ಆಶ್ರಯ ಮನೆಗಳಿಗೆ ಮೀಸಲಿಟ್ಟ ಭೂಮಿ ಕಬಳಿಕೆ ಆರೋಪ
1 min readಆಶ್ರಯ ಮನೆಗಳಿಗೆ ಮೀಸಲಿಟ್ಟ ಭೂಮಿ ಕಬಳಿಕೆ ಆರೋಪ
ಪ್ರಭಾವಿ ವ್ಯಕ್ತಿಯಿಂದ ಜಮೀನು ಕಬಳಿಸಿರುವ ಆರೋಪ
ಬಡವರಿಗೆ ಸೂರು ಕಲ್ಪಿಸುವ ಉಧ್ದೇಶದಿಂದ ಸರ್ಕಾರವೇ ಆಶ್ರಯ ಮನೆಗಳಿಗಾಗಿ ಗುರ್ತಿಸಿದ ಭೂಮಿಯನ್ನು ಪ್ರಭಾವಿಗಳು ಕಬಳಿಸಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಪ್ರಭಾವಿಗಳು ಆಶ್ರಯ ಮನೆಗಳಿಗೆ ಮೀಸಲಿಟ್ಟ ಜಾಗ ಕಬಳಿಸಿದ್ದಾರೆಂದು ಆರೋಪಿಸಿ ಪ್ರತಿಭಟನೆಯೂ ನಡೆದಿದೆ.
ಚಿಕ್ಕಬಳ್ಳಾಪುರ ತಾಲೂಕಿನ ಪೆರೆಸಂದ್ರ ಶಕ್ತಿಕೇಂದ್ರವಾಗಿದೆ. ಇದಕ್ಕೆ ಕಾರಣ ಹಾಲಿ ಶಾಸಕ ಹಾಗೂ ಹಾಲಿ ಸಂಸದರು ಇದೇ ಗ್ರಾಮಕ್ಕೆ ಸೇರಿದವರಾಗಿದ್ದಾರೆ. ಈ ಗ್ರಾಮಕ್ಕೆ ಸಮೀಪದಲ್ಲಿರುವ ಕಾಕಲಚಿಂತೆ ಗ್ರಾಮಕ್ಕೆ ಸೇರಿದ ಭೂಮಿಯನ್ನು ಸರ್ಕಾರ ಈಗಾಗಲೇ ಬಡವರಿಗೆ ಮನೆ ನಿರ್ಮಿಸಿಕೊಡಲು ನಿವೇಶನಗಳನ್ನು ಮಾಡಲು ಗುರ್ತಿಸಿದೆ ಎನ್ನಲಾಗಿದೆ. ಈ ಸರ್ಕಾರಿ ಜಮೀನಿಗೆ ಹೊಂದಿಕೊ0ಡೇ ಇರುವ ಕಂದಾಯದ ಜಮೀನು ಉದ್ಯಮಿಯೊಬ್ಬರಿಗೆ ಸೇರಿದ್ದು ಎನ್ನಲಾಗಿದ್ದು, ಅವರು ಜಮೀನು ಕಬಳಿಸಿದ್ದಾರೆ ಎಂಬುದು ಪ್ರತಿಭಟನೆಕಾರರ ಆರೋಪವಾಗಿದೆ.
ಶ್ರಯ ಯೋಜನೆಗೆ ಮೀಸಲಿಟ್ಟ ಭೂಮಿ ಪೆರಿಸಂದ್ರ ಗುಡಿಬಂಡೆ ಮುಖ್ಯರಸ್ತೆಗೆ ಹೊಂದಿಕೊ0ಡೇ ಇದ್ದು, ಈ ಜಮೀನಿನ ಮೇಲೆ ಬೂಗಳ್ಳರ ಕಣ್ಣು ಬಿದ್ದಿದೆ ಎಂಬುದು ಆರೋಪವಾಗಿದೆ. ಈ ಸಮಸ್ಯೆ ಕಂದಾಯ ಇಲಾಖೆ ಆದ್ಯತೆ ಮೇರೆಗೆ ಪರಿಗಣಿಸಿ, ಸರ್ವೇ ಮಾಡುವ ಮೂಲಕ ಬಡವರಿಗಾಗಿ ಮೀಸಲಿಟ್ಟ ಜಾಗವನ್ನು ರಕ್ಷಿಸಬೇಕೆಂದು ಅವರು ಕೋರಿದ್ದಾರೆ. ಪ್ರಾಣ ಬಿಟ್ಟೇವು ಭೂಮಿ ಬಿಡುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದಾರೆ.
ಸಮಸ್ಯೆ ಉಲ್ಬಣವಾಗುವುದಕ್ಕೂ ಮೊದಲು ಸಂಬ0ಧಪಟ್ಟ ಕಂದಾಯ ಇಲಾಖೆ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ಆದಷ್ಟು ಶೀಘ್ರದಲ್ಲಿ ಸಮಸ್ಯೆಗೆ ಪರಿಹಾರ ನೀಡಬೇಕೆಂದು ಕೋರಿದ್ದು, ಬಡವರಿಗೆ ಮೀಸಲಿಟ್ಟ ಜಮೀನಿನಲ್ಲಿಯೇ ನಿವೇಶನಗಳನ್ನು ನೀಡುವ ಮೂಲಕ ಬಡವರ ಸೂರಿನ ಕನಸು ನನಸು ಮಾಡಬೇಕೆಂದು ಪ್ರತಿಭಟನಾಕಾರರು ಕೋರಿದ್ದಾರೆ. ಇಲ್ಲವಾದರೆ ಹೋರಾಟ ತೀವ್ರಗೊಳಿಸುವ ಎಚ್ಚರಿಕೆಯನ್ನು ನೀಡಿದ್ದಾರೆ.