ನಾಗಾರ್ಜುನ ಕಾಲೇಜಿನಲ್ಲಿ ಜಿ.ಸಿ.ಎ.ಟಿ 2024 ಕಾರ್ಯಕ್ರಮ
1 min read5ನೇ ಅಡ್ವಾನ್ಸ್ಮೆಂಟ್ ಟೆಕ್ನಾಲಜಿ ಸಮ್ಮೇಳನ
ನಾಗಾರ್ಜುನ ಕಾಲೇಜಿನಲ್ಲಿ ಜಿ.ಸಿ.ಎ.ಟಿ 2024 ಕಾರ್ಯಕ್ರಮ
ತಾ0ತ್ರಿಕತೆ ಆಧುನಿಕತೆ ಹಾಗೂ ಆಧ್ಯಾತ್ಮಿಕತೆ ಮೇಲೆ ಪ್ರಬಂಧಗಳ ಆಯ್ಕೆ 2016 ರಿಂದಲೂ ನಾಗಾರ್ಜುನ ಕಾಲೇಜಿನಲ್ಲಿ ನಡೆಯುತ್ತಿದ್ದು, ದೇಶ ವಿದೇಶಗಳಿಂದ 2 ಸಾವಿರಕ್ಕೂ ಹೆಚ್ಚು ಪ್ರಬಂಧಗಳು ಬಂದಿವೆ. ಅವುಗಳಲ್ಲಿ 250 ಗುಣಾತ್ಮಕ ಪ್ರಬಂಧಗಳನ್ನು ಆಯ್ಕೆ ಮಾಡಿ ಈ ಸಮ್ಮೇಳನದಲ್ಲಿ ಮಂಡಿಸಲಾಗುತ್ತಿದೆ ಎಂದು ನಾಗಾರ್ಜುನ ಕಾಲೇಜಿನ ಪ್ರಾಂಶುಪಾಲ ರವಿಶಂಕರ್ ತಿಳಿಸಿದರು.
ಚಿಕ್ಕಬಳ್ಳಾಪುರ ಹೊರವಲಯ ನಾಗಾರ್ಜುನ ಕಾಲೇಜು ಆಫ ಎಂಜಿನಿಯರಿ0ಗ್‌ನಲ್ಲಿ ಇಂದು ಜಿಸಿಎಟಿ ಸಮ್ಮೇಳನ ಹಮ್ಮಿಕೊಳ್ಳಲಾಗಿತ್ತು. ಈ ಸಮ್ಮೇಳನಕ್ಕಾಗಿ ದೇಶವಿದೇಶನಗಳಿಂದ ಎರಡು ಸಾವಿರಕ್ಕೂ ಹೆಚ್ಚು ಪ್ರಬಂಧಗಳು ಬಂದಿದ್ದು, ಅವುಗಳಲ್ಲಿ ಗುಣಾತ್ಮಕವಾದ 250 ಪ್ರಬಂಧಗಳನ್ನು ಆಯ್ಕೆ ಮಾಡಿ ಕಾರ್ಯಕ್ರಮದಲ್ಲಿ ಮಂಡಿಸಲಾಗುವುದು ಎಂದು ಕಾಲೇಜಿನ ಪ್ರಾಂಶುಪಾಲ ರವಿಶಂಕರ್ ತಿಳಿಸಿದರು.
ಕಾರ್ಯಕ್ರಮವನ್ನು ಐಐಟಿ ಚೆನ್ನೆರೀಸರ್ಚ್ ಪಾರ್ಕ್ ಸೀನಿಯರ್ ಡೈರೆಕ್ಟರ್ ಡಾ.ಎ. ಪವೆಂಥಾನ್ ಉಧಾಟಿಸಿದರು. ಪುಣೆ ಸಿದ್ಧಾಂತ ಗ್ರೂಪ್ ಆಫಇನ್‌ನ್ಟೂಷನ್ ಪ್ಲಾನಿಂಗ್ ಡೈರೆಕ್ಟರ್ ಚಾಣಕ್ಯ ಕುಮಾರ್, ಎನ್‌ಇಎಸ್ ಬೆಂಗಳೂರು ನಿರ್ದೇಶಕ ಡಾ.ಎಸ್ ಜಿ ಗೋಪಾಲಕೃಷ್ಣ ಸಮ್ಮುಖದಲ್ಲಿ ನಡೆದ ಈ ಸಮ್ಮೇಳನದಲ್ಲಿ ಈ ಬಾರಿ ಭಾವನಾತ್ಮಕ ಸಂಬ0ಧಗಳ ಬೆಳೆಸುವ ತಾಂತ್ರಿಕತೆ ಆಧನಿಕತೆ ಹೊರ ತರುವ ಸಮ್ಮೇಳನ ಇದಾಗಿತ್ತು.
ಸಮ್ಮೇಳನ ಕುರಿತು ಮಾತನಾಡಿದೆ ಪ್ರಾಂಶುಪಾಲ ರವಿಶಂಕರ್, 2019ರಲ್ಲಿ ನಾಗಾರ್ಜುನ ಕಾಲೇಜಿನಲ್ಲಿ ಪ್ರಾರಂಭವಾದ ಸಮ್ಮೇಳನ ಐದು ವರ್ಷಗಳಿಂದ ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದೆ. ಇಂದು ನಡೆಯುತ್ತಿರುವ 5ನೇ ಸಮ್ಮೇಳನಕ್ಕೆ ದೇಶಾದ್ಯಂತ ಎರಡು ಸಾವಿರಕ್ಕೂ ಹೆಚ್ಚು ಪ್ರಬಂಧಗಳು ಬಂದಿದ್ದು, ಅವುಗಳಲ್ಲಿ ಗುಣಾತ್ಮಕ 250 ಪ್ರಬಂಧಗಳನ್ನು ಮಾತ್ರ ಆಯ್ಕೆ ಮಾಡಿ ಸಮ್ಮೇಳನದಲ್ಲಿ ಪ್ರಕಟ ಮಾಡಲಾಗಿದೆ ಎಂದರು.
ಸಮ್ಮೇಳನದಲ್ಲಿ ಎನ್‌ಇಎಸ್ ಬೆಂಗಳೂರು ಕಾರ್ಯದರ್ಶಿ ಚೈತನ್ಯವರ್ಮ, ಬಾನು ಚೈತನ್ಯವರ್ಮ, ಸಂಚಾಲಕ ಡಾ. ನಾಗೇಶ್ ಇದ್ದರು.