ಭಾವಿಗೆ ಬಿದ್ದ ಕೃಷ್ಣಮೃಗದ ಮರಿ ರಕ್ಷಣೆ
1 min readಭಾವಿಗೆ ಬಿದ್ದ ಕೃಷ್ಣಮೃಗದ ಮರಿ ರಕ್ಷಣೆ
ಶಿಡ್ಲಘಟ್ಟ ತಾಲ್ಲೂಕಿನ ಪೈಲಹಳ್ಳಿಯಲ್ಲಿ ಘಟನೆ
80 ಅಡಿ ಆಳದ ಹಾಳು ಬಾವಿಯಿಂದ ರಕ್ಷಣೆ
ಸುಮಾರು 80 ಅಡಿ ಆಳದ ಹಾಳು ಬಾವಿಗೆ ಬಿದ್ದಿದ್ದ ಕೃಷ್ಣ ಮೃಗದ ಮರಿಯನ್ನು ರಕ್ಷಣೆ ಮಾಡುವಲ್ಲಿ ಅಗ್ನಿಶಾಮಕ ದಳ ಸಿಬ್ಬಂದಿ ಯಶಸ್ವಿಯಾಗಿದ್ದು, ಕೃಷ್ಣ ಮೃಗದ ಮರಿ ಸುರಕ್ಷಿತವಾಗಿದೆ.
ಶಿಡ್ಲಘಟ್ಟ ತಾಲ್ಲೂಕಿನ ಹಂಡಿಗನಾಳ ಗ್ರಾಮ ಪಂಚಾಯಿತಿಯ ಪೈಲಹಳ್ಳಿಯಲ್ಲಿ ಗಜೇಂದ್ರ ಎಂಬುವರ ಜಮೀನಿನಲ್ಲಿದ್ದ ಹಾಳು ಬಾವಿಗೆ ಕೃಷ್ಣಮೃಗದ ಮರಿ ಬಿದ್ದಿದ್ದು, ಅದನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದ್ದಾರೆ. ಭಾನುವಾರ ರಾತ್ರಿ ಕೃಷ್ಣಮೃಗದ ಮರಿಯೊಂದು ಗಜೇಂದ್ರ ಅವರ 80 ಅಡಿ ಆಳದ ಹಾಳು ಬಾವಿಗೆ ಬಿದ್ದಿದೆ. ಸೋಮವಾರ ಬೆಳಗ್ಗೆ ಅದನ್ನು ನೋಡಿದ ಗಜೇಂದ್ರ ಅರಣ್ಯ ಇಲಾಖೆಯವರಿಗೆ ಸುದ್ದಿ ಮುಟ್ಟಿಸಿದ್ದಾರೆ.
ಬಾವಿಯಲ್ಲಿ ಆರೋಗ್ಯವಾಗಿದ್ದ ಕೃಷ್ಣಮೃಗದ ಮರಿಯನ್ನು ನೋಡಿ, ಅಗ್ನಿಶಾಮಕ ದಳದವರಿಗೆ ವಿಷಯ ಮುಟ್ಟಿಸಿದ್ದಾರೆ. ಅವರು ಬಂದು ಬಾವಿಗೆ ಇಳಿದು ಮರಿಯನ್ನು ಸುರಕ್ಷಿತವಾಗಿ ಹೊರಗೆ ತಂದು ಅರಣ್ಯ ಇಲಾಖೆ ಸಿಬ್ಬಂದಿಗೆ ಒಪ್ಪಿಸಿದ್ದಾರೆ. ಗಸ್ತುಅರಣ್ಯಪಾಲಕ ನವೀನ್ ಮತ್ತು ಸಿಬ್ಬಂದಿ ಮಾರೇಶ್, ರವಿಕಿರಣ್, ಅಗ್ನಿಶಾಮಕ ಅಧಿಕಾರಿಗಳಾದ ಕದಿರಪ್ಪ, ರಾಮಾಂಜಿನಪ್ಪ, ರೇವಣ್ಣ, ರಕ್ಷಿತ್, ಹರೀಶ್, ಅಶೋಕ, ಉಮೇಶ್, ಚಿದಂಬರ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.