ಆಯುಧ ಪೂಜೆ ಪ್ರಯುಕ್ತ ಹೆಚ್ಚಿದ ಮಾಂಸದ ಬೇಡಿಕೆ
1 min readಆಯುಧ ಪೂಜೆ ಪ್ರಯುಕ್ತ ಹೆಚ್ಚಿದ ಮಾಂಸದ ಬೇಡಿಕೆ
ನಾಟಿ ಕೋಳಿಗಳತ್ತ ಜನರ ಆಕರ್ಷಣೆ ಹೆಚ್ಚು
ಬಾಗೇಪಲ್ಲಿ ತಾಲ್ಲೂಕಿನಾದ್ಯಂತ ಭಾನುವಾರ ಭರ್ಜರಿ ಮಾಂಸದೂಟದಕ್ಕೆ ಜನ ಮೊರೆ ಹೋದರು. ಬೆಳ್ಳಂಬೆಳಗ್ಗೆ ಮಾಂಸದ0ಗಡಿಗಳ ಮುಂದೆ ಸರದಿಯಲ್ಲಿ ನಿಂತು ಮಾಂಸ ಖರೀದಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಇದೀಗ ತಾನೇ ನವರಾತ್ರಿ ಮುಗಿದಿದ್ದು, ಇಂದು ಆಯುಧ ಪೂಜೆ ಪ್ರಯುಕ್ತ ಜನರು ಮಾಂಸದ ಅಂಗಡಿಗಳಿಗೆ ಮುಗಿ ಬಿದ್ದಿದ್ದರು.
ದಸರಾ ಹಬ್ಬದ ರಜೆಗಳ ನಿಮಿತ್ತ ಬೆಂಗಳೂರು ಮತ್ತಿತರ ನಗರಗಳಿಂದ ಸ್ವಗ್ರಾಮಗಳಿಗೆ ಆಗಮಿಸಿದ ಮಗ, ಸೊಸೆ ಮೊಮ್ಮಕ್ಕಳೊಂದಿಗೆ ಒಟ್ಟಾಗಿ ಊಟ ಸವಿಯುವ ಖುಷಿಯಲ್ಲಿ ಅದೆಷ್ಟೊ ವಯೊವೃದ್ಧರ ಸಂತಸಕ್ಕೆ ಪಾರವೇ ಇಲ್ಲದಂತಾಗಿತ್ತು. ಆ ಖುಷಿಯಲ್ಲೆ ತಮ್ಮ ಗ್ರಾಮದಿಂದ ಬಲು ದೂರವಿರುವ ಮಾಂಸದ ಅಂಗಡಿಗೆ ಕಾಲ್ನಡಿಗೆಯಲ್ಲೆ ಹೋಗಿ ಮಾಂಸ ತರುವ ದೃಶ್ಯಗಳು ಹಲವು ಗ್ರಾಮಗಳಲ್ಲಿ ಕಂಡು ಬಂದವು.
ಪಟ್ಟಣದ ಮಟನ್ ಮಾರುಕಟ್ಟೆ ರಸ್ತೆಯಲ್ಲಿ ಜನಜಂಗುಳಿ ಹೆಚ್ಚಾಗಿದ್ದು, ಮಾಂಸ ಪ್ರಿಯರು ಮಾಂಸ ಖರೀದಿಗೆ ಮುಗಿಬಿದ್ದರು. ಇನ್ನು ಬಾಗೇಪಲ್ಲಿ ಪಟ್ಟಣದಲ್ಲಿ ಸಾಮಾನ್ಯವಾಗಿ ನಾಟಿ ಕೋಳಿಗಳಿಗೆ ಬೇಡಿಕೆ ಹೆಚ್ಚಾಗಿರುವುದು ಕಂಡುಬ0ತು. ಮಟನ್ ಖರೀದಿಸಲು ಹೆಚ್ಚು ಬೆಲೆ ತೆರಬೇಕಾಗಿದೆ. ಇನ್ನು ಫಾರಮ್ ಕೋಳಿಗಳ ಚಿಕನ್ ಔಷಧಿಗಳಿಂದ ಬೆಳೆಸಿರುತ್ತಾರೆ ಎಂಬ ಹಿನ್ನೆಲೆಯಲ್ಲಿ ನಾಟಿ ಕೋಳಿಗಳಿಗೆ ಗ್ರಾಹಕರು ಮೊರೆ ಹೋದರು. ಬರೋಬ್ಬರಿ ನಾಟಿ ಕೋಳಿಗೆ ಕೆ.ಜಿ ಗೆ 600 ವರೆಗೂ ಮಾರಾಟವಾಯಿತು. ಮಟನ್ ಕೆಜಿಗೆ 700-800 ರೂ.ಗಳಿಗೆ ಮಾರಾಟವಾಯಿತು.