ಕಬಡ್ಡಿ ಫೈನಲ್ ಪಂದ್ಯದಲ್ಲಿ ಆಟಗಾರರ ಪ್ರತಿಭಟನೆ
1 min readಕಬಡ್ಡಿ ಫೈನಲ್ ಪಂದ್ಯದಲ್ಲಿ ಆಟಗಾರರ ಪ್ರತಿಭಟನೆ
ಕಬಡ್ಡಿ ಫೈನಲ್ ಪಂದ್ಯದಲ್ಲಿ ಆಟಗಾರರನ್ನು ಅಂಕಣದಿ0ದ ಹೊರ ಕಳಿಸಿದ ಪೊಲೀಸರು
ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ ತಂಡಗಳ ನಡುವೆ ಕಿತ್ತಾಟ
ಬಾಗೇಪಲ್ಲಿ ಪಟ್ಟಣದಲ್ಲಿ ನಡೆದ ವಿಭಾಗೀಯ ಮಟ್ಟದ ಬಾಲಕರ ಕಬಡ್ಡಿ ಪಂದ್ಯಾವಳಿಯ ಪೈನಲ್ ಪಂದ್ಯದ ಕೊನೆಕ್ಷಣದಲ್ಲಿ ನಡೆದ ಗೊಂದಲ ಕ್ರೀಡಾಪಟುಗಳ ಧಿಕ್ಕಾರ ಘೋಷಣೆ ಜೊತೆಗೆ ಪ್ರತಿಭಟನೆಯಂತಹ ಅಹಿತಕರ ಘಟನೆಗಳಿಗೆ ಕಾರಣವಾಯಿತು. ಇದರಿಂದ ಪೊಲೀಸರು ಮಧ್ಯಪ್ರವೇಶಿಸಿ ಅಂಕಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಕ್ರೀಡಾಪಟುಗಳನ್ನು ಬಲವಂತದಿ0ದ ಹೊರಕಳುಹಿಸಿದ ಘಟನೆ ನಡೆಯಿತು.
ಬಾಗೇಪಲ್ಲಿ ಪಟ್ಟಣದಲ್ಲಿ ವಿಭಾಗೀಯ ಕಬಡ್ಡಿ ಪಂದ್ಯಾವಳಿಯ ಅಂತಿಮ ಘಟ್ಟಕ್ಕೆ ಬೆಂಗಳೂರು ದಕ್ಷಿಣ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ತಂಡಗಳು ಹಣಾ ಹಣಿ ನಡೆಸಿದ್ದವು. ಆಗಾಗ ತೀರ್ಪುಗಳ ಬಗ್ಗೆ ಪರ ವಿರೋಧ ಸನ್ನಿವೇಶಗಳು ಕಂಡು ಬಂದಿದ್ದು, ಫೆನಲ್ ಪಂದ್ಯ ಮುಗಿಯಲು ಕೇವಲ 45 ಸೆಕೆಂಡ್ ಇರುವಾಗ ಬೆಂಗಳೂರು ದಕ್ಷಿಣ 46 ಮತ್ತು ಚಿಕ್ಕಬಳ್ಳಾಪುರ 42 ಪಾಯಿಂಟ್ ಪಡೆದು ಬೆಂಗಳೂರು ದಕ್ಷಿಣ ಗೆಲುವು ಘೋಷಣೆ ಸಂದರ್ಭದಲ್ಲಿಯೇ ಅಂಪೈರ್ ತೀರ್ಮಾನದ ಬಗ್ಗೆ ತಗಾದೆ ತೆಗೆದ ಚಿಕ್ಕಬಳ್ಳಾಪುರ ತಂಡದ ಕ್ರೀಡಾಪಟುಗಳು ಮತ್ತು ತರಬೇತುದಾರರು. ವ್ಯವಸ್ಥಾಪಕರು ತೀರ್ಪುಗಾರರ ವಿರುದ್ಧ ಅಸಮಾಧನ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಕೆಲ ಹೊರಗಿನವರು ಸೇರಿ ಸುಮಾರು ಒಂದು ಗಂಟೆಯಷ್ಟು ಸಮಯ ವಾಗ್ವಾದಗಳಲ್ಲಿಯೇ ಕಳೆಯುವಂತಾಯಿತು.
ಈ ಹಂತದಲ್ಲಿ ಡಿಪಿಒ ಬಿ.ಎನ್.ನಟರಾಜ್ ನೇತೃತ್ವದಲ್ಲಿ ತೀರ್ಮಾನ ತೆಗೆದುಕೊಂಡು ಬೆಂಗಳೂರು ತಂಡಕ್ಕೆ ರೇಡ್ ಮಾಡುವ ಅವಕಾಶ ನೀಡಿದರು. ಆದರೆ ಚಿಕ್ಕಬಳ್ಳಾಪುರ ತಂಡದವರು ಅಂಕಣದ ಮದ್ಯದಲ್ಲಿಯೇ ಕುಳಿತು ಪ್ರತಿಭಟನೆ ಮುಂದುವರೆಸಿದರು. ರೈಡರ್ ಇಬ್ಬರನ್ನು ಔಟ್ ಮಾಡುತ್ತಿದ್ದಂತೆಯೇ ಉಳಿದ ಕೆಲ ಸೆಕೆಂಡುಗಳ ಆಟದಲ್ಲಿ ಚಿಕ್ಕಬಳ್ಳಾಪುರ ಆಟಗಾರರು ಏಳಲೇ ಇಲ್ಲ. ಈ ಹಂತದಲ್ಲಿ ಬೆಂಗಳೂರು ದಕ್ಷಿಣ ತಂಡ ಪೈನಲ್ ಪಂದ್ಯದಲ್ಲಿ ಜಯಗಳಿಸಿ ವಿಜೇತರೆಂದು ಘೋಷಣೆ ಮಾಡಲಾಯಿತು.
ಫಲಿತಾಂಶ ಪ್ರಕಟವಾದ ನಂತರವೂ ಚಿಕ್ಕಬಳ್ಳಾಪುರ ಜಿಲ್ಲಾ ತಂಡದ ಆಟಗಾರರು ಅಂಕಣದ ಮಧ್ಯದಲ್ಲಿಯೇ ಕುಳಿತು ಧಿಕ್ಕಾರದ ಘೋಷಣೆಗಳನ್ನು ಕೂಗತೊಡಗಿದರು. ಮೋಸ ಮತ್ತು ಅನ್ಯಾಯ ಮಾಡಲಾಗಿದೆ ಎಂದು ಕೂಗಾಡತೊಡಗಿದರು. ಇದಕ್ಕೆ ಹೊರಗಿನವರು ಬೆಂಬಲ ನೀಡಿದ್ದರಿಂದ ಪ್ರತಿಭಟನೆಯ ಕಾವು ಮತ್ತಷ್ಟು ಹೆಚ್ಚಾಗತೊಡಗಿತು. ಈ ಹಂತದಲ್ಲಿ ಆತಂಕದ ಪರಿಸ್ಥಿತಿ ನಿರ್ಮಾಣವಾಯಿತು.
ಫಲಿತಾಂಶ ಪ್ರಕಟವಾದ ನಂತರವೂ ಪ್ರತಿಭಟನೆ,ಧಿಕ್ಕಾರಗಳನ್ನು ಕೂಗುತ್ತಿದ್ದ ಆಟಗಾರರನ್ನು ಪೊಲೀಸ್ ಇನ್ಸ್ಪೆಕ್ಟರ್ ಪ್ರಶಾಂತ್ ವರ್ಣಿ ನೇತೃತ್ವದಲ್ಲಿ ಪೊಲೀಸರು ಬಲವಂತವಾಗಿ ಅಂಕಣದಿAದ ಹೊರಕಳುಹಿಸಿದ ಪ್ರಸಂಗವೂ ನಡೆಯಿತು. ಉದ್ದೇಶಪೂರ್ವಕವಾಗಿಯೇ ಸೀನ್ ಕ್ರಿಯೇಟ್ ಮಾಡಿ, ಗೊಂದಲ ಸೃಷ್ಟಿಸಲಾಗಿತ್ತು. ನಿಯಮಗಳಂತೆಯೇ ತೀರ್ಮಾನ ತೆಗೆದುಕೊಂಡು ವಿಜೇತರನ್ನು ಘೋಷಣೆ ಮಾಡಿದ್ದಾವೆ. ಯಾರಿಗೂ ಅನ್ಯಾಯ ಮಾಡಿಲ್ಲ ಎಂದರು.
ವಿಭಗ ಮಟ್ಟದ ಕಬಡ್ಡಿ ಪಂದ್ಯಾವಳಿಗೆ 11 ಜಿಲ್ಲಾಗಳಿಂದ ಬಾಗೇಪಲ್ಲಿಗೆ ಆಗಮಿಸಿರುವ ಅಧಿಕಾರಿಗಳು, ಕ್ರೀಡಾಪಟುಗಳಿಗೆ ಸರಿಯಾದ ವಸತಿ ಮತ್ತು ಊಟದ ವ್ಯವಸ್ಥೆಯನ್ನು ಮಾಡಿರಲಿಲ್ಲ ಎಂದು ಪಂದ್ಯಾವಳಿಗೆ ಆಗಮಿಸಿದ್ದ ವಿವಿಧ ತಂಡಗಳ ವ್ಯವಸ್ಥಾಪಕರು ತಮ್ಮ ಅಸಮಾಧನ ವ್ಯಕ್ತಪಡಿಸಿದರು. ಕನಿಷ್ಠ ಕ್ರೀಡಾಪಡುಗಳಿಗೆ ಸರಿಯಾದ ಊಟ ನೀಡದಿದ್ದರೆ ಹೇಗೆ, ಆತಿಥ್ಯ ವಹಿಸಿಕೊಂಡವರು ಇದರ ಪ್ರಮಾಣಿಕ ಜವಾಬ್ದಾರಿ ಹೊತ್ತುಕೊಳ್ಳಬೇಕಾಗಿತ್ತು ಎಂದು ತಮ್ಮ ಅಸಮಾನ ವ್ಯಕ್ತಪಡಿಸಿದರು.