ಅಮಿತ್ ಶಾ ಹೇಳಿಕೆ ಖಂಡಿಸಿ ದಲಿತ ಸಂಘಟನೆಗಳ ಪ್ರತಿಭಟನೆ

ಶಿಡ್ಲಘಟ್ಟದಲ್ಲಿ ಅಪರಾಧ ಮಾಸಾಚರಣೆ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಗುಣಮುಖರಾಗಲಿ

ರಾಗಿ, ಹುರಳಿ ಒಕ್ಕಣೆ ಕೇಂದ್ರವಾದ ರಾಜ್ಯ ಹೆದ್ದಾರಿ

December 26, 2024

Ctv News Kannada

Chikkaballapura

ಬೀದರ್‌ನಲ್ಲಿ ಮರಣವೇ ಮಹಾನವಮಿ ಆಚರಣೆ

1 min read

ಬೀದರ್‌ನಲ್ಲಿ ಮರಣವೇ ಮಹಾನವಮಿ ಆಚರಣೆ
ಬಸವಣ್ಣನ ಶಿಷ್ಯರಿಗೆ ಶಿಕ್ಷೆ ಕೊಟ್ಟ ದಿನದ ಸ್ಮರಣೆಗಾಗಿ

ಲಿ0ಗಾಯತ ಧರ್ಮ ನಿಂತಿದ್ದು ಚೆತ್ತನ ಹರಳಯ್ಯಾ. ಶೀಲವಂತ ಮಧುವರಸ ಮುಂತಾದವರ ಬಲಿದಾನದ ಘಲದಿಂದಾಗಿ ಎಂದು ಸದ್ಗುರು ಸತ್ಯಾದೇವಿ ಮಾತಾಜೀ ಅಭಿಪ್ರಾಯಪಟ್ಟರು.

ಬೀದರ್ ನಗರದ ಹರಳಯ್ಯಾ ವೃತದಲ್ಲಿ ಮರಣವೆ ಮಹಾನವಮಿ ಕಾರ್ಯಕ್ರಮ ರಾಷ್ಟಿಯ ಬಸವ ದಳದಿಂದ ಆಚರಿಸಲಾಯಿತು. ಹಳೆ ಬಸ್ ನಿಲ್ದಾಣ ಸಮೀಪದ ಹರಳಯ್ಯಾ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಶ್ರೀಗಳು ಗೌರವ ಸಲಿಸಿದರು. ಶರಣು ಶರಣಾರ್ಥಿ ಪದದಿಂದಲೇ ಕಲ್ಯಾಣ ಕ್ರಾಂತಿಯಾಯಿತು ಹರಳಯ್ಯ ನವರಂಥ ಶಿಷ್ಯ ಪರಂಪರೆ ನಮ್ಮದು ಎಂದು ಶ್ರೀಗಳು ಹೇಳಿದರು.

ಹರಳಯ್ಯ ಮತ್ತು ಕಲ್ಯಾಣಮ್ಮ ದಂಪತಿಗಳು ತಮ್ಮ ತೊಡೆ ಚರ್ಮದಿಂದ ಪಾದರಕ್ಷೆ ಮಾಡಿ ಬಸವಣ್ಣನವರಿಗೆ ಸಮರ್ಪಿಸಿದರು. ಲಿಂಗಾಯತ ಧರ್ಮ ನಿಂತಿದ್ದು ಹುತ್ತಾತ್ಮ ಚೆತ್ತನ ಹರಳಯ್ಯಾ. ಶೀಲವಂತ ಮಧುವರಸ. ಇವರ ಬಲಿದಾನದ ಫಲ. ಮರಣವೇ ಮಹಾನವಮಿ ಎಂದು ವಚನ ಸಾಹಿತ್ಯ ರಕ್ಷಿಸಿದ ಹರಳಯ್ಯ ಕಲ್ಯಾಣಮ್ಮ ಶೀಲವಂತರನ್ನು ಆನೆ ಕಾಲಿಗೆ ಕಟ್ಟಿ ಎಳೆಯುವ ಶಿಕ್ಷೆ ವಿಧಿಸಿದ ದಿನ ಇಂದು ಎಂದು ಹೇಳಿದರು.

ಜಗತ್ತಿನಲ್ಲಿ ಬಸವಣ್ಣನವರಂಥ ಗುರು, ಹರಳಯ್ಯನಂತಹ ಶಿಷ್ಯ ಸಿಗುವುದಿಲ್ಲ. ಅಂತಹ ಶ್ರೀಮಂತ ಗುರು ಶಿಷ್ಯರ ಪರಂಪರೆ ಲಿಂಗಾಯತ ಧರ್ಮದಲ್ಲಿದೆ. 12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣವರ ನೇತೃತ್ವದಲ್ಲಿ ಕಲ್ಯಾಣ ನಾಡಿನಲ್ಲಿ ಅನುಭವ ಮಂಟಪದ ಮೂಲಕ ವಿಶ್ವಕ್ಕೆ ಕಾಯಕ, ದಾಸೋಹ ಮತ್ತು ಸಮಾನತೆಯ ಸಂದೇಶ ಸಾರಿ ಮನುಕುಲದ ಉದ್ಧಾರಕ್ಕಾಗಿ ತಮ್ಮ ಜೀವನದುದ್ದಕ್ಕೂ ಹೋರಾಡಿದ ಹರಳಯ್ಯ, ಮದುವರಸ, ಕಲ್ಯಾಣಮ್ಮ, ಶೀಲವಂತ, ಲಾವಣ್ಯರವರ ಎಳೆ ಹೂಟಿ ಶಿಕ್ಷೆಯ ಜೊತೆಗೆ ಸಾವಿರಾರು ಶರಣರು ತಮ್ಮ ಪ್ರಾಣವನ್ನೇ ಬಲಿದಾನಗೈದ ಸ್ಮರಣೆಗಾಗಿ ಇಂದು ಮಹಾನವಮಿ ಆಚರಿಸಲಾಗುತ್ತಿದೆ ಎಂದರು.

ಸದ್ಗುರು ಸತ್ಯಾದೇವಿ ಮಾತಾಜಿ ಮಾತನಾಡಿ, ಲಿಂಗಾಯತರು ಎಂದು ಹೆಮ್ಮೆಯಿಂದ ಹೆಳಿಕೊಳ್ಳಲು ಹರಳಯ್ಯ, ಮದುವರಸ, ಕಲ್ಯಾಣಮ್ಮ, ಶೀಲವಂತ, ಲಾವಣ್ಯರವರ ತ್ಯಾಗ ಬಲಿದಾನವೇ ಕಾರಣ. ಯಾವುದೇ ಹೆಣ್ಣು ಹೊನ್ನು ಮಣ್ಣಿ ಗಾಗಿ ಆಗಿದ್ದ ಬಲಿದಾನ ವಲ್ಲ ಇದು ಸಮಾನತೆಗಾಗಿ ಆಗಿದ್ದ ಬಲಿದಾನ ಎಂದರು.

ಜಗದ್ಗುರು ಡಾ. ಚನ್ನಬಸವಾನಂದ ಸ್ವಾಮೀಜಿ, ಬಸವಗಿರಿಯ ಪ್ರಭದೇವ ಸ್ವಾಮೀಜಿ, ರಮೇಶ ಮಠಪತಿ, ಸಿ.ಎಸ್. ಗಣಾಚಾರಿ, ಶಿವರಾಜ ಪಾಟೀಲ ಅತಿವಾಳ, ಬಸವಂತರಾವ ಬಿರಾದಾರ, ಶಿವಕುಮಾರ ಪಾರಾ, ಎಸ್.ಜಿ.ಹುಗ್ಗೆಪಾಟೀಲ ನೂರಾರು ಶರಣ ಶರಣಿಯರು ಸೇರಿದಂತೆ ಹಲವರು ಭಾಗಿಯಾಗಿದ್ದರು.

About The Author

Leave a Reply

Your email address will not be published. Required fields are marked *