ಹುಲ್ಲಹಳ್ಳಿ ಜನಸಂಪರ್ಕ ಸಭೆಯಲ್ಲಿ ಶಾಸಕ ದರ್ಶನ್ ಹೇಳಿಕೆ
1 min readತೃಪ್ತಿಕರ ರಾಜಕೀಯ ಜನಸೇವೆಗೆ ಮುಂದಾಗುವೆ
ಹುಲ್ಲಹಳ್ಳಿ ಜನಸಂಪರ್ಕ ಸಭೆಯಲ್ಲಿ ಶಾಸಕ ದರ್ಶನ್ ಹೇಳಿಕೆ
ದಿವ0ಗತ ಆರ್ ದ್ರುವ ನಾರಾಯಣ್ ಅವರ ಹಾದಿಯಲ್ಲಿ ತೃಪ್ತಿಕರ ರಾಜಕಾರಣಕ್ಕೆ ಮುಂದಾಗುವುದಾಗಿ ಶಾಸಕ ದರ್ಶನ್ ಧ್ರುವನಾರಾಯಣ್ ಹೇಳಿದರು. ಹುಲ್ಲಹಳ್ಳಿಯ ಪ್ರವಾಸಿ ಮಂದಿರದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಅವರು ಮಾತನಾಡಿದರು.
ನಂಜನಗೂಡು ತಾಲೂಕಿನ ಸಂತೆಮರಳ್ಳಿ ವಿಧನಸಭ ಕ್ಷೇತ್ರದಲ್ಲಿ ಆರ್ ಧ್ರುವನಾರಾಯಣ್ ಪ್ರತಿ ತಿಂಗಳಿಗೊಮ್ಮೆ ಜನಸಂಪರ್ಕ ಸಭೆಯನ್ನು ಕಡ್ಡಾಯವಾಗಿ ನಡೆಸುತ್ತಿದ್ದರು. ಅವರ ಆಸೆಯಂತೆಯೇ ನಂಜನಗೂಡು ಮೀಸಲು ವಿಧನಸಭ ಕ್ಷೇತ್ರದಿಂದ ಪ್ರಬುದ್ಧ ಮತದಾರರು ತಮ್ಮನ್ನು ಆಯ್ಕೆ ಮಾಡಿ ಕಳುಹಿಸಿದ್ದಾರೆ. ಕ್ಷೇತ್ರದ ಜನರ ಸೇವೆಗಾಗಿಯೇ ಇಡೀ ಜೀವನ ಮುಡುಪಾಗಿಡುವುದಾಗಿ, ಕ್ಷೇತ್ರದ ಜನರ ಕಷ್ಟ ಸುಖಗಳಲ್ಲಿ ಭಾಗಿಯಾಗಿ ಅವರ ಸೇವೆಗಾಗಿ ಸದಾ ಸಿದ್ಧನಿರುವುದಾಗಿ ಅವರು ಹೇಳಿದರು.
ಕಡ್ಡಾಯವಾಗಿ ಪ್ರತಿ ಸೋಮವಾರ ಜನಸಂಪರ್ಕ ¸ಸಭೆಯನ್ನು ಕಳೆದ ಒಂದು ವರ್ಷದಿಂದ ನಡೆಸುತ್ತಿದ್ದು, ಕ್ಷೇತ್ರದ ಗ್ರಾಮೀಣ ಪ್ರದೇಶಗಳ ಮೂಲೆ ಮೂಲೆಗಳಿಂದ ಜನಸಂಪರ್ಕ ¸ಸಭೆಗೆ ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಹಿಡಿದು ಬರುತ್ತಾರೆ .ಅವರ ಸಮಸ್ಯೆ ಪರಿಹರಿಸಲು ಮುಂದಾಗುತ್ತೇವೆ. ಜನಸಂಪರ್ಕ ಸಭೆÉಗೆ ತಾಲೂಕು ಮಟ್ಟದ ಎಲ್ಲ ಇಲಾಖೆ ಅಧಿಕಾರಿಗಳು ಹಾಜರಿರುತ್ತಾರೆ. ಜನರ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗುತ್ತೇವೆ. ಜನಸಂಪರ್ಕ ¸ಸಭೆಯಿಂದ ಕ್ಷೇತ್ರದ ಜನರಿಗೆ ಸಾಕಷ್ಟು ಅನುಕೂಲಗಳು ಆಗಿದೆ. ಹಾಗಾಗಿ ನಿರಂತರವಾಗಿ ನಾವು ಜನ ಸಂಪರ್ಕ ¸ಸಭೆಯನ್ನು ನಡೆಸುತ್ತಾ ಕ್ಷೇತ್ರದ ಜನರ ಬಳಿಗೆ ಶಾಸಕರ ನಡಿಗೆ ಎಂಬ ಪೂರ್ಣ ವಿಶ್ವಾಸದಲ್ಲಿ ನಾವು ಜನ ಸಂಪರ್ಕ¸ಸಭೆ ನಡೆಸುವುದಾಗಿ ಹೇಳಿದರು.
ಜನ ಸಂಪರ್ಕ¸ಸಭೆಯಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ತಹಸೀಲ್ದಾರ್ ಶಿವಕುಮಾರ್ ಕಾಸ್ನೂರು, ತಾಲೂಕು ಪಂಚಾಯಿತಿ ಇ ಓ ಜೆರಾಲ್ಡ್ ರಾಜೇಶ್, ರೆವಿನ್ಯೂ ಅಧಿಕಾರಿ ಪ್ರಕಾಶ್, ಪಿಡಿಒ ಶ್ರೀಧರ್ ಇದ್ದರು.