ನಂಜನಗೂಡು ನಗರಸಭೆಯಲ್ಲಿ ಭ್ರಷ್ಟಾಚಾರದ ಆರೋಪ
1 min readನಂಜನಗೂಡು ನಗರಸಭೆಯಲ್ಲಿ ಭ್ರಷ್ಟಾಚಾರದ ಆರೋಪ
ಸಾಮಾನ್ಯ ಸಭೆಯಲ್ಲಿ ತನಿಖೆಗೆ ಆಗ್ರಹ
ಕಳೆದ ಒಂದೂವರೆ ವರ್ಷದ ಬಳಿಕ, ನೂತನ ನಗರಸಭಾ ಅಧ್ಯಕ್ಷ ಶ್ರೀಕಂಠ ಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೌನ್ಸಿಲ್ ಸಾಮಾನ್ಯ ಸಭೆಯಲ್ಲಿ, ಭ್ರಷ್ಟಾಚಾರದ ಗಂಭೀರ ಆರೋಪಗಳು ಕೇಳಿಬಂದವು. ಸಭೆಯಲ್ಲಿ ಶಾಸಕ ದರ್ಶನ್ ದ್ರುವ ನಾರಾಯಣ್ ಅವರು ಸಹ ಭಾಗವಹಿಸಿದ್ದರು.
ವಾರ್ಡು ಸದಸ್ಯರು, ಅಧಿಕಾರಿಗಳು ಕೆಲಸಗಳನ್ನು ಸರಿಯಾಗಿ ಮಾಡದೆ, ತಮ್ಮ ಮನಸ್ಸಿನಂತೆ ಕಾರ್ಯನಿರ್ವಹಿಸುತ್ತಿರುವುದಾಗಿ ಆರೋಪಿಸಿದರು. ಅರ್ಧಗತಿಯಲ್ಲಿ ನಿಂತ ಕಾಮಗಾರಿಗಳಿಗೆ ಪೂರ್ಣ ಬಿಲ್ ವಸೂಲಿ ಮಾಡಲಾಗಿದೆ, ಕಾಮಗಾರಿ ಯೋಜನೆಗಿಂತಲೂ ದುಪ್ಪಟ್ಟು ಲೆಕ್ಕ ತೋರಿಸಲಾಗುತ್ತಿದೆ, ಮತ್ತು ಯಾವುದೇ ಅನುಮತಿ ಇಲ್ಲದೆ ಹೋಟೆಲ್, ಲಾಡ್ಜ್ ಹಾಗೂ ಕಮರ್ಷಿಯಲ್ ಮಳಿಗೆಗಳಿಗೆ ಅಕ್ರಮ ಹಣ ಪಡೆಯಲಾಗಿದೆ ಎಂಬ ಆರೋಪಗಳು ಗಂಭೀರವಾಗಿ ಚರ್ಚೆಗೆ ಬಂದವು.
ಈ ಅವ್ಯವಹಾರಗಳಿಂದ ಲಕ್ಷಾಂತರ ರೂಪಾಯಿ ದುರುಪಯೋಗವಾಗಿದೆ, ಇದಕ್ಕೆ ಸಂಬ0ಧಿಸಿದ ಎಲ್ಲ ಆರೋಪಗಳನ್ನು ತನಿಖೆಗೆ ಒಳಪಡಿಸಬೇಕು ಎಂದು ಸದಸ್ಯರು ಶಾಸಕರಲ್ಲಿ ಮನವಿ ಮಾಡಿದರು. ಶಾಸಕರಾದ ದರ್ಶನ್ ದ್ರುವ ನಾರಾಯಣ್, ಎಲ್ಲಾ ಸದಸ್ಯರ ಆರೋಪಗಳನ್ನು ಆಲಿಸಿ, ಅಕ್ರಮದ ಲಕ್ಷಣಗಳು ಸ್ಪಷ್ಟವಾಗುತ್ತಿದ್ದು, ಇದು ತನಿಖೆಗೆ ಒಳಪಡಿಸಲಾಗುವುದು ಎಂದು ಭರವಸೆ ನೀಡಿದರು. ಅವರು ಅಧಿಕಾರಿಗಳಿಂದ ಸಮರ್ಪಕ ಉತ್ತರಗಳನ್ನು ಪಡೆಯದೇ, ಮುಂದೆ ಎಲ್ಲಾ ವಾರ್ಡ್ಗಳಲ್ಲಿ ಪರಿಶೀಲನೆ ನಡೆಸುವುದಾಗಿ ಹೇಳಿ, ಅಧಿಕಾರಿಗಳಿಗೆ ತಮ್ಮ ಕಾರ್ಯಚಟುವಟಿಕೆಗಳಲ್ಲಿ ಮುನ್ಸೂಚನೆ ನೀಡಿದರು. ಈ ಸಭೆಯಲ್ಲಿ ನಗರಸಭಾ ಆಯುಕ್ತ ನಂಜು0ಡಸ್ವಾಮಿ, ಸಹಾಯಕ ಕಾರ್ಯಪಾಲಕ ಅಭಿಯಂತರ ಮಹೇಶ್ ಕುಮಾರ್, ಉಪಾಧ್ಯಕ್ಷೆ ರಿಯಾನ್ ಬಾನು ಹಾಗೂ ನಗರಸಭಾ ಸದಸ್ಯರು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.
ಕುಮಾರ್ ನಂಜನಗೂಡು: