ಮಗಳ ಸಂಸಾರದಲ್ಲಿ ಹುಳಿ ಹಿಂಡಿದ ಆರೋಪ
1 min readಮಗಳ ಸಂಸಾರದಲ್ಲಿ ಹುಳಿ ಹಿಂಡಿದ ಆರೋಪ
ರೊಚ್ಚಿಗೆದ್ದ ಅಳಿಯನಿಂದ ಅತ್ತೆಯ ಬರ್ಬರ ಕೊಲೆ
ಅಳಿಯನ ಏಟಿಗೆ ಆಸ್ಪತ್ರೆ ಪಾಲಾದ ಮಾವ
ಮದುವೆ ಮಾಡಿಕೊಟ್ಟ ಮಗಳಿಗೆ ಬುದ್ದಿಮಾತು ಹೇಳೋದು ಬಿಟ್ಟು, ಅಳಿಯ-ಮಗಳ ಮಧೆ್ಯ ಜಗಳ ಹಚ್ಚಿ ಸಂಸಾರದಲ್ಲಿ ಬಿರುಕು ಮೂಡಿಸಿದ್ದಾರೆಂಬ ಕಾರಣಕ್ಕೆ ರೊಚ್ಚಿಗೆದ್ದ ಅಳಿಯ ಅತ್ತೆಯನ್ನ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ್ದಾನೆ. ಅಳಿಯನ ಮಚ್ಚಿನೇಟಿಗೆ ಮಾವ ಆಸ್ಪತ್ರೆ ಪಾಲಾಗಿದ್ದಾರೆ. ಆರೋಪಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಇತ್ತೀಚೆಗೆ ಸಂಸಾರದಲ್ಲಿ ಹೊಂದಾಣಿಕೆಗಿ0ತ ಗಂಡ ಹೆಂಡತಿ ನಡುವೆ ಮನಸ್ತಾಪಗಳೇ ಹೆಚ್ಚಾಗ್ತಿವೆ. ಇದಕ್ಕೆ ಪೋಷಕರ ಹೊಣೆಗಾರಿಕೆಯೂ ಇದೆ. ಹೀಗೆ.. ಮದುವೆ ಮಾಡಿಕೊಟ್ಟ ಮಗಳಿಗೆ ಸಂಸಾರದಲ್ಲಿ ಹೊಂದಾಣಿಕೆ ಮಾಡಿಕೊಂಡು ಹೋಗುವಂತೆ ಬುದ್ಧಿವಾದ ಹೇಳೋ ಬದಲು ಹುಳಿ ಹಿಂಡಿ ಗಂಡ ಹೆಂಡತಿ ಮಧ್ಯ ಮನಸ್ತಾಪಕ್ಕೆ ಅತ್ತೆ ಕಾರಣವಾದರು ಎಂದು ಆರೋಪಿಸಿ ಅಳಿಯ ಅತ್ತೆಗೆ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲಾಚಿಂತಾಮಣಿ ತಾಲ್ಲೂಕು ಬಿಂಗಾನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಬಿಂಗಾನಹಳ್ಳಿ ಗ್ರಾಮದ ಕವಿತಾ-ಈಶ್ವರಪ್ಪ ದಂಪತಿಗಳ ಪುತ್ರಿ ಮಮತಾಳನ್ನ ಕೊತ್ತನೂರು ಗ್ರಾಮದ ಚಂದ್ರ ಎಂಬುವರ ಜೊತೆ ಮದುವೆ ಮಾಡಿಕೊಡಲಾಗಿತ್ತು. ಆದರೆ ಆರಂಭದಲ್ಲಿ ಚೆನ್ನಾಗಿದ್ದ ಸಂಸಾರಕ್ಕೆ ಅತ್ತೆ ತಲೆ ಹಾಕಿ ಸಂಸಾರ ಕೆಡಿಸಿದರು. ಮರಳಿ ಪತ್ನಿಯನ್ನ ಮನೆಗೆ ಕರೆದುಕೊಂಡು ಹೋಗೋಕೆ ಬಂದರೂ ವಿನಾಕಾರಣ ತೊಂದರೆ ಕೊಡ್ತಿದ್ದಾರೆಂದು ಆರೋಪಿಸಿ ಅಳಿಯ ಚಂದ್ರ ಮಚ್ಚಿನಿಂದ ಹಲ್ಲೆ ಮಾಡಿದ್ದರಿಂದ ಅತ್ತೆ ಕವಿತಾ ಸ್ಥಳದಲ್ಲೆಸಾವನ್ನಪ್ಪಿ, ಮಾವ ಈಶ್ವರಪ್ಪ ಗಾಯಗೊಂಡು ಚಿಂತಾಮಣಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಘಟನಾ ಸ್ಥಳಕ್ಕೆ ಚಿಕ್ಕಬಳ್ಳಾಪುರ ಎಸ್ಪಿ ಕುಶಾಲ್ ಚೌಕ್ಸೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದ್ದಾರೆ. ಘಟನೆ ಸಂಬ0ಧ ಆರೋಪಿ ಚಂದ್ರ ಮತ್ತವರ ಅಣ್ಣ ನರಸಿಂಹಮೂರ್ತಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಚಿಂತಾಮಣಿ ಗ್ರಾಮಾಂತರ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದು, ತನಿಖೆಯಿಂದ ಮತ್ತಷ್ಟು ಸತ್ಯಾಂಶ ಹೊರಬೀಳಲಿದೆ.