕ ಕ್ಷೇತ್ರದ ಬಗ್ಗೆ ಅತೀವ ಕಾಳಜಿ…ಹೀಗಾಗಿ ಶಾಸಕರಾದರೂ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ್ರೂ ಶಿಕ್ಷಣದ ಮೇಲಿನ ಒಲವು ಹೆಚ್ಚಾಗುತ್ತಲೇ ಇದೆ..ಆದ್ರಲ್ಲೂ ತಮ್ಮ ಕ್ಷೇತ್ರದ ಮಕ್ಕಳನ್ನ ವಿದ್ಯಾವಂತರನ್ನಾಗಿ ಮಾಡೋದಲ್ಲ ದೊಡ್ಡ ದೊಡ್ಡ ಕಂಪನಿಗಳನ್ನ ಕಟ್ಟೋವರನ್ನಾಗಿ ಮಾಡ್ತೀನಿ ಅಂತ ಹೇಳಿದ್ದ ಶಾಸಕ ಪ್ರದೀಪ್ ಈಶ್ವರ್ ಅ ನಿಟ್ಟಿನಲ್ಲಿ ಒಂದೊ0ದೆ ಹೆಜ್ಜೆ ಇಡ್ತಾ ಶೈಕ್ಷಣಿಕ ಕ್ಷೇತ್ರದಲ್ಲಿ ಹಲವು ಸಮಾಜಮುಖಿ ಕಾಯಕಗಳನ್ನ ಮಾಡತೊಡಗಿದ್ದಾರೆ. ಶಾಸಕರಾದ ನಂತರ ಮೊದಲನೇ ವರ್ಷದಲ್ಲಿ ಕ್ಷೆತ್ರದ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ಕೊಟ್ಟು ಸಹಕಾರಿಯಾದರು..ಈಗ ಎರಡನೇ ವರ್ಷವೂ ಸ್ಕಾಲರ್ ಶಿಪ್ ನೀಡಲು ಸಕಲ ತಯಾರಿಗಳನ್ನ ನಡೆಸಿದ್ದು…ಅದರ ಜೊತೆಯಲ್ಲೇ ಈಗ ಕ್ಷೇತ್ರದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗಾಗಿ ಹೊಸ ಕಾರ್ಯಕ್ರಮ ರೂಪಿಸಿದ್ದಾರೆ. ಕಳೆದ ವರ್ಷವೂ ಸೂಪರ್ 60 ಅಂತ 60 ಮಂದಿ ಸರ್ಕಾರಿ ಶಾಲೆಯ ಬಡ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳನ್ನ ಬೆಂಗಳೂರಿಗೆ ಕರೆದೊಯ್ದು ಉತ್ತಮ ಫಲಿತಾಂಶ ಬರುವಂತೆ ಅಭ್ಯಾಸ ಮಾಡಿಸಿದ್ರು…ಈಗ ಕ್ಷೇತ್ರದ ೨೪ ಸರ್ಕಾರಿ ಹಾಗೂ ಸರ್ಕಾರಿ ಅನುದಾನಿತ ಎಲ್ಲಾ ಪ್ರೌಢಶಾಲೆಗಳ 3000 ಕ್ಕೂ ಹೆಚ್ಚು ಎಸ್ಎಬಸ್ಎಲಲ್ಸಿತ ವಿದ್ಯಾರ್ಥಿಗಳಿಗೆ 48 ದಿನವೂ ನಿತ್ಯ ಘಟಕ ಪರೀಕ್ಷೆ ನಡೆಸಲು ತಯಾರಿ ಮಾಡಿಕೊಂಡಿದ್ದಾರೆ. ಮುಂದಿನ ತಿಂಗಳು ನವೆಂಬರ್ 04 ರಿಂದ ಡಿಸೆಂಬರ್ 31 ರವರೆಗೆ ಈ ಘಟಕ ಪರೀಕ್ಷೆಗಳು ನಡೆಯಲಿವೆ. ಪ್ರತಿದಿನವೂ ಆಯಾ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲಾಗುವುದು. ಆದ್ರೆ ಈ ಪರೀಕ್ಷೆ ನಡೆಸಲು ಬೇಕಾಗುವ ಎಲ್ಲಾ ಪ್ರಶ್ನೆ ಪತ್ರಿಕೆಯ ಜೊತೆಗೆ ಅದರ ಕೆಳಗಡೆಯೇ ಉತ್ತರ ಬರೆಯಲು ಬೇಕಾಗುವಷ್ಟು ಖಾಲಿ ಜಾಗ ಇರುವಂತಹ ಪತ್ರಿಕೆಯನ್ನ ಶಾಸಕ ಪ್ರದೀಪ್ ಈಶ್ವರ್ ತಮ್ಮ ವೈಯುಕ್ತಿಕ ಹಣದಲ್ಲಿ ತಯಾರಿಸಲಿದ್ದಾರೆ. ಪ್ರತಿದಿನವೂ ಶಾಲೆಗೆ ಪ್ರಶ್ನೆಪತ್ರಿಕೆಗಳನ್ನ ತಲುಪಸಿ ಪರೀಕ್ಷೆ ನಡೆಸಲಾಗುವುದು, ಆಯಾ ದಿನವೇ ಉತ್ತರ ಪತ್ರಿಕೆಗಳನ್ನ ಡಿಡಿಪಿಐ ಕಚೇರಿಗೆ ತಲುಪಿಸಿ ಬೇರೊಂದು ಶಾಲೆಯ ಶಿಕ್ಷಕರು ಅದರ ಮೌಲ್ಯಮಾಪನ ಮಾಡಲಿದ್ದು ವಾರದ ನಂತರ ಫಲಿತಾಂಶ ಪ್ರಕಟಿಸಲಾಗುವುದು. ಇದೇ ರೀತಿ 48 ದಿನ ಇದುವರೆಗೂ ನಡೆದಿರುವ ಪಠ್ಯಕ್ಕೆ ಸಂಬ0ಧಿಸಿದ ಪರೀಕ್ಷೆ ನಡೆಸಲಾಗುತ್ತದೆ. ಇದ್ರಿಂದ ವಿದ್ಯಾರ್ಥಿಗಳು ಒದುವ ಅಭ್ಯಾಸ ಹೆಚ್ಚು ಮಾಡಿಕೊಳ್ತಾರೆ, ಅಭ್ಯಾಸ ಹೆಚ್ಚಾಗಿ ಪರೀಕ್ಷೆಯಲ್ಲಿ ಪಾಸಾಗಲಿದ್ದು ಫಲಿತಾಂಶ ಹೆಚ್ಚಾಗಲಿದೆ ಅನ್ನೋ ಭರವಸೆ ಶಾಸಕರದ್ದಾಗಿದೆ. ಈ ಹೊಸ ಕಾರ್ಯಕ್ರಮಕ್ಕೆ ಪ್ರಶ್ನೆ ಪತ್ರಿಕೆ ತಯಾರಿಕೆಗೆ 10 ರಿಂದ 15 ಲಕ್ಷಕ್ಕೂ ಹೆಚ್ಚು ಹಣ ಖರ್ಚಾಗಲಿದ್ದು ನನ್ನ ಸ್ವಂತ ಹಣ ಭರಿಸಲಾಗುತ್ತಿದೆ ಅಂತ ಶಾಸಕ ಪ್ರದೀಪ್ ಈಶ್ವರ್ ತಿಳಿಸಿದ್ದಾರೆ.
ಹೀಗಾಗಿ ಈ ಕಾರ್ಯಕ್ರಮ ಚಾಲನೆ ಮಾಡುವ ಸಲುವಾಗಿ ಇಂದು ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಶಾಸಕ ಪ್ರದೀಪ್ ಈಶ್ವರ್ ಶಾಲೆಯ ಮುಖ್ಯ ಶಿಕ್ಷಕರೊಂದಿಗೆ ಸಂವಾದ ನಡೆಸಿದರು. ಈ ವೇಳೆ ಶಿಕ್ಷಕರು, ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಶಾಲೆಗಳಲ್ಲಿ ಶಿಕ್ಷಕರ ಕೊರತೆ, ಅತಿಥಿ ಶಿಕ್ಷಕರಿಗೆ ಕಡಿಮೆ ಸಂಬಳ ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ಗಮನಕ್ಕೆ ತಂದರು.