ಮಾದಗೊಂಡನಹಳ್ಳಿ ಡೇರಿ ಅಧ್ಯಕ್ಷರಾಗಿ ನಂಜೇಗೌಡ
1 min readಮಾದಗೊಂಡನಹಳ್ಳಿ ಡೇರಿ ಅಧ್ಯಕ್ಷರಾಗಿ ನಂಜೇಗೌಡ
ಅವಿರೋಧ ಆಯ್ಕೆಯಾದ ಅಧ್ಯಕ್ಷ, ಉಪಾಧ್ಯಕ್ಷರು
ದೊಡ್ಡಬಳ್ಳಾಪುರ ತಾಲ್ಲೂಕಿನ ಮಾದಗೊಂಡನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆ ಇಂದು ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ನಂಜೇಗೌಡ ಮತ್ತು ಉಪಾಧ್ಯಕ್ಷರಾಗಿ ಎಂ.ರುದ್ರಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ದೊಡ್ಡಬಳ್ಳಾಪುರ ತಾಲ್ಲೂಕಿನ ಮಾದಗೊಂಡನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಎರಡೂ ಸ್ಥಾನಗಳಿಗೆ ಒಬ್ಬೊಬ್ಬರು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ, ಅವಿರೋಧ ಆಯ್ಕೆ ಸುಗಮವಾಯಿತು. ಚುನಾವಣಾಧಿಕಾರಿ ರಾಮಾಂಜಿನಪ್ಪ ಇಬ್ಬರ ಅವಿರೋಧ ಆಯ್ಕೆಯನ್ನು ಘೋಷಿಸಿದರು. ಬಳಿಕ ನೂತನ ಅಧ್ಯಕ್ಷ ನಂಜೇಗೌಡ ಮಾತನಾಡಿ, ಎಲ್ಲಿ ಸಹಕಾರವಿತ್ತದೆಯೋ ಅಲ್ಲಿ ಮಾತ್ರ ಸಂಘ ಮತ್ತು ಹಾಲು ಉತ್ಪಾದಕರು ಆರ್ಥಿಕವಾಗಿ ಪ್ರಗತಿ ಕಾಣಲು ಸಾಧ್ಯ ಎಂದರು.
ರೈತರ ಸ್ವಾವಲಂಬನೆಗಾಗಿ 2010ರಲ್ಲಿ ಸಂಘವನ್ನು ಸ್ಥಾಪನೆ ಮಾಡಲಾಗಿದೆ. ಈವರೆಗೂ ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆಗೆ ಆಸ್ಪದೆ ನೀಡದೆ ಅವಿರೋಧ ಆಯ್ಕೆ ಮಾಡಿಕೊಂಡು ಬಂದಿದ್ದಾವೆ. ಈ ಮೂಲಕ ಡೇರಿಯನ್ನ ರಾಜಕೀಯ ರಹಿತವಾಗಿ ಮುನ್ನಡೆಸಲಾಗುತ್ತಿದೆ. ನಾನು ಕೂಡ ಹಾಲಿನ ಡೇರಿಯ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಡೇರಿಯ ರೈತರಿಗೆ ಮತ್ತಷ್ಟು ಸೌಲಭ್ಯ ಕಲ್ಪಿಸಿ ಹೈನುಗಾರಿಕೆ ನಂಬಿರುವವರಿಗೆ ನೆರವಾಗಿ ನಿಲ್ಲುವೆ. ರಾಸುಗಳಿಗೆ ವಿಮೆ, ಹಾಲು ಉತ್ಪಾದಕರಿಗೆ ಆರೋಗ್ಯ ವಿಮೆ, ಸಕಾಲದಲ್ಲಿ ಬೋನಸ್ ವಿತರಣೆ ಸೇರಿದಂತೆ ಸಂಘ ಮತ್ತು ಹೈನುಗಾರರ ಪ್ರಗತಿಗಾಗಿ ಶ್ರಮಿಸುವೆ’ ಎಂದರು.