ಚಿಕ್ಕಬಳ್ಳಾಪುರ ನಗರಸಭೆ ವಾಹನಗಳಿಗೆ ಆಯುಧಪೂಜೆ
1 min readಚಿಕ್ಕಬಳ್ಳಾಪುರ ನಗರಸಭೆ ವಾಹನಗಳಿಗೆ ಆಯುಧಪೂಜೆ
ಪೌರಕಾರ್ಮಿಕರಿಗೆ ಬಟ್ಟೆ ವಿತರಿಸಿದ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರು
ನಗರಸಭೆ ಆದಾಯ ಹೆಚ್ಚಿಸುವ ಪಣ ತೊಟ್ಟ ಅಧ್ಯಕ್ಷ, ಉಪಾಧ್ಯಕ್ಷರು
ಪ್ರತಿನಿತ್ಯ ನಗರದ ಅಷ್ಟೂ ಕಸವನ್ನು ಸ್ವಚ್ಛಗೊಳಿಸುವ ಕಾಯಕ ಮಾಡುತ್ತಿರುವ ಪೌರಕಾರ್ಮಿಕರಿಗೆ ಇಂದು ನಗರಸಭೆಯಲ್ಲಿ ಹಬ್ಬದ ವಾತಾವರಣ. ಮೊನ್ನೆ ತಾನೇ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರು ಪೌರಕಾರ್ಮಿಕರೊಂದಿಗೆ ಊಟ ಮಾಡಿ ಸುದ್ದಿಯಾಗಿದ್ದರು. ಇದೀಗ ಅದೇ ಪೌರಕಾರ್ಮಿಕರಿಗೆ ದಸರಾ ಹಬ್ಬದ ಪ್ರಯುಕ್ತ ಬಟ್ಟೆ ವಿತರಿಸಿದ್ದಾರೆ. ಅಲ್ಲದೆ ಕಸ ಸಂಗಕ್ರಹ ವಾಹನಗಳಿಗೆ ಪೂಜೆ ಸಲ್ಲಿಸಿದರು.
ನಗರಸಬೆಯಲ್ಲಿ ಸ್ವಚ್ಛ, ಪ್ರಮಾಣಿಕ ಮತ್ತು ಭ್ರಷ್ಟಾಚಾರ ರಹಿತ ಆಡಳಿತ ನೀಡೋದಾಗಿ ನಗರಸಭೆಯ ಅಧ್ಯಕ್ಷ ಉಪಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ದಿನವೇ ಗಜೇಂದ್ರ ಮತ್ತು ನಾಗರಾಜ್ ಘೋಷಿಸಿದ್ದರು. ಈಗ ಅದನ್ನು ಅನುಷ್ಠಾನ ಮಾಡುವ ನಿಟ್ಟಿನಲ್ಲಿ ಪೌರ ಕಾರ್ಮಿಕರ ಹಿತ ಕಾಯುವತ್ತ ದೃಷ್ಟಿ ಹರಿಸುವ ಜೊತೆಗೆ ನಗರಸಭೆಗೆ ಆದಾಯ ಹೆಚ್ಚಿಸುವ ಕುರಿತು ಹೆಚ್ಚಿನ ಗಮನ ಕೇಂದ್ರೀಕರಿಸಿದ್ದಾರೆ. ಅಲ್ಲದೆ ದಸರಾ ಹಬ್ಬದ ಪ್ರಯುಕ್ತ ಪೌರ ಕಾರ್ಮಿಕರಿಗೆ ಬಟ್ಟೆ ವಿತರಣೆ, ಕಸ ಸಂಗ್ರಹ ವಾಹನಗಳಿಗೆ ಆಯುಧ ಪೂಜೆ ನೆರವೇರಿಸಿದರು.
ಪ್ರತಿನಿತ್ಯ ನಗರ ವ್ಯಾಪ್ತಿಯಲ್ಲಿ ಕಸ ಸಂಗ್ರಹಿಸುವ ಕಾಯಕದಲ್ಲಿ ನಿರತರಾಗಿರುವ ಪೌರಕಾರ್ಮಿಕರಿಗೆ ಇಂದು ರಜೆ ಘೋಷಿಸಲಾಗಿತ್ತು. ಜೊತೆಗೆ ಕಸ ಸಂಗ್ರಹ ಮಾಡುವ ಎಲ್ಲ ವಾಹನಗಳನ್ನು ಶುಭÀ್ರವಾಗಿ ತೊಳೆದು, ನಗರಸಭೆ ಆವರಣದಲ್ಲಿ ಸಾಲಾಗಿ ನಿಲ್ಲಿಸಿ, ಹೂವಿನಿಂದ ಅಲಂಕರಿಸುವ ಜೊತೆಗೆ ಹರಿಶಿಣ ಕುಂಕುಮ ಹಚ್ಚಿ. ಅಧ್ಯಕ್ಷ, ಉಪಾಧ್ಯಕ್ಷರು ಬೂದುಕುಂಬಳ ಹೊಡೆದರು. ನಂತರ ಪೌರಕಾರ್ಮಿಕರಿಗೆ ನೂತನ ಬಟ್ಟೆ ವಿತರಣೆ ಮಾಡಿದರು. ಪುರುಷರಿಗೆ ಶರ್ಟು ಮತ್ತು ಪ್ಯಾಂಟ್, ಮಹಿಳೆಯರಿಗೆ ಸೀರೆಯನ್ನು ಹರಿಶಿಣ ಕುಂಕುಮದ ಹೆಸರಿನಲ್ಲಿ ವಿತರಿಸಿದರು.
ನಂತರ ನಗರಸಭೆ ಅಧ್ಯಕ್ಷ ಗಜೇಂದ್ರ ಮಾತನಾಡಿ, ವರ್ಷವಿಡೀ ನಗರದ ಸ್ವಚ್ಛತೆಗಾಗಿ ದುಡಿಯುವ ಪೌರಕಾರ್ಮಿಕರು ಒಂದು ದಿನವಾದರೂ ರಜೆ ಪಡೆದು, ಪ್ರತಿನಿತ್ಯ ದುಡಿಯುವ ನಗರ¸ಭೆಯಲ್ಲಿಯೇ ಹಬ್ಬ ಆಚರಿಸಿಕೊಳ್ಳುವಂತೆ ಏರ್ಪಾಟು ಮಾಡುವ ಉದ್ದೇಶದಿಂದ ಇಂದು ನಗರಸಭೆಯಲ್ಲಿ ಆಯುಧ ಪೂಜೆ ಆಯೋಜಿಸಲಾಗಿದೆ ಎಂದರು. ಅಲ್ಲದೆ ಎಲ್ಲ ಪೌರಕಾರ್ಮಿಕರಿಗೂ ನೂತನ ಬಟ್ಟೆ ವಿತರಣೆ ಮಾಡಲಾಗಿದೆ ಎಂದು ಹೇಳಿದರು.
ಉಪಾಧ್ಯಕ್ಷ ನಾಗರಾಜ್ ಮಾತನಾಡಿ, ನಗರಸಭೆಯಲ್ಲಿ ಸ್ವಚ್ಛ, ಪ್ರಾಮಾಣಿಕ ಮತ್ತು ಭ್ರಷ್ಟಾಚಾರ ರಹಿತ ಆಡಳಿತ ನೀಡುವ ಭರವಸೆಯನ್ನು ಅಧಿಕಾರ ವಹಿಸಿಕೊಂಡ ದಿನವೇ ನೀಡಲಾಗಿದ್ದು, ಅದರಂತೆ ನಗರಸಭೆಯಲ್ಲಿ ನೆನೆಗುದಿಗೆ ಬಿದ್ದಿರುವ ಅನೇಕ ಕೆಲಸಗಳನ್ನು ಪೂರ್ತಿ ಮಾಡಲು ಈಗಾಗಲೇ ಮುಂದಾಗಿರುವುದಾಗಿ ಹೇಳಿದರು. ನಗರಸಭೆಗೆ ಮುಖ್ಯವಾಗಿ ಆದಾಯ ಅಗತ್ಯವಿದ್ದು, ಬಂಡವಾಳ ಕ್ರೂಡೀಕರಣದತ್ತ ಗಮನ ಹರಿಸಿ, ನೆಲಸುಂಕ ಸೇರಿದಂತೆ ಇತರೆ ಹರಾಜು ಪ್ರಕ್ರಿಯೆ ಇಂದು ಪೂರೈಸಲಾಗಿದೆ. ಇದರಿಂದ ನಗರಸಭೆಗೆ ಸ್ವಲ್ಪ ಮಟ್ಟಿಗಿನ ಆದಾಯ ಲಭಿಸಲಿದೆ ಎಂದರು.
ವಾಣಿಜ್ಯ ಮಳಿಗೆಗಳ ಹರಾಜು ಪ್ರಕ್ರಿಯೆ ನಡೆದು, ಎಲ್ಲ ಅಂಗಡಿಗಳೂ ಹರಾಜು ಮಾಡಿದರೆ ಪ್ರತಿ ವರ್ಷ ಕನಿಷ್ಠ 50 ಲಕ್ಷ ಆದಾಯ ನಗರಸಭೆಗೆ ಬರಲಿದೆ. ಇದರಿಂದ ನಗರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸಹಕಾರಿಯಾಗಲಿದ್ದು, ನಗರಸಭೆಯ ಆದಾಯ ಹೆಚ್ಚಿಸುವತ್ತ ಹೆಚ್ಚಿನ ಗಮನ ಕೇಂದ್ರೀಕರಿಸಿರುವುದಾಗಿ ನಾಗರಾಜ್ ಹೇಳಿದರು. ಈ ಸಂದರ್ಭದಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಆನಂದರೆಡ್ಡಿ, ನಗರಸಭೆ ಸದಸ್ಯರು, ನಗರಸಭೇ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಜರಿದ್ದರು.