ನೇತ್ರ ದಾನ ಮಾಡಿ ಸುಂದರ ಸಮಾಜ ಕಟ್ಟೋಣ
1 min readನೇತ್ರ ದಾನ ಮಾಡಿ ಸುಂದರ ಸಮಾಜ ಕಟ್ಟೋಣ
ಗೌರಿಬಿದನೂರಿನಲ್ಲಿ ಫಾದರ್ ಮಾರಿಯೋ ಮನವಿ
ಇಂದು ಅಂತರಾಷ್ಟಿಯ ದೃಷ್ಟಿ ದಿನಾಚರಣೆ ಅಂಗವಾಗಿ ಗೌರಿಬಿದನೂರು ತಾಲ್ಲೂಕಿನ ಹೊಸೂರು ಹೋಬಳಿಯ ದಿ ಪ್ರಾಜೆಕ್ಟ್ ವಿಷನ್ ಕಣ್ಣಿನ ಆರೈಕೆ ಕೇಂದ್ರದಿAದ ನೇತ್ರದಾನದ ಕುರಿತು ಜಾಥಾ ಹಮ್ಮಿಕೊಳ್ಳಲಾಗಿತ್ತು.
ಗೌರಿಬಿದನೂರು ತಾಲೂಕಿನ ಹೊಸೂರಿನಲ್ಲಿ ನೇತ್ರದಾನ ಕುರಿತು ಹಮ್ಮಿಕೊಂಡಿದ್ದ ಜಾಥಾದಲ್ಲಿ ದಿ ಪ್ರಾಜೆಕ್ಟ್ ವಿಷನ್ ನಿರ್ದೇಶಕ ಫಾಧರ್ ಮಾರಿಯೋ ಮಾತನಾಡಿ, ವಿಶ್ವ ದೃಷ್ಟಿ ದಿನ ಜಾಗತಿಕ ಮಟ್ಟದಲ್ಲಿ ದೃಷ್ಟಿ ಆರೈಕೆಯ ಮಹತ್ವವನ್ನು ಒತ್ತಿಹೇಳುತ್ತದೆ. ಸರ್ಕಾರಗಳು, ಸಂಘ ಸಂಸ್ಥೆಗಳು ಜಾಗೃತಿ ಅಭಿಯಾನ ಆಯೋಜಿಸುವುದರಿಂದ, ಜನರಲ್ಲಿ ಅರಿವು ಮೂಡುತ್ತದೆ. ಕಣ್ಣುದಾನ ಒಂದು ಪವಿತ್ರವಾದ ಕಾರ್ಯ, ಇದರಿಂದ ಸುಂದರ ಸಮಾಜ ಕಟ್ಟಲು ಸಹಾಯವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ೧೫೦ ಕ್ಕೂ ಹೆಚ್ಚು ವಿಶೇಷಚೇತನರು, ನಿಮ್ಮ ಕಣ್ಣುಗಳನ್ನು ಸುಡಬೇಡಿ, ದಾನ ಮಾಡಿ, ಕಣ್ಣುದಾನ ಪವಿತ್ರವಾದ ದಾನ ಎಂಬ ಘೋಷಣೆಯೊಂದಿಗೆ ಜನರಲ್ಲಿ ಅರಿವು ಮೂಡಿಸಿದರು. ದಿ ಪ್ರಾಜೆಕ್ಟ್ ವಿಷನ್ ಸಹನಿರ್ದೇಶಕ ಫದರ್ ಥಾಮಸ್ , ಹೊಸೂರು ಆರೋಗ್ಯ ಇಲಾಖೆಯ ರಾಜೇಶ್, ಕೃಷ್ನಪ್ಪ, ವಕೀಲ ವಿಜಯ್ ಇದ್ದರು.