ಚಿಕ್ಕಬಳ್ಳಾಪುರ ಎಸ್ ಪಿ ಕಚೇರಿಯಲ್ಲಿ ದಲಿತರ ಕುಂದು ಕೊರತೆ ಸಭೆ
1 min readಚಿಕ್ಕಬಳ್ಳಾಪುರ ಎಸ್ ಪಿ ಕಚೇರಿಯಲ್ಲಿ ದಲಿತರ ಕುಂದು ಕೊರತೆ ಸಭೆ
ಜಿಲ್ಲೆಯ ಐದೂ ತಾಲೂಕುಗಳ ದಲಿತ ಮುಖಂಡರು ಸಭೆಯಲ್ಲಿ ಭಾಗಿ
ಎಲ್ಲ ಸಮಸ್ಯೆಗಳ ಪರಿಹಾರದ ಭರವಸೆ ನೀಡಿದ ಎಸ್ ಪಿ
ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ಇಲಾಖೆಯಿಂದ ಚಿಕ್ಕಬಳ್ಳಾಪುರದ ಎಸ್‌ಪಿ ಕಚೇರಿಯಲ್ಲಿ ಇಂದು ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ಪಂಗಡದ ಕುಂದುಕೊರತೆ ಸಭೆ ನಡೆಯಿತು.
ಜಿಲ್ಲೆಯ ಗೌರಿಬಿದನೂರು, ಬಾಗೇಪಲ್ಲಿ, ಚಿಂತಾಮಣಿ, ಗುಡಿಬಂಡೆ, ಬಾಗೇಪಲ್ಲಿ, ಶಿಡ್ಲಘಟ್ಟ ತಾಲ್ಲೂಕಿನಿಂದ ಬಂದಿದ್ದ ದಲಿತ ಸಂಘರ್ಷ ಸಮಿತಿ ಸದಸ್ಯರು ಮತ್ತು ದಲಿತ ಸಮುದಾಯದ ಮುಖಂಡರು ಕುಂದುಕೊರತೆಗಳನ್ನು ಎಸ್‌ಪಿ ಕುಶಾಲ್ ಚೌಕ್ಸೆ ಅವರ ಗಮನಕ್ಕೆ ತಂದರು. ಸಭೆಯಲ್ಲಿ ಚರ್ಚೆಯಾದ ವಿಷಯಗಳ ಬಗ್ಗೆ ಸಿ ಟಿವಿಯ ಜೊತೆ ಮಾತನಾಡಿದ ಎಸ್‌ಪಿ ಕುಶಾಲ್ ಚೌಕ್ಸೆ, ಮದ್ಯ ಮಾರಾಟ, ಗಾಂಜಾ, ಪೋಕ್ಸೊ ಸೇರಿದಂತೆ ವಿವಿಧ ಪ್ರಕರಣಗಳ ಬಗ್ಗೆ ದಲಿತ ಸಂಘರ್ಷ ಸಮಿತಿ ಮುಖಂಡರು ಮತ್ತು ಸಮುದಾಯದ ಮುಖಂಡರು ಗಮನಕ್ಕೆ ತಂದಿದ್ದಾರೆ. ಅಕ್ರಮಗಳ ತಡೆಗೆ ಅವರ ಸಹಕಾರ ಬೇಕಿದೆ ಎಂದರು. ಪೊಲೀಸ್ ಠಾಣೆಗಳಲ್ಲಿ ಯಾವ ಯಾವ ಪ್ರಕರಣಗಳು ಬಾಕಿ ಇವೆ ಎನ್ನುವುದನ್ನು ಗಮನಕ್ಕೆ ತಂದಿದ್ದಾರೆ. ಜಮೀನಿಗೆ ಸಂಬAಧಿಸಿದ ವಿವಾದಗಳ ಬಗ್ಗೆ ತಿಳಿಸಿದ್ದಾರೆ. ಕೆಲವು ವಿಚಾರಗಳು ವೈಯಕ್ತಿಕ ಸಮಸ್ಯೆಗಳೂ ಇವೆ. ಈ ರೀತಿಯ ಸಭೆಗಳನ್ನು ನಿರಂತವಾಗಿ ನಡೆಸುತ್ತೇವೆ ಎಂದು ಮುಖಂಡರಿಗೆ ತಿಳಿಸಿರುವುದಾಗಿ ಹೇಳಿದರು. ಜಾತೀಯತೆ ನಡೆಯುತ್ತಿದ್ದರೆ, ಅಂಬೇಡ್ಕರ್ ಅವರ ಭಾವಚಿತ್ರ ಅಥವಾ ಬೋರ್ಡ್ ಹಾಕುವ ವಿಚಾರ ವಿವಾದವಾಗಿದ್ದರೆ ಹೀಗೆ ನಾನಾ ವಿಷಯಗಳನ್ನು ಗಮನಕ್ಕೆ ತಂದಿದ್ದಾರೆ. ನಾವು ಅವರ ಆಹವಾಲುಗಳನ್ನು ಕೇಳಿದ್ದೇವೆ. ಸಮಸ್ಯೆಗಳ ಪರಿಹಾರದ ದಿಕ್ಕಿನಲ್ಲಿ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು. ಚೇಳೂರು ಠಾಣೆಯಲ್ಲಿ ಪೊಲೀಸರ ತಪ್ಪುಗಳ ಬಗ್ಗೆ ಗಮನಕ್ಕೆ ತಂದಿದ್ದಾರೆ. ಯಾವ ಠಾಣೆಯೇ ಆಗಲಿ ತಪ್ಪು ಮಾಡಿದ್ದ ಸಿಬ್ಬಂದಿ ಮೇಲೆ ಕ್ರಮವಹಿಸಲಾಗುವುದು ಎಂದರು.