ಶಿಡ್ಲಘಟ್ಟ ಎಬಿಡಿ ಕಚೇರಿಯಲ್ಲಿ ಆಯುಧ ಪೂಜೆ
1 min readಶಿಡ್ಲಘಟ್ಟ ಎಬಿಡಿ ಕಚೇರಿಯಲ್ಲಿ ಆಯುಧ ಪೂಜೆ
ಕೆಪಿಸಿಸಿ ಸಂಯೋಜಕ ರಾಜೀವ್‌ಗೌಡ ಪೂಜೆಯಲ್ಲಿ ಭಾಗಿ
ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡ ಹಾಗೂ ಕೆಪಿಸಿಸಿ ಸಂಯೋಜಕ ರಾಜುಗೌಡ ಅವರ ಎಬಿಡಿ ಕಚೇರಿಯಲ್ಲಿ ಆಯುಧ ಪೂಜೆಯನ್ನು ಇಂದು ಅದ್ಧೂರಿಯಾಗಿ ಹಮ್ಮಿಕೊಳ್ಳಲಾಗಿತ್ತು,
ಶಿಡ್ಲಘಟ್ಟ ಎಬಿಡಿ ಕಚೇರಿಯಲ್ಲಿ ಇಂದು ಹಮ್ಮಿಕೊಂಡಿದ್ದ ಆಯುಧ ಪೂಜೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಹನಾ ರಾಜುಗೌಡ ಮಾತನಾಡಿ, ಕ್ಷೇತ್ರದಲ್ಲಿ ಬಡಜನರಿಗಾಗಿ 10 ಅಂಬುಲೆನ್ಸ್, ಬಡರೋಗಿಗಳಿಗಾಗಿ ಅಮೂಲ್ಯ ಸೇವೆ ಕಲ್ಪಿಸಲಾಗಿದೆ. ಕಳೆದ ನಾಲ್ಕು ವರ್ಷಗಳ ಹಿಂದೆ ಈ ಸೇವೆ ಆರಂಭಿಸಲಾಗಿತ್ತು. ಪ್ರಸ್ತುತ ೨೦ ಸಾವಿರಕ್ಕೂ ಅಧಿಕ ಜನ ಸೇವೆಯನ್ನು ಸದ್ಬಳಕೆ ಮಾಡಿಕೊಂಡಿದ್ದಾರೆ ಎಂದರು.
ಮು0ದಿನ ದಿನಗಳಲ್ಲಿ ಕ್ಷೇತ್ರದ ಜನರ ಕಲ್ಯಾಣಕ್ಕಾಗಿ ಇನ್ನಷ್ಟು ಜನಪರ ಕಾರ್ಯಕ್ರಮಗಳನ್ನು ರಾಜುಗೌಡ ಅವರು ಮತ್ತು ಅವರ ತಂಡ ಅನುಷ್ಠಾನಗೊಳಿಸಲು ಮುಂದಾಗಲಿದ್ದಾರೆ ಎಂದು ಹೇಳಿದರು. ಕೆಪಿಸಿಸಿ ಸಂಯೋಜಕ ರಾಜುಗೌಡ ಮಾತನಾಡಿ, ದಸರಾ ಮತ್ತು ಆಯುಧಪೂಜೆ ಶುಭಾಶಯ ತಿಳಿಸಿ, ಕ್ಷೇತ್ರದ ಜನರಿಗೆ ಚಾಮುಂಡಿದೇವಿ ಒಳ್ಳೇದು ಮಾಡಲಿ, ಸಕಾಲದಲ್ಲಿ ಒಳ್ಳೆಯ ಮಳೆ ಮತ್ತು ಬೆಳೆಗಳಿಗೆ ರೈತರು ಮತ್ತು ಜನಸಾಮಾನ್ಯರು ಜೀವನದಲ್ಲಿ ಸುಖ ಸಂತೋಷದಿ0ದ ಬಾಳಲಿ ಆ ದೇವಿಯ ಕೃಪೆ ಎಲ್ಲರ ಮೇಲೆ ಇರಲಿ ಎಂದು ಪ್ರಾರ್ಥಿಸಿ ಸಿಹಿ ಹಂಚಿದರು,
ಈ ಸಂರ್ದದಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಅಪ್ಸರ್ ಪಾಷಾ, ತನ್ವೀರ್, ಡಾಲ್ಫಿನ್ ನಾಗರಾಜ್, ಶ್ರೀನಾಥ್, ಮಂಜುನಾಥ್ ಸೈಯದ್ ಬಾಬಾ, ನರೇಂದ್ರ, ಆನೂರು ರವಿ, ಅಪೇ ಗೌಡನಹಳ್ಳಿ ಮಂಜುನಾಥ್, ಸಮೀವುಲ್ಲಾ ಇದ್ದರು.