ಕುಮಾರಸ್ವಾಮಿ, ವಿಜಯೇಂದ್ರ ವಿರುದ್ಧ ಸಚಿವರ ವಾಗ್ದಾಳಿ
1 min readಕುಮಾರಸ್ವಾಮಿ, ವಿಜಯೇಂದ್ರ ವಿರುದ್ಧ ಸಚಿವರ ವಾಗ್ದಾಳಿ
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿರುಗೇಟು
ಸಿಎಂ ಸಿದ್ದರಾಮಯ್ಯ ರಾಜಿನಾಮೆ ಪ್ರಶ್ನೆಯೇ ಇಲ್ಲ ಎಂದ ಸಚಿವ
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿರುಗೇಟು ನೀಡಿದ್ದಾರೆ. ಮೊದಲು ಅವರ ತಂದೆ ಮತ್ತವರ ಕುಟುಂಬದ ಭ್ರಷ್ಟಾಚಾರದ ಬಗ್ಗೆ ವಿಜಯೇಂದ್ರ ಮಾತಾಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಚಿಕ್ಕಬಳ್ಳಾಪುರದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ ನಂತರ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ನಿರಂತರವಾಗಿ ಲೂಟಿ ಮಾಡಿದವರು ಭ್ರಷ್ಟಾಚಾರದ ಬಗ್ಗೆ ಮಾತಾಡೋದು ಹಾಸ್ಯಸ್ಪದ ಎಂದರು. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಜಿಪಿಎ ಸಿಎಂ ಆಗಿ ವಿಜಯೇಂದ್ರ ಇದ್ದರಲ್ಲ ಎಂದು ಸಚಿವರು ಪ್ರಶ್ನಿಸಿದರು. ವಿಜಯೇಂದ್ರ ಆಣತಿಯಂತೆ ೆಫೈಲ್‌ಗಳು ನಡೆಯುತ್ತಿದ್ದವು, ಮೊದಲು ಭ್ರಷ್ಟಾಚಾರ ಎಲ್ಲಿಂದ ಆರಂಭವಾಯಿತು ಎಂದು ಹೇಳಲಿ, ಈಗ ಸಿಎಂ ಸಿದ್ದರಾಮಯ್ಯ ವಿರುದ್ಧ ಮಾತಾಡ್ತಾರೆ ಎಂದು ಅಸಮಾಧನ ಹೊರ ಹಾಕಿದರು.
ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧವೂ ವಾಗ್ದಾಳಿ ನಡೆಸಿದ ಸಚಿವ ದಿನೇಶ್ ಗುಂಡೂರಾವ್, ಕುಮಾರಸ್ವಾಮಿ ವಿರುದ್ಧ ಎïಐಆರ್ ಆಗಿದೆ, ತನಿಖೆ ನಡೆಯುತ್ತಿದೆ. ಅವರಿಗೆ ಐಡಿಯಾಲಜಿಯೇ ಇಲ್ಲ. ಪ್ರಿನ್ಸಿಪಲ್ಸ್ ಇಲ್ಲ, ಅವರೇ ಹೇಳಿದ್ದಾರೆ, ಅವರಿಗೆ ಅಧಿಕಾರವೇ ಮುಖ್ಯ. ಅವರ ಮೇಲೆ ಎಷ್ಟು ಆರೋಪ, ತನಿಖೆ ಏನಿದ್ದರೂ ತಲೆ ಕೆಡಸಿಕೊಳ್ಳುವುದಿಲ್ಲ ಎಂದು ಲೇವಡಿ ಮಾಡಿದರು.
ಸಿದ್ದ ರಾಮಯ್ಯ ಪ್ರಕರಣ ಬೇರೆ. ಅವರಿಗೆ ನೋವಿದೆ, ಅಂತವರ ಮೇಲೆ ಇಂತಹ ಷಡ್ಯಂತರ ಮಾಡುತ್ತಿದ್ದಾರೆ ಎಂದು ನಮಗೂ ನೋವಿದೆ. ಅವರ ಹೆಸರು ಕೆಡಿಸಿಲು ಹೋಗಿದ್ದಾರೆ. ಅವರ ಸ್ಟಾಂಡರ್ಡ್ ಬೇರೆ, ಕುಮಾರಸ್ವಾಮಿ ಸ್ಟಾಂಡರ್ಡ್ ಬೇರೆ ಎಂದು ದಿನೇಶ್ ಗುಂಡೂರಾವ್ ಸಮರ್ಥಿಸಿಕೊಂಡರು.
ಸಿದ್ದರಾಮಯ್ಯ ರಾಜಿನಾಮೆ ವಿಚಾರದ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉಥ್ತರಿಸಿದ ಸಚಿವ ದಿನೇಶ್ ಗುಂಡೂರಾವ್, ರಾಜಿನಾಮೆ ಪ್ರಶ್ನೆಯೇ ಬರುವುದಿಲ್ಲ, ಇಡೀ ಪಕ್ಷ ಅವರ ಜೊತೆಯಲ್ಲಿದೆ. ಅವರೇನು ತಪ್ಪು ಮಾಡಿಲ್ಲ. ವಿರೋಧ ಪಕ್ಷದವರು ರಾಜಕೀಯ ಮಾಡುತ್ತಾರೆ.ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಬೇಕು ಎಂದರು.
ವಿಜಯೇAದ್ರ ಮೊದಲು ಅವರ ಮೇಲೆ, ಅವರ ತಂದೆ ಮೇಲೆ ಹೋರಾಟ ಮಾಡಲಿ. ಈ ಹೋರಾಟ ಅವರ ಮೇಲೆನಾ, ಅವರ ತಂದೆ ಮೇಲೆನಾ ಎಂದು ಪ್ರಶ್ನಿಸಿದ ಸಚಿವರು, ಭ್ರಷ್ಟಾಚಾರದಲ್ಲಿ ಅತೀ ಹೆಚ್ಚು ಹೆಸರು ಮಾಡಿದವರು ಯಾರು, ಲೋಕಾಯುಕ್ತ ತನಿಖೆ, ಅವರು ಸಿಎಂ ಆಗಿದ್ದಾಗ ಏನಿತ್ತು ಪರಿಸ್ಥಿತಿ, ಜಿಪಿಎ ಸಿಎಂ ಯಾರಾಗಿದ್ದರು, ವಿಜಯೇಂದ್ರ ಅಲ್ಲವೆ, ಎಲ್ಲಾ ಫೆಲ್ ಆವರ ಬಳಿಗೇ ಹೋಗುತ್ತಿತ್ತಲ್ಲ. ನೈತಿಕತೆ ಇಟ್ಟುಕೊಂಡು ಮಾತನಾಡಿದರೆ ಕೇಳಬಹುದು. ಅವರು ನಮ್ಮ ಸಿಎಂ ಬಗ್ಗೆ ಮಾತನಾಡಿದರೆ ಹೇಗೆ. ಸಿಎಂ ವಿರುದ್ಧ ಮಾಡುತ್ತಿರುವುದು ರಾಜಕೀಯ ಪ್ರೇರಿತ ಎಂದು ಸಚಿವರು ಸಮರ್ಥಿಸಿಕೊಂಡರು.