ಹರ್ಯಾಣದಲ್ಲಿ ಭರ್ಜರಿ ಮುನ್ನಡೆ ಸಾಧಿಸಿದ ಬಿಜೆಪಿ! ಎಕ್ಸಿಟ್ ಪೋಲ್ ಭವಿಷ್ಯ ಉಲ್ಟಾ ಪಲ್ಟಾ! ಕಾಂಗ್ರೆಸ್ ಆತಂಕ!
1 min readಹರಿಯಾಣ ಅಸೆಂಬ್ಲಿ ಚುನಾವಣೆಯ ಮತ ಎಣಿಕೆ ಮುಂದುವರೆದಿದೆ. ಸದ್ಯ ಚುನಾವಣಾ ಆಯೋಗದ ಟ್ರೆಂಡ್‌ಗಳ ಪ್ರಕಾರ ಬೆಳಿಗ್ಗೆ 10.30ರ ಸುಮಾರಿಗೆ ಬಿಜೆಪಿ 51, ಕಾಂಗ್ರೆಸ್ 33 ಐಎನ್‌ಎಲ್‌ಡಿ 2 ಮತ್ತು ಇತರರು 4 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.
ಈ ಹಿಂದೆ ಚುನಾವಣೆ ಮುಗಿದ ನಂತರ ಎಕ್ಸಿಟ್‌ಪೋಲ್‌ಗಳಲ್ಲಿ ಹರ್ಯಾಣದಲ್ಲಿ ಆಡಳಿತ ವಿರೋಧಿ ಅಲೆಯಿಂದ ಬಿಜೆಪಿ ಅಧಿಕಾರ ಕಳೆದುಕೊಂಡು ಕಾಂಗ್ರೆಸ್ ಅಧಿಕಾರಕ್ಕೆ ಏರಲಿದೆ ಎಂದು ಹೇಳಲಾಗಿತ್ತು. ಬೆಳಗಿನ ಟ್ರೆಂಡ್ ಪ್ರಕಾರ ಫಲಿತಾಂಶವೂ ಹಾಗೆಯೇ ಇತ್ತು. ಮತ ಎಣಿಕೆಯ ಆರಂಭಿಕ ಹಂತದಲ್ಲಿ ಕಾಂಗ್ರೆಸ್ ಮುನ್ನಡೆ ಕಾಯ್ದುಕೊಂದರೆ ನಂತರ ಬೆಳಗ್ಗೆ 9.50 ರವರ ಸುಮಾರಿಗೆ ಬಿಜೆಪಿ 38 ಸ್ಥಾನಗಳಲ್ಲಿ, ಕಾಂಗ್ರೆಸ್ 31, ಇಂಡಿಯನ್ ನ್ಯಾಷನಲ್ ಲೋಕದಳ ಒಂದು ಸ್ಥಾನ ಮತ್ತು ಸ್ವತಂತ್ರ 1 ಸ್ಥಾನಗಳಲ್ಲಿ ಮುನ್ನಡೆ ಕಾಯ್ದಿತ್ತು. ಆದರೆ ಈಗ ಬಿಜೆಪಿ ಸರಳ ಬಹುಮತದತ್ತ ಮುನ್ನಡಿ ಇಡುತ್ತಿದೆ.
ಈ ಬಾರಿ ಭಾರತೀಯ ಜನತಾ ಪಕ್ಷ ಮೂರನೇ ಬಾರಿಗೆ ಸರ್ಕಾರ ರಚಿಸಲು ಸಂಪೂರ್ಣ ಪ್ರಯತ್ನ ನಡೆಸಿದ್ದು, ಆದರೆ 2019 ರ ವಿಧಾನಸಭಾ ಚುನಾವಣೆಯ ಫಲಿತಾಂಶವನ್ನು ನೋಡೋದಾದರೆ ಆಗ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಕ್ಕಿರಲಿಲ್ಲ. ಆದರೆ ಚುನಾವಣಾ ಕಣದಲ್ಲಿ ಕಾಂಗ್ರೆಸ್ ಬಲವಾಗಿ ನಿಂತಿತ್ತು. ಕಾಂಗ್ರೆಸ್ 31 ಸ್ಥಾನಗಳಿಗೆ ಸೀಮಿತವಾಗಿದ್ದರೆ, ಬಿಜೆಪಿ 40 ಸ್ಥಾನಗಳನ್ನು ಗೆಲ್ಲಲು ಶಕ್ತವಾಗಿತ್ತು.
ನಂತರ ಬಿಜೆಪಿ ಸರ್ಕಾರ ರಚಿಸಲು ಜನನಾಯಕ ಜನತಾ ಪಕ್ಷದ ಬೆಂಬಲ ಪಡೆಯಬೇಕಾಯಿತು. ಜೆಜೆಪಿ 10 ಸ್ಥಾನಗಳನ್ನು ಗೆಲ್ಲುವ ಮೂಲಕ ಕಿಂಗ್ ಮೇಕರ್ ಪಾತ್ರವನ್ನು ನಿರ್ವಹಿಸಿತು. ಈ ಕಾರಣಕ್ಕಾಗಿ ದುಷ್ಯಂತ್ ಚೌತಾಲಾ ಅವರನ್ನು ಉಪ ಮುಖ್ಯಮಂತ್ರಿಯನ್ನಾಗಿ ಮಾಡಲಾಯಿತು. ಆದರೆ, ಲೋಕಸಭೆ ಚುನಾವಣೆಗೂ ಮುನ್ನವೇ ಜೆಜೆಪಿ ಜತೆಗಿನ ಬಿಜೆಪಿ ಮೈತ್ರಿ ಮುರಿದು ಬಿದ್ದಿತ್ತು. 2024ರ ಲೋಕಸಭೆ ಚುನಾವಣೆಯಲ್ಲೂ ಬಿಜೆಪಿ ಸೋಲು ಅನುಭವಿಸಬೇಕಾಯಿತು. 2019 ರ ಲೋಕಸಭೆ ಚುನಾವಣೆಯಲ್ಲಿ 10 ರಲ್ಲಿ 10 ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿ 2024ರಲ್ಲಿ 5 ಸ್ಥಾನಗಳಿಗೆ ಕುಸಿದಿತ್ತು. ಮತ್ತು ಕಾಂಗ್ರೆಸ್ ಐದು ಸ್ಥಾನಗಳನ್ನು ಗೆದ್ದಿತ್ತು.
ಹರ್ಯಾಣ ವಿಧಾನಸಭೆ ಚುನಾವಣೆಯ ಮತ ಎಣಿಕೆಯ ಬೆಳಗ್ಗೆ 8.40ರವರೆಗಿನ ಟ್ರೆಂಡ್ ಪ್ರಕಾರ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚಿಸುವ ಸಾಧ್ಯತೆ ಇತ್ತು. ಆಗ ಕಾಂಗ್ರೆಸ್ 57 ಸ್ಥಾನಗಳಲ್ಲಿ ಮುಂದಿತ್ತು. ಆದರೆ ಬಿಜೆಪಿ 20 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿತ್ತು. ಆದರೆ ಈಗ ಫಲಿತಾಂಶ ಉಲ್ಟವಾಗುವ ಸಾಧ್ಯತೆ ಇದ್ದು, ಬಿಜೆಪಿ ಮತ್ತೆ ಅಧಿಕಾರಕ್ಕೆ ಏರುವ ಸಾಧ್ಯತೆ ದಟ್ಟವಾಗಿದೆ.
ಪ್ರಮುಖ ಅಭ್ಯರ್ಥಿಗಳ ಪೈಕಿ ವಿನೇಶ್ ಫೋಗಟ್ ಮುನ್ನಡೆ ಕಾಯ್ದುಕೊಂಡಿದ್ದು, ನೈಬ್ ಸಿಂಗ್ ಸೈನಿ ಕೂಡ ಗೆಲ್ಲುವ ಸಾಧ್ಯತೆ ಇದೆ. ಅಂಬಾಲಾ ಕ್ಯಾಂಟ್‌ನಿಂದ ಅನಿಲ್ ವಿಜ್, ಕೈತಾಲ್‌ನಿಂದ ಆದಿತ್ಯ ಸುರ್ಜೆವಾಲಾ, ರೇವಾರಿಯಿಂದ ಚಿರಂಜೀವ್ ರಾವ್, ಎಲೆನಾಬಾದ್‌ನಿಂದ ಅಭಯ್ ಚೌತಾಲಾ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಜೆಜೆಪಿ ನಾಯಕ ದುಷ್ಯಂತ್ ಚೌತಾಲ ಉಚ್ಚನ ಕಲಾನ್ ಕ್ಷೇತ್ರದಲ್ಲಿ ಹಿನ್ನಡೆ ಕಾಯ್ದುಕೊಂಡಿದ್ದಾರೆ. ಹಿಸಾರ್ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿ ಸಾವಿತ್ರಿ ಜಿಂದಾಲ್ ಮುನ್ನಡೆ, ನರಗಾಂವ ಕ್ಷೇತ್ರದಲ್ಲಿ ಬಿಜೆಪಿ ಮುಖಂಡ ಕ್ಯಾಪ್ಟನ್ ಅಭಿಮನ್ಯು ಹಿನ್ನಡೆ, ಬಿಜೆಪಿ ನಾಯಕಿ ಶ್ರುತಿ ಚೌಧರಿ ತೋಷಂನಿಂದ ಮುನ್ನಡೆಯಲ್ಲಿದ್ದಾರೆ. ಬಿಜೆಪಿ ನಾಯಕಿ ಆರತಿ ಸಿಂಗ್ ರಾವ್ ಅಟ್ಲಿ ಕ್ಷೇತ್ರದಿಂದ ಮುನ್ನಡೆ ಸಾಧಿಸಿದ್ದಾರೆ.
ಅಚ್ಚರಿಯ ಸಂಗತಿ ಎಂದರೆ ಕರ್ನಾಲ್‌ನ ಎಲ್ಲಾ 5 ಸ್ಥಾನಗಳಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ. ಇದು ಮನೋಹರ್ ಲಾಲ್ ಖಟ್ಟರ್ ಅವರ ಭದ್ರಕೋಟೆ ಎಂದು ಪರಿಗಣಿಸಲಾಗಿದೆ.
Top News: Latest Trending in India, Buzz, World Trending News, Hot on Social Media, What is Trending in the World, Trending on Social Media.
►Watch LIVE: https://shashwatha.com/player.php?url=https://shashwatha.com/hls/shashwatha/ctvnews.m3u8
►CTV News : https://ctvnewskannada.com/
►Subscribe to Ctv News: https://www.youtube.com/channel/UCHtq26kA5D5anCbPD3HoURw
►Big News Big Update : https://ctvnewskannada.com/
► Download CTV Android App: https://play.google.com/store/apps/details?id=com.ctv.ctvnews
► Like us on Facebook: https://www.facebook.com/ctvnewschikkaballapura
► Follow us on Instagram: https://www.instagram.com/ctvnewschikkaballapura/
► Follow us on Twitter: https://twitter.com/ctvnewscbpura
-news #ctv #ctvnewskannada #ctvchikkaballapura #ctvnewsmedia #ctvlive#ctvnewsupdate #todaynews #latestnewstoday #ctv -news #ctv #ctvnewskannada #ctvchikkaballapura #ctvnewsmedia #ctvlive#ctvnewsupdate #todaynews #latestnewstoday #rtodaybreakingnews #chikkaballapuranews #flashnews #liveupdatenews @ctv-news