ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ದುರ್ಗಾ ನಮಸ್ಕಾರ
1 min readಚಿಕ್ಕಬಳ್ಳಾಪುರದಲ್ಲಿ ನವರಾತ್ರಿ ಆಚರಣೆ ಜೋರು
ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ದುರ್ಗಾ ನಮಸ್ಕಾರ
ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ನಾಡಹಬ್ಬ ದಸರಾ ಪ್ರಯುಕ್ತ ವಿಶೇಷ ದುರ್ಗಾ ನಮಸ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಸಮಿತಿ 1980ರಲ್ಲಿ ಎ.ಆರ್. ರಾಮಸ್ವಾಮಿ ಮಾರ್ಗದರ್ಶನದಲ್ಲಿ ಪ್ರಾರಂಭಿಸಲಾಗಿದೆ.
44 ವರ್ಷಗಳಿಂದ ನಿರಂತರವಾಗಿ ಉಚಿತ ಯೋಗ ಶಿಕ್ಷಣ ನೀಡುತ್ತಿರುವ ಪತಂಜಲಿ ಯೋಗ ಶಿಕ್ಷಣ ಸಮಿತಿ ಉದ್ದೇಶ ಯೋಗವನ್ನು ಉಚಿತವಾಗಿ ಕಲಿಸುತ್ತಾ, ಜನರಿಗೆ ಆರೋಗ್ಯಕರ ಹಾಗೂ ಸಂತಸದ ಜೀವನಕ್ಕೆ ದಾರಿ ತೋರಿಸುವುದಾಗಿದೆ ಎಂದರು. ನವರಾತ್ರಿ ಹಬ್ಬದ ಹಿನ್ನಲೆಯಲ್ಲಿ ದಸರಾ ಹಬ್ಬವನ್ನು ನಗರದ ಜೂನಿಯರ್ ಕಾಲೇಜ್ ಸ್ಟೇಡಿಯಂ ನಲ್ಲಿ ಆಚರಿಸಲಾಯಿತು.
ದಸರಾ ಎಂಬ ಶಬ್ದದ ಉತ್ಪತ್ತಿ ದಶಹರ ಎನ್ನುವುದರಿಂದ ಬಂದಿದೆ. ದಶ ಎಂದರೆ ಹತ್ತು, ಹರ ಎಂದರೆ ನಿವಾರಣೆ. ಹತ್ತು ದಿಕ್ಕುಗಳ ದುಷ್ಟಶಕ್ತಿಗಳ ಮೇಲೆ ವಿಜಯ ಸಾಧಿಸುವುದನ್ನು ಈ ಹಬ್ಬ ಸೂಚಿಸುತ್ತದೆ. ದುರ್ಗಾದೇವಿಯ ಶಕ್ತಿಯಿಂದ ದಿಕ್ಕುಗಳಲ್ಲಿ ವಿಜಯ ಪ್ರಾಪ್ತಿಯಾಗುವುದರಿಂದ ವಿಜಯದಶಮಿ ಎಂದೂ ಕರೆಯುತ್ತಾರೆ ಎಂದರು.
ಪತ0ಜಲಿ ಯೋಗ ಶಿಕ್ಷಣ ಸಮಿತಿ ಈ ಹಬ್ಬದ ಅಂಗವಾಗಿ ದುರ್ಗಾ ನಮಸ್ಕಾರ ಕಾರ್ಯಕ್ರಮ ನಡೆಸಿ, ಯೋಗದ ಮೂಲಕ ದೈಹಿಕ ಮತ್ತು ಮಾನಸಿಕ ಶ್ರೇಯಸ್ಸನ್ನು ಒತ್ತಿ ಹೇಳಿದೆ. ಈ ಕಾರ್ಯಕ್ರಮದ ನೇತೃತ್ವವನ್ನು ಎಚ್.ಎಂ. ನಾಗರಾಜ್ ವಹಿಸಿದ್ದು, ಕನಕರಾಜ್, ರತ್ನವರ್ಮ, ರಾಮಕೃಷ್ಣರೆಡ್ಡಿ, ಸುಧಾ, ಸುಭಾಷಿಣಿ, ಮಂಜುನಾಥ್, ಸತೀಶ್, ವೆಂಕಟೇಶ್, ಶೈಲಜಾ, ಲೀಲಾವತಿ, ಗಾಯಿತ್ರಿ, ಪವಿತ್ರ ಸೇರಿದಂತೆ ಅನೇಕ ಯೋಗಪಟುಗಳು ಭಾಗವಹಿಸಿದ್ದರು.