ಅಂತೂ ಇಂತೂ ನಡೆಯಿತು ನಗರಸಭೆಯಲ್ಲಿ ಹರಾಜು
1 min readಅಂತೂ ಇಂತೂ ನಡೆಯಿತು ನಗರಸಭೆಯಲ್ಲಿ ಹರಾಜು
ಮೂರು ಬಾರಿ ಹರಾಜು ಪ್ರಕ್ರಿಯೆ ಮುಂದೂಡಿದ ಇತಿಹಾಸ
ನೆಲಸುಂಕ, ಖಾಸಗಿ ಬಸ್ ನಿಲ್ದಾಣ. ಶೌಚಾಲಯ ಹರಾಜು
ಹೇಳಿದಂತೆ ಹರಾಜು ನಡೆಸಿದ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರು
ಅ0ತೂ ನಗರಸಭೆಯ ಆಸ್ತಿಗಳ ಸುಂಕ ವಸೂಲಿ ಹರಾಜು ಇಂದು ನಡೆದಿದೆ. ಇದೀಗ ಸುಂಕದ ಹರಾಜು ನಡೆದಿದ್ದು, ಇನ್ನು ಮುಂದೆ ಅಧಿಕೃತವಾಗಿ ವ್ಯಾಪಾರಿಗಳು ಸುಂಕ ಪಾವತಿಸಬೇಕಾಗಿದೆ. ಅಲ್ಲದೆ ನಗರಸಭೆಗೆ ಆದಾಯವೂ ಹೆಚ್ಚಲಿದೆ. ಒಟ್ಟಿನಲ್ಲಿ ಮೂರು ಭಾರಿ ಮುಂದೂಡಿದ್ದ ಹರಾಜು ಪ್ರಕ್ರಿಯೆ ಇಂದು ಯಶಸ್ವಿಯಾಗಿ ನಡೆಯಿತು.
ಹೌದು, ಚಿಕ್ಕಬಳ್ಳಾಪುರ ನಗರಸಭೆ ಆಸ್ತಿಗಳ ಸುಂಕ ವಸೂಲಿಯ ಬಗ್ಗೆ ಕಳೆದ ಹಲವು ವರ್ಷಗಳಿಂದ ನಗರಸಬೆ ನಿರ್ಲಕ್ಷ ಮುಂದುವರಿದೇ ಇತ್ತು. ಇದಕ್ಕೆ ಕಾರಣ ನಗರಸಭೆಯಲ್ಲಿ ಆಢಳಿತ ಮಂಡಳಿ ಇಲ್ಲದಿರುವುದು, ಅಧಿಕಾರಿಗಳ ಮೇಲೆ ಜನಪ್ರತಿನಿಧಿಗಳು ಒತ್ತಡ ಹೇರುವ ಪ್ರಕರಣಗಳ ಕಾರಣ ಈ ಹರಾಜು ಪ್ರಕ್ರಿಯೆ ಪದೇ ಪದೇ ಮುಂದೂಡಲಾಗಿತ್ತು. ಆದರೆ ಇದೀಗ ನಗರಸಭೆಗೆ ಅಧ್ಯಕ್ಷ, ಉಪಾಧ್ಯಕ್ಷರು ಆಯ್ಕೆಯಾಗಿದ್ದು, ಇಂದು ಎಲ್ಲ ಸುಂಕ ವಸೂಲಿಯ ಹರಾಜು ಯಶಸ್ವಿಯಾಗಿ ನಡೆಸಲಾಯಿತು.
ಇಂದು ಬೆಳಗ್ಗೆ ನಗರಸಬೆ ಆವರಣದಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ನಗರಸಭೆ ಅಧ್ಯಕ್ಷ ಗಜೇಂದ್ರ, ಉಪಾಧ್ಯಕ್ಷ ನಾಗರಾಜ್ ನಗರಸಭೆ ಮಾಜಿ ಅಧ್ಯಕ್ಷ ಆನಂದರೆಡ್ಡಿ ಸೇರಿದಂತೆ ನಗರಸಭೆಯ ಬಹುತೇಕ ಎಲ್ಲ ಸದಸ್ಯರು ಭಾಗವಹಿಸಿದ್ದರು. ಅಲ್ಲದೆ ನಗರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿ ಹರಾಜು ಪ್ರಕ್ರಿಯೆಯಲ್ಲಿ ಭಗವಹಿಸಿದ್ದರು. ನಗರದಲ್ಲಿ ರಸ್ತೆ ಬದಿ ವ್ಯಾಪಾರ ಸೇರಿದಂತೆ ಎಲ್ಲ ರೀತಿಯ ವ್ಯಾಪಾರಿಗಳಿಂದ ನೆಲ ಸುಂಕ ವಸೂಲಿ ಮಾಡುವುದು, ಖಾಸಗಿ ಬಸ್ ನಿಲ್ದಾಣದಲ್ಲಿ ಬಸ್‌ಗಳಿಂದ ಸುಂಕ ವಸೂಲಿ, ನಗರಸಭೆಗೆ ಸೇರಿದ ಹುಣಸೆ ಮರಗಳಲ್ಲಿ ಪ್ರಸ್ತುತ ಬಿಟ್ಟಿರುವ ಹಣ್ಣು ಕೊಯ್ದುಕೊಳ್ಳುವುದು, ಜೂನಿಯರ್ ಕಾಲೇಜು ಮುಂಭಗದಲ್ಲಿರುವ ಸಾರ್ವಜನಿಕ ಶೌಚಾಲಯ ನಿರ್ವಹಣೆಗೆ ಹರಾಜು ಪ್ರಕ್ರಿಯೆ ನಡೆಯಿತು.
ಹರಾಜಿನಲ್ಲಿ ನೆಲಸುಂಕ ವಸೂಲಿಗೆ ಕಳೆದ 2022ರಿಂದಲೂ ಯಾವುದೇ ಹರಾಜು ಪ್ರಕ್ರಿಯೆ ನಡೆದಿರಲಿಲ್ಲ. 2022ರಲ್ಲಿ 11 ಲಕ್ಷಕ್ಕೆ ಹರಾಜು ಮಾಡಲಾಗಿತ್ತು. ಆದರೆ ಈ ಬಾರಿ 16.40 ಲಕ್ಷ ರುಪಾಯಿಗೆ ನೆಲಸುಂಕ ವಸೂಲಿ ಹರಾಜಾಗಿದೆ. ಖಾಸಗಿ ಬಸ್ ನಿಲ್ದಾಣಕ್ಕೆ ಬರುವ ಖಾಸಗಿ ಬಸ್‌ಗಳಿಂದ ಸುಂಕ ವಸೂಲಿ ಮಾಡುವ ಕುರಿತು 2022ರಲ್ಲಿ 2.71ಲಕ್ಷಕ್ಕೆ ಹರಾಜಾಗಿದ್ದರೆ, ಈ ಬಾರಿ 2.92 ಲಕ್ಷಕ್ಕೆ ಹರಾಜಾಗಿದೆ. ಜೂನಿಯರ್ ಕಾಲೇಜು ಮುಂಭಗದ ಬಿಬಿ ರಸ್ತೆಯಲ್ಲಿರುವ ಸಾರ್ವಜನಿಕ ಶೌಚಾಲಯದ ಹರಾಜು 2022ರಲ್ಲಿ 1.71 ಲಕ್ಷಕ್ಕೆ ಹರಾಜಾಗಿದ್ದು, ಪ್ರಸ್ತುತ ಸಾಲಿನಲ್ಲಿ 1.92 ಲಕ್ಷಕ್ಕೆ ಹರಾಜಾಗಿದೆ. ಇನ್ನು ನಗರಸಭೆಗೆ ಸೇರಿದ ಹುಣಸೆ ಮರಗಳ ಹರಾಜು ಪ್ರಕ್ರಿಯೆ ಈವರೆಗೂ ನಡೆದೇ ಇಲ್ಲ. ಇದೇ ಮೊದಲ ಬಾರಿಗೆ ಹರಾಜು ಪ್ರಕ್ರಿಯೆ ನಡೆದು ಈ ಬಾರಿ 10.01 ಸಾವಿರಕ್ಕೆ ಮರಗಳಲ್ಲಿರುವ ಹುಣಸೇ ಹಣ್ಣಿನ ಹರಾಜು ಮಾಡಲಾಗಿದೆ.
ಇನ್ನು ಪದೇ ಪದೇ ಮುಂದೂಡುತ್ತಿರುವ ಹರಾಜು ಪ್ರಕ್ರಿಯೆಗಳ ಬಗ್ಗೆ ರೋಸಿಹೋಗಿದ್ದ ನಾಗರಿಕರಿಗೆ ಪ್ರಸ್ತುತ ಅಧ್ಯಕ್ಷ, ಉಪಾಧ್ಯಕ್ಷರಾಗಿರುವ ಗಜೇಂದ್ರ ಮತ್ತು ನಾಗರಾಜ್ ಅವರು ಅಧಿಕಾರ ವಹಿಸಿಕೊಂಡ ದಿನವೇ ಎಲ್ಲ ರೀತಿಯ ಹರಾಜು ಪ್ರಕ್ರಿಯೆಗಳನ್ನು ಶೀಘ್ರದಲ್ಲಿಯೇ ಮಾಡುವುದಾಗಿ `ಭರವಸೆ ನೀಡಿದ್ದರು. ಅಧ್ಯಕ್ಷ, ಉಪಾಧ್ಯಕ್ಷರು ಹೇಳಿದಂತೆ ಇಂದು ಹರಾಜು ಪ್ರಕ್ರಿಯೆ ನಡೆಸಿರುವುದು ವಿಶೇಷ.
ಇನ್ನು ಅದೇ ದಿನ ಅಧ್ಯಕ್ಷ, ಉಪಾಧ್ಯಕ್ಷರು ಹೇಳಿದಂತೆ ಅವಧಿ ಮುಗಿದಿರುವ ನಗರಸಭೆ ವಾಣಿಜ್ಯ ಮಳಿಗೆಗಳ ಮಾಲೀಕರನ್ನು ಖಾಲಿ ಮಾಡಿಸಿ, ಹೊಸದಾಗಿ ಹರಾಜು ಮಾಡಬೇಕಿದೆ. ಅಲ್ಲದೆ ನಗರಸಭೆಯಿಂದ ಕೋಟ್ಯಂತರ ರುಪಾಯಿ ವೆಚ್ಚ ಮಾಡಿ ನಿರ್ಮಿಸಿರುವ ವಾಣಿಜ್ಯ ಮಳಿಗೆಗಳು ನಿಯಮಾನುಸಾರ ಹರಾಜು ಮಾಡಬೇಕಿದೆ. ಈ ವಾಣಿಜ್ಯ ಮಳಿಗೆಗಳ ಹರಾಜು ಮೀಸಲಾತಿಯಂತೆ ನಡೆಸಲು ಈಗಾಗಲೇ ಆದೇಶವಾಗಿದ್ದು, ಪದೇ ಪದೇ ಅಂಗಡಿ ಮಳಿಗೆಗಳ ಹರಾಜು ಪ್ರಕರಿಯೆಯೂ ಮುಂದೂಡಲಾಗುತ್ತಿದೆ. ಅಲ್ಲದೆ ಹಲವಾರು ವರ್ಷಗಳಿಂದ ಅತಿ ಕಡಿಮೆ ಬಾಡಿಗೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಗಡಿಗಳ ಮಾಲೀಕರನ್ನು ಖಾಲಿ ಮಾಡಿಸಬೇಕಾದ ಜವಾಬ್ದಾರಿಯೂ ಪ್ರಸ್ತುತ ಅಧ್ಯಕ್ಷ, ಉಪಾಧ್ಯಕ್ಷರ ಮೇಲಿದೆ.
ಒಟ್ಟಿನಲ್ಲಿ ವಿವಿಧ ಸುಂಕ ವಸೂಲಿಯ ಹರಾಜು ಪ್ರಕ್ರಿಯೆ ಇಂದು ಮುಗಿದಿದ್ದು, ಇದೇ ರೀತಿಯಲ್ಲಿ ವಾಣಿಜ್ಯ ಮಳಿಗೆಗಳಲ್ಲಿ ಅವಧಿ ಮುಗಿದರೂ ಮುಂದುವರಿಯುತ್ತಿರುವ ಮಾಲೀಕರ ಖಾಲಿ ಮಾಡಿಸಲು ಈಗಾಗಲೇ ನ್ಯಾಯಾಲಯದ ಆದೇಶ ಇದೆ. ಹಾಗಾಗಿ ಅನಿವಾರ್ಯವಾಗಿ ಇಂತಹ ಅಂಗಡಿಗಳನ್ನು ಆದಷ್ಟು ಶೀಘ್ರದಲ್ಲಿ ಖಾಲಿ ಮಾಡಿಸುವ ಜೊತೆಗೆ ಹೊಸಬರಿಗೆ ಅವಕಾಶ ನೀಡಿದಲ್ಲಿ ನಗರಸಭೆಯ ಆದಾಯ ಹೆಚ್ಚುವ ಜೊತೆಗೆ ಹೊಸಬರಿಗೆ ಅನುಕೂಲವಾಗಲಿದೆ ಎಂದು ಆಗ್ರಹಿಸಿದ್ದಾರೆ.