ಕುಡಿಯುವ ನೀರಿನ ಟ್ಯಾಂಕ್ ಸ್ವಚ್ಛಗೊಳಿಸದ ಅಧಿಕಾರಿಗಳು
1 min readಕುಡಿಯುವ ನೀರಿನ ಟ್ಯಾಂಕ್ ಸ್ವಚ್ಛಗೊಳಿಸದ ಅಧಿಕಾರಿಗಳು
ಹಾಸನ ಜಿಲ್ಲೆ ಅರಸೀಕೆರೆ ನಗರದ ತಾಲೂಕ ಆಡಳಿತ ಕಚೇರಿ ಮುಂಬಾಗದಲ್ಲಿ ರಾಜ್ಯ ರೈತ ಸಂಘದಿ0ದ ಇಂದು ಪ್ರತಿಭಟನೆ ನಡೆಸಿ, ಗ್ರೇಡ್೨ ತಾಹಸಿಲ್ದಾರ್ ಪಾಲಾಕ್ಷ ಮೂರ್ತಿ ಅವರಿಗೆ ಮನವಿ ಸಲ್ಲಿಸಿದರು.
ಅರಸೀಕೆರೆ ಗ್ರೇಡ್೨ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದ ರೈತಸಂಘದ ಜಿಲ್ಲಾಧ್ಯಕ್ಷ ದಯಾನಂದ್ ಮಾತನಾಡಿ, ಗ್ರಾಮೀಣ ಜನರಿಗೆ ಕುಡಿಯುವ ನೀರಿಗಾಗಿ ಕೇಂದ್ರ ಸರ್ಕಾರದ ಅನುದಾನದಲ್ಲಿ ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ಪ್ರತಿ ಹಳ್ಳಿಗೆ ಟ್ಯಾಂಕ್ ನಿರ್ಮಿಸಿ ಹೇಮಾವತಿ ನೀರು ಸಂಗ್ರಹಿಸಿ ಮನೆ ಮನೆಗೆ ಕುಡಿಯುವ ನೀರು ವ್ಯವಸ್ಥೆ ಮಾಡಲಾಗಿದೆ. ಆದರೆ ಕುಡಿಯುವ ನೀರು ಸಂಗ್ರಹಿಸುವ ಟ್ಯಾಂಕ್ ನಿರ್ಮಿಸಿದ ನಂತರ ಒಂದು ಬಾರಿಯೂ ಸ್ವಚ್ಛಗೊಳಿಸದ ಕಾರಣ ಪಾಚಿ ಕಟ್ಟಿ ಕುಡಿಯುವ ನೀರು ವಾಸನೆ ಬರುತ್ತಿದೆ ಎಂದು ಆರೋಪಿಸಿದರು.
ಗ್ರಾಮಸ್ಥರು ಇಂತಹ ಕಲುಷಿತ ನೀರು ಸೇವಿಸಿದರೆ ಅನಾರೋಗ್ಯಕ್ಕೆ ತುತ್ತಾಗುವ ಆತಂಕ ಇದ್ದು, ರೈತರು ದುಡಿದ ಹಣ ಆಸ್ಪತ್ರೆಗಳಿಗೆ ಸುರಿಯುವಂತಾಗಿದೆ. ಕೆಲ ದಿನಗಳ ಹಿಂದೆ ಕಸಬಾ ಹೋಬಳಿಯ ಬೆಳಗುಂಬ ಪಂಚಾಯತಿಯ ನಾಗೇನಹಳ್ಳಿಯಲ್ಲಿ ಕುಡಿಯುವ ನೀರಿನ ಟ್ಯಾಂಕಿನಲ್ಲಿ ಪಾಚಿ ಕಟ್ಟಿ ನೀರಿನಲ್ಲಿ ಹುಳ ಬಿದ್ದು, ಗ್ರಾಮಸ್ಥರು ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ. ಈ ಬಗ್ಗೆ ವರದಿಗಳು ಪ್ರಸಾರವಾದರೂ ಸಂಬ0ಧ ಪಟ್ಟ ಅಧಿಕಾರಿಗಳು ಗಮನ ಹರಿಸದೆ ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ ಎಂದು ಕಿಡಿ ಕಾರಿದರು.
ಈ ಸಂಬ0ಧ ಸ್ಥಳೀಯ ಶಾಸಕ ಶಿವಲಿಂಗೇಗೌಡರ ಗಮನಕ್ಕೆ ತಂದರೆ ಸಮಸ್ಯೆಗೆ ಸ್ಪಂದಿಸುವ ಬದಲು ಉಡಾಫೆ ಉತ್ತರ ನೀಡುತ್ತಿರುವುದು ಬೇಸರ ತಂದಿದೆ ಎಂದರು. ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷ ನಾಗವೇಣಿ ಮಾತನಾಡಿ, ಇದಕ್ಕೆ ಸಂಬ0ಧಪಟ್ಟ ಅಧಿಕಾರಿಗಳು ಆದಷ್ಟು ಬೇಗ ಸಮಸ್ಯೆಗಳನ್ನು ಬಗೆಹರಿಸಿಕೊಡಬೇಕು, ಇಲ್ಲವಾದರೆ ರೈತ ಸಂಘದಿ0ದ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದರು.
ರಾಜ್ಯ ರೈತ ಸಂಘದ ಚಿಕ್ಕಮಗಳೂರು ಅಧ್ಯಕ್ಷ ಜಯಶೀಲ, ಖಜಾಂಚಿ ಶಿವಣ್ಣ, ಅರಸೀಕೆರೆ ಮಹಿಳಾ ಘಟಕದ ಅಧ್ಯಕ್ಷ ಮಂಗಳ, ಬಾಣವರ ಹೋಬಳಿ ಅಧ್ಯಕ್ಷ ಪಂಚಾಕ್ಷರಿ, ಗಂಡಸಿ ಹೋಬಳಿ ಅಧ್ಯಕ್ಷ ಸುರೇಶ್ ಬೆಂಡೆಕೆರೆ ಇದ್ದರು.