ನಗರದ ಸೌಂದರ್ಯ ಹೆಚ್ಚಿಸಲು ಡಿವೈಡರ್‌ಗಳಿಗೆ ಬಣ್ಣ
1 min readನಗರದ ಸೌಂದರ್ಯ ಹೆಚ್ಚಿಸಲು ಡಿವೈಡರ್‌ಗಳಿಗೆ ಬಣ್ಣ
ನಗರಸಭೆೆ ಅಧ್ಯಕ್ಷರಿಂದ ವಿನೂತನ ಕಾರ್ಯಕ್ರಮ
ದಸರಾ ಹಬ್ಬದ ಪ್ರಯುಕ್ತ ನಗರದ ಪ್ರಮುಖ ರಸ್ತೆ ಗಳನ್ನು ಶುದ್ಧಗೊಳಿಸಿ, ರಸ್ತೆ ಮಧೆÉ್ಯ ಇರುವ ಡಿವೈಡರ್‌ಗಳಿಗೆ ಬಣ್ಣ ಹಚ್ಚಿ ನಗರ ಸ್ವಚ್ಚ ವಾಗಿಡಬೇಕು ಎಂದು ನಗರಸಭೆ ಅಧ್ಯಕ್ಷ ಗಜೇಂದ್ರ ತಿಳಿಸಿದರು
ಅಧ್ಯಕ್ಷ ಚಿಕ್ಕಬಳ್ಳಾಪುರ ನಗರದ ವಾಪಸಂದ್ರ ರಸ್ತೆಯಿಂದ ಬಿಬಿ ರಸ್ತೆಯ ಶನೈಶ್ಚರ ಸ್ವಾಮಿ ದೇವಸ್ಥಾನದ ವರೆಗೆ ರಸ್ತೆ ಮಧೆÉ್ಯ ಇರುವ ಡಿವೈಡರ್‌ಗೆ ಬಣ್ಣ ಹಚ್ಚುವ ಕೆಲಸಕ್ಕೆ ಚಾಲನೆ ನೀಡಲಾಗಿದೆ. ಈ ವೇಳೆ ಮಾತನಾಡಿದ ಗಜೇಂದ್ರ, ಚಿಕ್ಕಬಳ್ಳಾಪುರ ನಗರ ಸ್ವಚ್ಛವಾಗಿರಬೇಕು, ಪೌರಕಾರ್ಮಿಕರ ಸಹಾಯದಿಂದ ನಗರವನ್ನು ಸ್ವಚ್ಚಗೊಳಿಸಿ ನಗರವನ್ನು ಸುಂದರವಾಗಿ ಕಾಣಲು ನಿರಂತರ ಶ್ರಮಿಸುವುದಾಗಿ ಹೇಳಿದರು.
ಚಿಕ್ಕಬಳ್ಳಾಪುರ ನಗರದ ಸೌಂದರ್ಯ ಹೆಚ್ಚಿಸುವ ಶನೈಶ್ಚರ ಸ್ವಾಮಿ ದೇವಾಲಯದಿಂದ ಬಿಬಿ ರಸ್ತೆಯ ಉದ್ದಕ್ಕೂ ರಸ್ತೆಯ ಡಿವೈಡರ್‌ಗಳಿಗೆ ಬಣ್ಣ ಬಳಿಯುವ ಮೂಲಕ ನಗರ¸ ಅಧ್ಯಕ್ಷರು ನೂತನ ಯೋಜನೆ ರೂಪಿಸಿದ್ದಾರೆ. ಚಿಕ್ಕಬಳ್ಳಾಪುರ ನಗರದ ದೇವತೆ ಚೌಡೇಶ್ವರಿ ದೇವಿಯ ಮೆರವಣಿಗೆ ಇದೇ ರಸ್ತೆಯಲ್ಲಿ ನಡೆಯಲಿರುವ ಹಿನ್ನೆಲೆಯಲ್ಲಿ ರಸ್ತೆ ಸಂಪೂರ್ಣವಾಗಿ ಹದಗೆಟ್ಟ ಕಾರಣ ರಸ್ತೆ ಮಾರ್ಗವನ್ನು ಸ್ವಚ್ಚಗೊಳಿಸುವ ಜೊತೆಗೆ ಚಿಕ್ಕಬಳ್ಳಾಪುರ ನಗರದ ಅಂದವನ್ನ ಹೆಚ್ಚಿಸುವ ದೃಷ್ಟಿಯಿಂದ ಬಣ್ಣ ಹಚ್ಚುವ ಕಾರ್ಯ ಕೈಗೊಳ್ಳಲಾಗಿದೆ.
ರಸ್ತೆಯಲ್ಲಿ ವಾಹನ ಸವಾರರಿಗೆ ತೊಂದರೆಯಾಗದAತೆ ಎಚ್ಚರಿಕೆವಹಿಸಿ ರಸ್ತೆಯ ವಿಭಜಕಗಳಿಗೆ ಸ್ವತಃ ಬಣ್ಣವನ್ನು ಬಳಿಯುವ ಮೂಲಕ ಎಲ್ಲರ ಗಮನ ಸೆಳೆಯುವಲ್ಲಿ ನಗರಸಭೆ ಅಧ್ಯಕ್ಷರು ಯಶಸ್ವಿಯಾಗಿದ್ದಾರೆ. ಅಲ್ಲದೆ ಮುಂದಿನ ದಿನಗಳಲ್ಲಿ ನಗರದ ವಿವಿಧ ರಸ್ತೆಯ ಮಾರ್ಗಗಳನ್ನು ಸರಿಪಡಿಸುವುದಾಗಿ ಅವರು ಹೇಳಿದ್ದಾರೆ.