ಡಾ. ಸ್ವಾಮಿನಾಥನ್ ಆಯೋಗದ ವರದಿ ಜಾರಿಗೆ ಆಗ್ರಹ

ನೆಲಮಂಗಲದಲ್ಲಿ ಕೈಗಾರಿಕಾ ಉದ್ದೇಶಕ್ಕೆ ಭೂಸ್ವಾಧೀನ

ಅಕ್ರಮ ಭೂಮಿ ಮಂಜೂರು ವಜಾಗೆ ಒತ್ತಾಯ

ತಗಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉದ್ಘಾಟನೆ

December 25, 2024

Ctv News Kannada

Chikkaballapura

ಗುಡಿಬಂಡೆಯಲ್ಲಿ ಆಶಾ ಕಾರ್ಯಕರ್ತೆಯರಿಗೆ ಸೀರೆ ವಿತರಣೆ

1 min read

ಮುಂದುವರಿದ ನವೀನ್ ಕಿರಣ್ ಸಮಾಜ ಸೇವೆ ಸಪ್ತಾಹ
ಗುಡಿಬಂಡೆಯಲ್ಲಿ ಆಶಾ ಕಾರ್ಯಕರ್ತೆಯರಿಗೆ ಸೀರೆ ವಿತರಣೆ
ಆಸ್ಪತ್ರೆ ಸ್ವಚ್ಛತಾ ಸಿಬ್ಬಂದಿಗೂ ಬಾಗಿನ ನೀಡಿದ ಅಭಿಮಾನಿಗಳು

ಕೆವಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಕೆವಿ ನವೀನ್ ಕಿರಣ್ ಅವರ ೪೬ನೇ ಹುಟ್ಟುಹಬ್ಬದ ಪ್ರಯುಕ್ತ ಅವರ ಅಭಿಮಾನಿಗಳು ಹಮ್ಮಿಕೊಂಡಿರುವ ನವೀನ್ ಕಿರಣ್ ಸಮಾಜಸೇವೆ ಸಪ್ತಾಹ 5ನೇ ದಿನಕ್ಕೆ ಮುಟ್ಟಿದೆ. ಇಂದು ಗುಡಿಬಂಡೆಯಲ್ಲಿ ನಿರಂತರ ಜನಸೇವೆ ಮಾಡುವ ಮಹಿಳೆಯರಿಗೆ ಬಾಗಿನ ನೀಡುವ ಮೂಲಕ ಅವರನ್ನು ಗುರ್ತಿಸುವ ಕೆಲಸ ಮಾಡಿದ್ದಾರೆ.

ಇಂದಿನಿ0ದ ನವರಾತ್ರಿಗಳು ಆರಂಭವಾಗಿವೆ. ವಿಶ್ವ ಪ್ರಖ್ಯಾತ ಮೈಸೂರು ದಸರಾ ಚಾಲನೆಗೊಂಡಿದೆ. ನವರಾತ್ರಿ ಉತ್ಸವಗಳಲ್ಲಿ ನವ ದುರ್ಗೆಯರನ್ನು ಆರಾಧಿಸುವುದು ರೂಢಿ. ಅದೇ ರೀತಿಯಲ್ಲಿ ಶಿಕ್ಷಣ ಸೇವೆ ಜೊತೆಗೆ ಸಾಮಾಜಿಕ ಸೇವೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಕೆವಿ ನವೀನ್ ಕಿರಣ್ ಅವರ ಹುಟ್ಟುಹಬ್ಬದ ಪ್ರಯುಕ್ತ ಅವರ ಅಭಿಮಾನಿಗಳು ಹಮ್ಮಿಕೊಂಡಿರುವ ನವೀನ್ ಕಿರಣ್ ಸಮಾಜ ಸೇವೆ ಸಪ್ತಾಹ ೫ನೇ ದಿನಕ್ಕೆ ಕಾಲಿಟ್ಟಿದೆ. ಪವಿತ್ರ ನವರಾತ್ರಿಗಳ ಸಮಯದಲ್ಲಿ ಮಹಿಳೆಯರನ್ನು ಗೋರವಿಸುವ ಕೆಲಸ ಮಾಡಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ಗುಡಿಬಂಡೆ ಸರ್ಕಾರಿ ಆಸ್ಪತ್ರೆಯ ಸ್ವಚ್ಛತಾ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತರಿಗೆ ಇಂದು ನವೀನ್ ಕಿರಣ್ ಅಭಿಮಾನಿಗಳಿಂದ ಸೀರೆ ವಿತರಿಸಲಾಯಿತು. ಕಾರ್ಯಕ್ರಮವನ್ನು ಗುಡಿಬಂಡೆ ತಾಲೂಕು ವೈದ್ಯಾಧಿಕಾರಿ ಡಾ. ನರಸಿಂಹಮೂರ್ತಿ ಉದ್ಘಾಟಿಸಿ ಮಾತನಾಡಿ, ಕೆ ವಿ ನವೀನ್ ಕಿರಣ್ ಅವರು ಜಿಲ್ಲೆಯಲ್ಲಿ ಜನಾನುರಾಗಿ, ಅನ್ನದಾನಿ, ರಕ್ತದಾನಿ, ವಿದ್ಯಾದಾನಿ ಗಳಾಗಿ ಜಿಲ್ಲೆಯಾಧ್ಯ0ತ ಹಲವಾರು ಸೇವಾ ಕಾರ್ಯಗಳನ್ನು ಮಾಡಿ ಹೆಸರು ಮಾಡಿದ್ದಾರೆ ಎಂದರು.

ಅನೇಕ ಶಿಕ್ಷಣ ಸಂಸ್ಥೆಗಳನ್ನು ತೆರೆದು ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾ ದಾನ ಮಾಡುತ್ತಿದ್ದಾರೆ. ಅಲ್ಲದೆ ಶಿಕ್ಷಣ ಸಂಸ್ಥೆಗಳ ಮೂಲಕ ನೂರಾರು ಕುಟುಂಬಗಳಿಗೆ ಉದ್ಯೋಗ ಕಲ್ಪಿಸಿ, ಅವರಿಗೆ ಅನ್ನದಾತರಾಗಿದ್ದಾರೆ. ಅಂಥಹ ವ್ಯಕ್ತಿತ್ವದ ನಾಯಕನ ಹುಟ್ಟುಹಬ್ಬವನ್ನು 7 ದಿವಸಗಳ ಕಾಲ ಆಚರಿಸುತ್ತಿರುವುದು ಸಂತಸದ ವಿಷಯವಾಗಿದೆ ಎಂದರು.

ಜಿಲ್ಲಾ ಪರಿಸರ ವೇದಿಕೆ ಅಧ್ಯಕ್ಷ ಡಾ. ಗುಂಪು ಮರದ ಆನಂದ್ ಮಾತನಾಡಿ, ಕೆ ವಿ ನವೀನ್ ಕಿರಣ್ ಅವರು ತಮ್ಮ ಜೀವನವನ್ನು ಚಿಕ್ಕಬಳ್ಳಾಪುರ ಜಿಲ್ಲೆಗೆ ಮುಡುಪಾಗಿಟ್ಟಿದ್ದಾರೆ. ಬಡವರು, ದೀನ ದಲಿತರು, ಬಡ ವಿದ್ಯಾರ್ಥಿಗಳನ್ನು ಕಂಡರೆ ಅವರಿಗೆ ಪ್ರಾಣ, ಆದಷ್ಟು ಸಹಾಯ ಮಾಡುವುದು ಅವರ ದೊಡ್ಡ ಗುಣವಾಗಿದೆ, ಅವರ ನಡೆ-ನುಡಿ ಇತರರಿಗೆ ಮಾದರಿಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ ಮಂಜುನಾಥ್, ಪಟ್ಟಣ ಪಂಚಾಯತಿ ಮಾಜಿ ಉಪಾಧ್ಯಕ್ಷ ರಾಜಣ್ಣ, ಪಟ್ಟಣ ಪಂಚಾಯತಿ ಸದಸ್ಯ ರಾಜೇಶ್, ಪೋಸ್ಟ್ ಬಾಲಪ್ಪ , ಇಂದ್ರ ಕುಮಾರ್‌ಸಿಂಗ್, ನಿಶ್ಚಿತ, ಭಾರತಮ್ಮ , ಸ್ವಚ್ಛತಾ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತರು ಭಾಗವಹಿಸಿದ್ದರು.

About The Author

Leave a Reply

Your email address will not be published. Required fields are marked *