ಪರ್ಲ್ ಗ್ಲೋಬಲ್‌ನಲ್ಲಿ ದಸರಾ ವಿಶೇಷ ಕಾರ್ಯಕ್ರಮಗಳು
1 min readಪರ್ಲ್ ಗ್ಲೋಬಲ್‌ನಲ್ಲಿ ದಸರಾ ವಿಶೇಷ ಕಾರ್ಯಕ್ರಮಗಳು
ಕಾರ್ಮಿಕರೊಂದಿಗೆ ದಸರಾ ಆಚರಿಸಿದ ಕಾರ್ಖಾನೆ ಸಿಬ್ಬಂದಿ
ದೊಡ್ಡಬಳ್ಳಾಪುರ ತಾಲೂಕಿನ ಪೆರ್ಲ್ ಗ್ಲೋಬಲ್ ಕಾರ್ಖಾನೆಯಿಂದ ಕಾರ್ಮಿಕರಿಗೆ ವಿಶೇಷ ಕಾರ್ಯಕ್ರಮಗಳ ಆಯೋಜನೆ ಮಾಡುವ ಮೂಲಕ ದಸರಾ ಹಬ್ಬದ ಶುಭಾಶಯಗಳನ್ನು ಕೋರಲಾಯಿತು.
ದೊಡ್ಡಬಳ್ಳಾಪುರ ತಾಲೂಕಿನ ಪೆರ್ಲ್ ಗ್ಲೋಬಲ್ ಕಾರ್ಖಾನೆ ಕಾರ್ಮಿಕರ ಮನೋರಂಜನೆಗಾಗಿ ವಿಶೇಷ ವೇದಿಕೆಯನ್ನು ಕಾರ್ಖಾನೆ ಆಡಳಿತ ಮಂಡಳಿ ಸಿದ್ಧಪಡಿಸಿದ್ದು, ವೇದಿಕೆಯಲ್ಲಿ ಮಿಮಿಕ್ರಿ ಕಲಾವಿದ ಗೋಪಿ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು. ನೃತ್ಯ, ಭವಗೀತೆ ಮಿಮಿಕ್ರಿ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಕಾರ್ಮಿಕರಿಗಾಗಿ ಆಯೋಜನೆ ಮಾಡಲಾಗಿತ್ತು.
ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿ ಉಪಾಧ್ಯಕ್ಷ ಉದಯ್ ಮಾತನಾಡಿ, ಕಾರ್ಮಿಕರು ಕಾರ್ಖಾನೆಗೆ ಅತ್ಯಮೂಲ್ಯ ರತ್ನಗಳಿದ್ದಂತೆ ಅವರಿಂದಲೇ ಕಾರ್ಖಾನೆಯ ಅಭಿವೃದ್ಧಿ, ಬೆಳವಣಿಗೆ ಸಾಧ್ಯ, ಈ ನಿಟ್ಟಿನಲ್ಲಿ ಕಾರ್ಖಾನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಕಾರ್ಮಿಕರಿಗೆ ಮನೋರಂಜನೆಯ ಜೊತೆಗೆ ವಿಶೇಷ ಕೊಡುಗೆಗಳನ್ನು ನೀಡುವ ಮೂಲಕ ಈ ಬಾರಿಯ ದಸರಾ ಹಬ್ಬದ ಶುಭಶಯಗಳು ಕೋರಲಾಗಿದೆ ಎಂದರು.
ಕಾರ್ಖಾನೆ ಆಡಳಿತ ಸಿಬ್ಬಂದಿ ಖಾನ್ ಮಾತನಾಡಿ, ಕಾರ್ಮಿಕರಿಗಾಗಿ ಈ ವೇದಿಕೆ ಸಿದ್ಧಪಡಿಸಿದ್ದು, ತಮ್ಮ ಪ್ರತಿಭೆೆ ಹಾಗೂ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಕಾರ್ಮಿಕರು ಬೆಳಗಿಂದಲೇ ಅತ್ಯಂತ ಉತ್ಸಾಹಕಾರಾಗಿ ದಸರಾ ಹಬ್ಬವನ್ನು ಸ್ವಾಗತಿಸುತ್ತಿರುವುದು ಸಂತಸ ತಂದಿದೆ. ದಿನನಿತ್ಯ ಕೆಲಸದಲ್ಲೆ ತೊಡಗುವ ಕಾರ್ಮಿಕರಿಗೆ ಇಂದಿನ ದಸರ ಸಂಭ್ರಮ ಖುಷಿ ಕೊಟ್ಟಿದ್ದು ನೋಡುವರ ಮನಸ್ಸಿಗೆ ಸಮಾಧಾನ ನೀಡಿದೆ ಎಂದರು.