9 ಲಕ್ಷ ಮೌಲ್ಯದ ಬೆಳ್ಳಿ, ಬಂಗಾರ, ಹುಂಡಿ ಹಣ ದೋಚಿ ಪರಾರಿ
1 min readದಪ್ಪರ್ತಿ ವೇಣುಗೋಪಾಲ ಸ್ವಾಮಿ ದೇವಾಲಯದಲ್ಲಿ ಕಳವು
9 ಲಕ್ಷ ಮೌಲ್ಯದ ಬೆಳ್ಳಿ, ಬಂಗಾರ, ಹುಂಡಿ ಹಣ ದೋಚಿ ಪರಾರಿ
ಸಿಸಿಕ್ಯಾಮೆರಾ ಡಿವಿಆರ್ ಕೊಂಡೊಯ್ದ ಕಳ್ಳರು
ಗುಡಿಬ0ಡೆ ತಾಲೂಕಿನ ದಪ್ಪರ್ತಿ ಗ್ರಾಮದ ವೇಣುಗೋಪಾಲ ಸ್ವಾಮಿ ದೇವಸ್ಥಾನದಲ್ಲಿ ಕಳ್ಳತನವಾಗಿದೆ. ಸುಮಾರು 9 ಲಕ್ಷ ಮೌಲ್ಯದ ಬೆಳ್ಳಿ, ಬಂಗಾರ, ಹುಂಡಿ ಹಣದ ಜೊತೆಗೆ ಸಿಸಿ ಕ್ಯಾಮೆರಾ ಡಿವಿಆರ್ ದೋಚಿ ಕಳ್ಳರು ಪರಾರಿಯಾಗಿರುವ ಘಟನೆ ನಡೆದಿದೆ.
ಮಂಗಳವಾರ ಮಧ್ಯ ರಾತ್ರಿ ವೇಳೆ ದೇವಸ್ಥಾನದ ಬಾಗಿಲು ಮುರಿದು ,ದೇವಸ್ಥಾನದಲ್ಲಿ ಅಳವಡಿಸಿದ್ದ ಸಿಸಿ ಟಿವಿಗಳನ್ನು ಪಕ್ಕಕ್ಕೆ ತಿರುಗಿಸಿ, ವೈರ್‌ಗಳನ್ನು ಕಟ್ ಮಾಡಿ, ಸಿಸಿ ಟಿವಿ ಡಿವಿಆರ್ ಕದ್ದು, ದೇವಾಲಯ ಒಳಗೆ ಬಿರುವನಲ್ಲಿದ್ದ 2.75 ಕೆಜಿ ಬೆಳ್ಳಿ ಕವಚ, 1 ಕೆಜಿ ಬೆಳ್ಳಿಯ ಪೂಜೆ ಸಾಮಾನು, 15 ಗ್ರಾಂ ಚಿನ್ನದ ತಾಳಿ ಮತ್ತು ಹುಂಡಿಯಲ್ಲಿದ್ದ ಸುಮಾರು 50 ಸಾವಿರ ಹಣ ಕಳವಾಗಿದೆ.
ಇಂದು ಬೆಳಿಗ್ಗೆ ದಪ್ಪರ್ತಿ ಗ್ರಾಮದ ವೆಂಕಟರೆಡ್ಡಿ ಕಸ ತಿಪ್ಪಗೆ ಹಾಕಲು ಹೋಗಿದ್ದಾಗ ದೇವಸ್ಥಾನದ ಕಾಂಪೌ0ಡ್‌ಗೆ ಏಣಿ ಹಾಕಿರುವುದು ಗಮನಿಸಿ ದೇವಸ್ಥಾನದ ಬಾಗಿಲು ಕಡೆ ನೋಡಿದಾಗ ಬಾಗಿಲು ತೆಗೆದಿರುವುದು ಕಾಣಿಸಿದೆ. ಅವರು ಕೂಡಲೇ ದೇವಾಲಯದ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಮುರಳಿಗೆ ದೂರವಾಣಿ ಮೂಲಕ ಮಾಹಿತಿ ತಿಳಿಸಿದ್ದಾರೆ.
ಮಾಹಿತಿ ತಿಳಿದ ದೇವಾಲಯದ ಅರ್ಚಕರು, ಗ್ರಾಮಸ್ಥರು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ನೋಡಿದಾಗ ಬಾಗಿಲು ತೆರೆದಿದ್ದು ಒಳಗೆ ಹೋಗಿ ನೋಡಿದಾಗ ದೇವಾಲಯದಲ್ಲಿ ಕಳ್ಳತನವಾಗಿರುವುದು ದೃಡಪಟ್ಟಿದೆ. ದೇವಾಲಯದ ಅರ್ಚಕ ವರ್ಲಕೊಂಡ ಕೆ.ವಿ.ವೆಂಕಟನರಸಿ0ಹಾರ್ಚಾ ಶನಿವಾರ ಬೆಳಿಗ್ಗೆ ಪೂಜೆ ಮುಗಿಸಿ ಎಂದಿನ0ತೆ ದೇವಾಲಯದ ಬಾಗಿಲು ಹಾಕಿಕೊಂಡು ಹೋಗಿರುತ್ತಾರೆ. ಬುಧವಾರ ಬೆಳಿಗ್ಗೆ ಕಳ್ಳತನವಾಗಿರುವ ಬಗ್ಗೆ ಮಾಹಿತಿ ತಿಳಿದುಬಂದಿದೆ.
ಸ್ಥಳಕ್ಕೆ ಗುಡಿಬಂಡೆ ಪೊಲೀಸ್ ವೃತ್ತ ನಿರೀಕ್ಷಕ ನಯಾಜ್ ಬೇಗ್, ಸಬ್ ಇನ್ಸ್ ಪೆಕ್ಟರ್ ಗಣೇಶ್, ಬೆರಳಚ್ಚು ತಜ್ಞರು ಮತ್ತು ಶ್ವಾನದಳ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.