ಗುಡಿಬಂಡೆಯ ಸುರಸದ್ಮಗಿರಿಯಲ್ಲಿ ವಿನೂತನ ಕಾರ್ಯಕ್ರಮ
1 min readಟೆಕ್ಕಿಗಳಿಂದ ಬೀಜದುಂಡೆ ತಯಾರಿಕೆ, ಪ್ರಸರಣ
ಗುಡಿಬಂಡೆಯ ಸುರಸದ್ಮಗಿರಿಯಲ್ಲಿ ವಿನೂತನ ಕಾರ್ಯಕ್ರಮ
ಐತಿಹಾಸಿಕ ಹಿನ್ನೆಲೆಯ ಸುರಸದ್ಮಗಿರಿಯಲ್ಲಿ ಬೆಂಗಳೂರು ಮೂಲದ ಲಂಡನ್ ಸ್ಟಾಕ್ ಎಕ್ಸ್ ಚೇಂಜ್ ಗ್ರೂಪ್‌ಫೌಂಡೇಷನ್, ಯೂತ್ ಫಾರ್ ಸೇವಾ ಹಾಗೂ ಸ್ಥಳೀಯ ಗ್ರಾಮ ವಿಕಾಸ ಸಂಸ್ಥೆಯಿAದ ಬೀಜದುಂಡೆ ತಯಾರಿಕೆ ಹಾಗೂ ಬೆಟ್ಟದಲ್ಲಿ ಬೀಜದುಂಡೆಗಳ ಪ್ರಸರಣದ ಜೊತೆಗೆ ಸ್ವಚ್ಚತಾ ಆಂದೋಲನ ಹಮ್ಮಿಕೊಳ್ಳಲಾಗಿತ್ತು.
೫೦ಕ್ಕೂ ಅಧಿಕ ಮಂದಿ ಟೆಕ್ಕಿಗಳು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಲಂಡನ್ ಸ್ಟಾಕ್ ಎಕ್ಸ್ ಚೇಂಜ್ ಗ್ರೂಪ್‌ಫೌಂಡೇಷನ್ ನಿರ್ದೇಶಕ ನಿತಿನ್ ಶಾಸ್ತಿ ಮಾತನಾಡಿ, ಕಂಪನಿಯಲ್ಲಿ ಸುಮಾರು ಆರೂವರೆ ಸಾವಿರ ಮಂದಿ ನೌಕರರಿದ್ದಾರೆ. ಪ್ರತಿ ವರ್ಷ ನಮ್ಮ ಕಂಪನಿಯಿ0ದ ಅನೇಕ ಸಾಮಾಜಿಕ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ನೌಕರರಲ್ಲಿ ಸೇವಾ ಮನೋಭಾವ, ಸಾಮಾಜಿಕ ಕಳಕಳಿ ಬೆಳೆಸುವ ನಿಟ್ಟಿನಲ್ಲಿ ಈ ರೀತಿಯ ಕಾರ್ಯಕ್ರಮಗಳನ್ನು ಕಂಪನಿಯ ಸಿಎಸ್‌ಆರ್ ನಿಧಿಯಡಿ ಆಯೋಜಿಸಲಾಗುತ್ತದೆ ಎಂದರು.
ಗುಡಿಬAಡೆ ಸುಂದರ ಪ್ರದೇಶವಾಗಿದೆ. ಈ ಭಗದಲ್ಲಿ ಸುಂದರ ಪ್ರಕೃತಿಯಿದೆ. ಆ ಪ್ರಕೃತಿ ಸೌಂದರ್ಯ ಕಂಡು ಸಂತಸವಾಗಿದೆ. ಆ ಪ್ರಕೃತಿ ಮತಷ್ಟು ಹೆಚ್ಚಿಸಲು ನಮ್ಮ ಕಡೆಯಿಂದ ಈ ಬೀಜದುಂಡೆ ತಯಾರಿಕೆ ಹಾಗೂ ಪ್ರಸರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬೀಜದುಂಡೆಗಳ ಪ್ರಸರಣದ ಬಳಿಕ ಸಿಬ್ಬಂದಿಯಿ0ದ ಬೆಟ್ಟದಲ್ಲಿ ಸ್ವಚ್ಚತಾ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಈ ಭಗದಲ್ಲಿಯೇ ಹೆಚ್ಚು ಕಾರ್ಯಕ್ರಮಗಳನ್ನು ಕೈಗೊಳ್ಳಲು ಮುಂದಾಗುವುದಾಗಿ ತಿಳಿಸಿದರು.
ಲಂಡನ್ ಸ್ಟಾಕ್ ಎಕ್ಸ್ ಚೇಂಜ್ ಗ್ರೂಪ್‌ಫೌಂಡೇಷನ್ ನ ಸಿಬ್ಬಂದಿ ಆಲ್ಬರ್ಟ್ ಬೆಕ್ಕಿ ಮಾತನಾಡಿ, ಬೆಂಗಳೂರಿನಲ್ಲಿರುವ ಅನೇಕರಿಗೆ ಈ ಗ್ರಾಮೀಣ ಭಾಗಗಳ ಬಗ್ಗೆ ಪರಿಚಯವೇ ಇರುವುದಿಲ್ಲ. ಈ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಾಗ ಈ ಭಾಗಗಳೂ ಪರಿಚಯವಾಗುತ್ತವೆ. ಸರ್ಕಾರಿ ಶಾಲೆಗಳಲ್ಲಿ ಕಂಪ್ಯೂಟರ್ ಲ್ಯಾಬ್, ಶುದ್ದ ಕುಡಿಯುವ ನೀರಿನ ಘಟಕ, ಸ್ಮಾರ್ಟ್ ಕ್ಲಾಸ್, ಪೀಠೋಪಕರಣಗಳು, ಕ್ರೀಡಾಕೂಟಗಳ ಆಯೋಜನೆಯಂತಹ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಯೂತ್ ಫರ್ ಸೇವಾ ಸಂಸ್ಥೆಯ ಕೋ ಆರ್ಡಿನೇಟರ್ ಮಂಜುನಾಥ್ ಮಾತನಾಡಿ, ಸಂಸ್ಥೆಯೊ0ದಿಗೆ ಅನೇಕ ಕಂಪನಿಗಳು ಸೇರಿ ಗ್ರಾಮೀಣ ಭಾಗಗಳಲ್ಲಿ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಗುಡಿಬಂಡೆಯಲ್ಲಿ ಈಗಾಗಲೇ ಶಾಲಾ ಕಟ್ಟಡಗಳ ದುರಸ್ತಿ, ಕಲ್ಯಾಣಿಗಳ ಪುನಃಚ್ಚೇತನ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಯೂತ್ ಫರ್ ಸೇವಾ ಸಂಸ್ಥೆಯಿ0ದ ಈ ಭಾಗದಲ್ಲಿ ಮತಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದರು.