ಸರ್ಕಾರಿ ಕಿರಿಯ, ಹಿರಿಯ ನಿರ್ದೇಶಕರ ಸ್ಥಾನಕ್ಕೆ ನಾಮಪತ್ರ
1 min readಸರ್ಕಾರಿ ನೌಕರರ ಚುನಾವಣೆ
ಸರ್ಕಾರಿ ಕಿರಿಯ, ಹಿರಿಯ ನಿರ್ದೇಶಕರ ಸ್ಥಾನಕ್ಕೆ ನಾಮಪತ್ರ
ಅಕ್ಟೋಬರ್ 28 ರಂದು ನಡೆಯುವ ರಾಜ್ಯ ಸರ್ಕಾರಿ ನೌಕರರ ಸಂಘದ ಗೌರಿಬಿದನೂರು ಶಾಖೆಯ 2024 ರಿಂದ 2029ರ ಅವಧಿಗೆ ಪ್ರಾಥಮಿಕ ಶಾಲಾ ವಿಭಾಗದ ನಿರ್ದೇಶಕ ಸ್ಥಾನಕ್ಕೆ ಶಿಕ್ಷಕರಾದ ಎನ್ ಆರ್ ಮಂಜುನಾಥ್, ಬಿ ಸಂಜೀವರಾಯಪ್ಪ, ಡಿ. ಶಿವಶಂಕರ್ ಇಂದು ನಾಮಪತ್ರ ಸಲ್ಲಿಸಿದರು.
ಗೌರಿಬಿದನೂರು ನಗರದ ಎಸ್ ಎಸ್ ಇ ಎ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಚುನಾವಣೆ ಅಧಿಕಾರಿ ಶಂಕರರೆಡ್ಡಿಗೆ ನಾಮಪತ್ರ ಸಲ್ಲಿಕೆ ಮಾಡಿದ ಶಿಕ್ಷಕ ಎನ್ ಆರ್ ಮಂಜುನಾಥ್ ಮಾತನಾಡಿ, ನಿಸ್ವಾರ್ಥ ಸೇವೆ ನಿಷ್ಪಕ್ಷಪಾತ ಸಂಘಟನೆ, ಶಿಕ್ಷಕರ ಸೇವೆ ಮಾಡುವ ದೈಯೋದ್ದೆಶದೊಂದಿಗೆ ಸ್ಪರ್ಧಿಸುತ್ತಿದ್ದು, ಗೆಲ್ಲಿಸಿ, ಪ್ರಾಥಮಿಕ ಶಾಲಾ ಶಿಕ್ಷಕರ ಸೇವೆ ಮಾಡಲು ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದರು.
ಹಳೆ ಪಿಂಚಣಿ ಮರು ಸ್ಥಾಪನೆ ಹೋರಾಟಕ್ಕೆ ಮುಂಚೂಣಿಯಲ್ಲಿ ನಿಂತು ಹೋರಾಟದಲ್ಲಿ ಪಾಲ್ಗೊಂಡು ಸರ್ವಾಂಗೀಣ ಸಹಕಾರ ನೀಡುವುದು. ಸಿಆರ್ ತಿದ್ದುಪಡಿ ಹೋರಾಟಕ್ಕೆ ಸರ್ವಾಂಗೀಣ ಸಹಕಾರ ನೀಡುವುದು, ಪ್ರತಿವರ್ಷ ಶಿಕ್ಷಕರಿಗೆ ಶೈಕ್ಷಣಿಕ ಮತ್ತು ಕಾನೂನು ಅರಿವು ಕಾರ್ಯಾಗಾರ ಹಮ್ಮಿಕೊಳ್ಳುವುದು, ನಿವೃತ್ತಿ ನಂತರ ಶಿಕ್ಷಕರಿಗೆ ದೊರೆಯಬೇಕಾದ ಸೂಕ್ತ ಸೌಲಭ್ಯಗಳನ್ನು ಸಕಾಲದಲ್ಲಿ ದೊರಕುವಂತೆ ಸಹಕಾರಿಸಲಾಗುವುದು ಎಂದರು.
ಪ್ರತಿ ವರ್ಷ ಎಲ್ಲಾ ಶಿಕ್ಷಕರಿಗೆ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸುವುದು, ಕಾಲಕಾಲಕ್ಕೆ ಶಿಕ್ಷಕರ ವೇತನ ಮಾಡಿಸಲು ಪ್ರಯತ್ನಿಸುವುದು , ಅಕ್ಷರ ದಾಸೋಹದ ಕುಂದು ಕೊರತೆ ನಿವಾರಿಸಲು ಪ್ರಯತ್ನಿಸುವುದು ಇನ್ನು ಅನೇಕ ಜ್ವಲಂತ ಸಮಸ್ಯೆಗಳ ಬಗ್ಗೆ ಸರ್ಕಾರದ ಮಟ್ಟದಲ್ಲಿ ಹೋರಾಟದ ಮೂಲಕ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಿಲಾಗುವುದು ಎಂದರು.