ಚಿಕ್ಕಬಳ್ಳಾಪುರದಲ್ಲಿ ಜಿಟಿ ಜಿಟಿ ಮಳೆಯ ಕಾಟ
1 min readಚಿಕ್ಕಬಳ್ಳಾಪುರದಲ್ಲಿ ಜಿಟಿ ಜಿಟಿ ಮಳೆಯ ಕಾಟ
ಮಲೆನಾಡಿನಂತಾದ ವಿಶ್ವ ಪ್ರಸಿದ್ಧ ನಂದಿಗಿರಿಧಾಮ
ನಿರ0ತರ ಮಳೆಗೆ ಅಲ್ಲಲ್ಲಿ ಅವಾಂತರಗಳು
ಬ0ಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ಚಿಕ್ಕಬಳ್ಳಾಪುರದ ಮೇಲೂ ಬೀರಿದ್ದು, ಜಿಟಿ ಜಿಟಿ ಮಳೆಯಿಂದಾಗಿ ಕಳೆದ ಎರಡು ದಿನಗಳಿಂದ ನಿರಂತರ ಮೋಡ ಕವಿದ ವಾತವಾರಣವಿದೆ. ಬಿಟ್ಟು ಬಿಡದೆ ತುಂತರು ಮಳೆಯಾಗುತ್ತಿದ್ದು, ದೈನಂದಿನ ಕೆಲಸ ಕಾರ್ಯಗಳಿಗೆ ತೀವ್ರ ತೊಂದರೆ ಅನುಭವಿಸುವಂತಾಗಿದೆ.
ಕಳೆದ ಎರಡು ದಿನಗಳಿಂದ ಚಿಕ್ಕಬಳ್ಳಾಪುರ ಮಲೆನಾಡನ್ನು ನೆನಪಿಸುವಂತಿದೆ. ಇನ್ನು ವಿಶ್ವ ಪ್ರಸಿದ್ಧ ನಂದಿ ಗಿರಿಧಾಮವಂತೂ ಕಾಶ್ಮೀರವನ್ನು ನೆನಪಿಸುತ್ತಿದ್ದು, ಪ್ರತಿನಿತ್ಯ ಸಂಚರಿಸಲೇಬೇಕಾದ ಉಧ್ಯೋಗಿಗಳು ಮತ್ತು ವಿದ್ಯಾರ್ಥಿಗಳ ಪಾಡು ಹೇಳತೀರದಾಗಿದೆ. ಶಾಲಾ ಕಾಲೇಜಿಗೆ ಹೋಗಿ ಬರಲು, ಕೆಲಸದ ನಿಮಿತ್ತ ಕಚೇರಿಗಳಿಗೆ ತೆರಳುವ ಉದ್ಯೋಗಿಗಳು, ಸಾರ್ವಜನಿಕರು ಜಡಿ ಮಳೆಯಿಂದ ಪರದಾಡುವಂತಾಗಿದೆ.
ಸತತವಾಗಿ ಮಳೆ ಸುರಿಯುತ್ತಿರುವ ಪರಿಣಾಮ ಜನರು ಛತ್ರಿಗಳ ಮೊರೆಹೋಗಿದ್ದಾರೆ. ಪಂಚಗಿರಿಗಳಾದ ನಂದಿಗಿರಿಧಾಮ, ಚನ್ನಗಿರಿ, ಬ್ರಹ್ಮಗಿರಿ, ದಿಬ್ಬಗಿರಿ, ಸ್ಕಂದಗಿರಿಯ ಸಾಲುಗಳು ಮೋಡಗಳಿಂದ ಆವೃತವಾಗಿದ್ದು, ನೋಡಲು ನಯನಮನೋಹರವಾಗಿದೆ. ಬರದನಾಡು ಚಿಕ್ಕಬಳ್ಳಾಪುರ ಒಂದು ರೀತಿಯ ಮಲೆನಾಡಿನಂತೆ ಭಸವಾಗುತ್ತಿದೆ. ಮತ್ತೊಂದು ಕಡೆ ಚಿಕ್ಕಬಳ್ಳಾಪುರ ನಗರದ ಹೊರವಲಯದಲ್ಲಿರುವ ಕ್ಯಾಂಪಸ್ ಬಳಿಯ ಹೂವಿನ ಮಾರುಕಟ್ಟೆ ಕೆಸರುಗೆಯಾಗಿ ಪರಿವರ್ತನೆಯಾಗಿದೆ. ಹೂವಿನ ಬೆಲೆಯಿಲ್ಲಿ ಇಳಿಕೆಯಾಗಿದ್ದು, ರೈತರಿಗೆ ಮಳೆಯಿಂದ ಸಂತಸವಾದರೆ ಮತ್ತೊಂದು ಕಡೆ ಹೂ ಬೆಳೆಗಾರರಿಗೆ ಹೂ ಕಟಾವು ಮಾಡಲು ತೊಂದೆರೆಯಾಗುತ್ತಿದೆ.