ಮಾರ್ಟಿನ್ ಚಿತ್ರ ಅದ್ಧೂರಿ ಬಿಡುಗಡೆ
1 min readಮಾರ್ಟಿನ್ ಚಿತ್ರ ಅದ್ಧೂರಿ ಬಿಡುಗಡೆ
ಧ್ರುವ ಸರ್ಜಾ ಕಟೌಟ್‌ಗೆ ಹಾಲಾಭಿಷೇಕ ಮಾಡಿದ ಅಭಿಮಾನಿಗಳು
ಸತತ ಮೂರು ವರ್ಷಗಳಿಂದ ಶೂಟಿಂಗ್ ನಡೆಯುತಿದ್ದ ಮಾರ್ಟಿನ್ ಚಿತ್ರ ಕೊನೆಗೂ ಬಿಡುಗಡೆಯಾಗಿದೆ. ದ್ರುವಸರ್ಜಾ ನಾಯಕನಟನಾಗಿ ನಟಿಸಿರುವ ಮಾರ್ಟಿನ್ ಚಿತ್ರ ಚಿಕ್ಕಬಳ್ಳಾಪುರ ನಗರದ ಬಾಲಾಜಿ ಚಿತ್ರಮಂದಿರದಲ್ಲಿ ಬಿಡುಗಡೆಯಾಗಿದ್ದು, ದ್ರುವ ಸರ್ಜಾ ಅಭಿಮಾನಿಗಳು ಬೃಹತ್ ಕಟೌಟ್ ಹಾಕಿ, ಕಟೌಟ್ ಗಳಿಗೆ ಹಾಲೆರದು ಶುಭಕೋರಿದರು.
ಇಂದಿನಿದ ದ್ರುವ ಸರ್ಜಾ ನಟಿಸಿದ ಮಾರ್ಟಿನ್ ಚಿತ್ರ ದೇಶದ ಐದು ಬಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಗೊಂಡಿದೆ. ಅದ್ದೂರಿ ಬಜೆಟ್‌ನಲ್ಲಿ ಮಾರ್ಟಿನ್ ಸಿನಿಮಾ ನಿರ್ಮಾಣ ಆಗಿದೆ. ಬೇರೆ ಬೇರೆ ದೇಶಗಳಲ್ಲಿ ಶೂಟಿಂಗ್ ನಡೆದಿದೆ. ಸಿಕ್ಕಾಪಟ್ಟೆ ಮಾಸ್ ಅವತಾರದಲ್ಲಿ ದ್ರುವ ಸರ್ಜಾ ಕಾಣಿಸಿಕೊಂಡಿದ್ದಾರೆ. ದ್ರುವ ಸರ್ಜಾ ಸಿನಿಮಾ ಎಂದರೆ ಅಭಿಮಾನಿಗಳು ಸಿಕ್ಕಾಪಟ್ಟೆ ಆ್ಯಕ್ಷನ್ ಬಯಸುತ್ತಾರೆ. ಅಭಿಮಾನಿಗಳ ನಿರೀಕ್ಷೆಗೆ ತಕ್ಕಂತೆ ನಿರ್ದೇಶಕ ಎ.ಪಿ. ಅರ್ಜುನ್ ಈ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ. ದ್ರುವ ಸರ್ಜಾ, ವೈಭವಿ ಶಾಂಡಿಲ್ಯ ಮುಂತಾದವರು ನಟಿಸಿರುವ ಈ ಸಿನಿಮಾಗೆ ಮೊದಲ ದಿನ ಅಭಿಮಾನಿಗಳಿಂದ ಭರ್ಜರಿ ಸ್ವಾಗತ ಸಿಕ್ಕಿದೆ.
ಚಿಕ್ಕಬಳ್ಳಾಪುರ ನಗರದ ಬಾಲಾಜಿ ಚಿತ್ರಮಂದಿರದಲ್ಲಿ ಬಿಡುಗಡೆಗೊಂಡಿರುವ ಚಿತ್ರಕ್ಕೆ ಚಿಕ್ಕಬಳ್ಳಾಪುರದ ಧ್ರುವ ಸರ್ಜಾ ಅಭಿಮಾನಿಗಳು ಸುಮಾರು ೩೦ ಅಡಿ ಉದ್ದದ ಕಟೌಟ್ ಹಾಕಿಸಿ, ಕಟೌಟ್ ಗಳಿಗೆ ಹಾಲಾಬಿಷೇಕ ಮಾಡಿ ಚಿತ್ರವನ್ನ ಸ್ವಾಗತಿಸಿದ್ದಾರೆ. ಧ್ರುವ ಸರ್ಜಾ ಹಾಗೂ ವೈಭವಿ ಶಾಂಡಿಲ್ಯ ಮುಖ್ಯಭಮಿಕೆಯಲ್ಲಿ ನಟಿಸಿರುವ ಮಾರ್ಟಿನ್ ಸಿನಿಮಾ ಸುಮಾರು ಮೂರು ಸಾವಿರ ಥಿಯೇಟರ್‌ಗಳಲ್ಲಿ ರಿಲೀಸ್ ಆಗಿದೆ. ದೇಶ-ವಿದೇಶದಲ್ಲಿಯೂ ಈ ಚಿತ್ರ ರಿಲೀಸ್ ಆಗಿದೆ.
ಚಿಕ್ಕಬಳ್ಳಾಪುರ ಧ್ರುವಸರ್ಜಾ ಅಭಿಮಾನಿಗಳು ಆಯುಧ ಪೂಜೆಯಂದು ಬಿಡಿಗಡೆಗೊಂಡಿರುವ ಧ್ರುವ ಸರ್ಜಾ ಚಿತ್ರ ನೂರು ದಿನ ಪ್ರದರ್ಶನ ಕಂಡೆ ಕಾಣುತ್ತೆ ಅನ್ನೋ ಬರವಸೆಯಲ್ಲಿ ಅಭಿಮಾನಿಗಳು ಚಿತ್ರ ನೋಡಲು ಮುಗಿ ಬೀಳುತಿದ್ದರು.