ಡಾ. ಸ್ವಾಮಿನಾಥನ್ ಆಯೋಗದ ವರದಿ ಜಾರಿಗೆ ಆಗ್ರಹ

ನೆಲಮಂಗಲದಲ್ಲಿ ಕೈಗಾರಿಕಾ ಉದ್ದೇಶಕ್ಕೆ ಭೂಸ್ವಾಧೀನ

ಅಕ್ರಮ ಭೂಮಿ ಮಂಜೂರು ವಜಾಗೆ ಒತ್ತಾಯ

ತಗಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉದ್ಘಾಟನೆ

December 25, 2024

Ctv News Kannada

Chikkaballapura

ಬೈಕ್ ರ‍್ಯಾಲಿ ಮೂಲಕ ಸ್ವಾತಂತ್ರ ಸ್ಥೂಪಕ್ಕೆ ಪುಷ್ಪ ನಮನ

1 min read

ಗಾಂಧೀಜಿ ಆದರ್ಶ ಮೈಗೂಡಿಸಿಕೊಳ್ಳಿ
ಮಾಜಿ ಶಾಶಕ ಎನ್.ಎಚ್. ಶಿವಶಂಕರರೆಡ್ಡಿ ಮನವಿ
ಬೈಕ್ ರ‍್ಯಾಲಿ ಮೂಲಕ ಸ್ವಾತಂತ್ರ ಸ್ಥೂಪಕ್ಕೆ ಪುಷ್ಪ ನಮನ

ಮಹಾತ್ಮ ಗಾಂಧೀಜಿಯವರ ಆದರ್ಶ ಪ್ರತಿಯೊಬ್ಬ ಪ್ರಜೆಯೂ ಮೈಗೂಡಿಸಿಕೊಂಡು ದೇಶವನ್ನು ಕಟ್ಟುವ ಹಾಗೂ ಸಮ ಸಮಾಜವನ್ನು ಉಳಿಸಿ ಬೆಳೆಸುವ ಕೆಲಸವಾಗಬೇಕಿದೆ ಎಂದು ಮಾಜಿ ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ಹೇಳಿದರು.

ಗೌರಿಬಿದನೂರು ತಾಲೂಕು ಬ್ಲಾಕ್ ಕಾಂಗ್ರೆಸ್ ಘಟಕದಿಂದ ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಗಾಂಧಿ ಸ್ಥೂಪಕ್ಕೆ ಪುಪ್ಪನಮನ ಸಲ್ಲಿಸಿ ಮಾತನಾಡಿದ ಮಾಜಿ ಸಚಿವ ಎನ್.ಎಚ್. ಶಿವಶಂಕರರೆಡ್ಡಿ, ಮಹಾತ್ಮ ಗಾಂಧೀಜಿಯವರು ಧಾರ್ಮಿಕ ವೈವಿದ್ಯತೆಯ ಪ್ರಬಲ ಬೆಂಬಲಿಗರಾಗಿದ್ದರು, ಸತ್ಯ ಮತ್ತು ಅಹಿಂಸೆಯ ಪ್ರವರ್ತಕರಾಗಿದ್ದರು, ಭಾರತವನ್ನು ಜಾತ್ಯತೀತ ರಾಷ್ಟವನ್ನಾಗಿ ಮಾಡಲು ಅವರು ಸಾಕಷ್ಟು ಪ್ರಯತ್ನ ಮಾಡಿದರೆ, ಅಹಿಂಸಾತ್ಮಕ ರೀತಿಯಲ್ಲಿ ತಮ್ಮ ಹಕ್ಕುಗಳಿಗಾಗಿ ಹೋರಾಡಲು ಜನರನ್ನು ಪ್ರೇರೇಪಿಸಿದ ಮಹಾತ್ಮರು ಅವರ ಆದರ್ಶಗಳನ್ನು ಮೈಗೂಸಿಕೊಂಡು ದೇಶದ ಅಬ್ಯುದಯಕ್ಕೆ ಶ್ರಮಿಸಬೇಕಿದೆ ಎಂದರು.

ದೇಶದಲ್ಲಿ ರಾಜಕಾರಣ ಕಲುಷಿತವಾಗಿದೆ, ಜಾತಿ, ಧರ್ಮಗಳ ವಿರುದ್ದ ಕಂದಕಗಳನ್ನು ಸೃಷ್ಟಿಸಲಾಗುತ್ತಿದೆ, ರಾಜಕಾರಣದ ಸ್ವಾರ್ಥಕ್ಕಾಗಿ ದೇಶದ ಹಿತಾಸಕ್ತಿಗೆ  ಧಕ್ಕೆ ಉಂಟಾಗುತ್ತಿದೆ. ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ನಾವೆಲ್ಲರೂ ನಾಂದಿ ಹಾಡಬೇಕಿದೆ. ರಾಜಕಾರಣ ಇಂದು ಅಧಿಕಾರ ದಾಹ, ಆಸ್ತಿ ಸಂಪಾದನೆಯ ಗುರಿಯನ್ನಾಗಿಸಿಕೊಂಡಿದ್ದಾರೆ, ಇದರಿಂದ ದೇಶದ ಅಭಿವೃದ್ಧಿ ಕುಂಠಿತವಾಗುತ್ತದೆ, ಸಮಾಜದ ಕಟ್ಟಕಡೆಯ ವ್ಯಕ್ತಿಯ ಚಿಂತನೆ ಮಾಡುವುದೇ ನಿಜವಾದ ರಾಜಕಾರಣವಾಗಿದೆ ಎಂದರು.

ಕ್ಷೇತ್ರದ ಜನತೆಯ ಆರ್ಶೀವಾದದಿಂದ 25 ವರ್ಷಗಳ ಕಾಲ ನಿಮ್ಮ ಸೇವೆ ಮಾಡುವ ಅವಕಾಶ ನೀಡಲಾಗುತ್ತು, ಆದಕ್ಕೆ ನಿಮ್ಮ ಋಣ ತೀರಿಸಲು 50 ವರ್ಷಗಳ ಅಭಿವೃದ್ಧಿಯನ್ನು ಎಲ್ಲಾ ಕ್ಷೇತ್ರಗಳಲ್ಲೂ ಮಾಡಿದ್ದಾನೆ , ಅದರ ಸಾಕ್ಷಿ ನಿಮ್ಮೆಲ್ಲರ ಕಣ್ಣುಂದೆಯೇ ಇದೆ. ನಾನು ಹಣ ಮಾಡಲಿಲ್ಲ, ನಾನು ನೈತಿಕತೆಯ ಸಿದ್ದಾ0ತವನ್ನು ಮೈಗೂಡಿಸಿಕೊಂಡು ರಾಜಕಾರಣಕ್ಕೆ ಬಂದವನು, ಡಾ.ಹೆಚ್.ಎನ್. ಅವರ ಮಾರ್ಗದರ್ಶನದಲ್ಲಿ ಬೆಳೆದವನು, ನನ್ನ ರಾಜಕೀಯ ಜೀವನದಲ್ಲಿ ಅಭಿವೃದ್ಧಿಯ ಬಗ್ಗೆ ಹೆಚ್ಚಿನ ಒತ್ತು ನೀಡಿದ್ದಾನೆ ಎನ್ನುವುದಕ್ಕೆ ಜಿಲ್ಲೆಯಲ್ಲಿ ಗೌರಿಬಿದನೂರು ಕ್ಷೇತ್ರದ ಅಭಿವೃದ್ಧಿಯಷ್ಟು ಯವುದೇ ತಾಲೂಕಿನಲ್ಲಿ ಆಗಿಲ್ಲ, ಕ್ಷೇತ್ರದಲ್ಲಿ ಆರ್ಥಿಕ ಅಭಿವೃದ್ಧಿಗೆ ಸಹಕರಿಸಿದ್ದಾನೆ, ಇಂದು ಗಗನಕ್ಕೇರಿರುವ ಭುಮಿಯ ಬೆಲೆ ಪ್ರತ್ಯಕ್ಷ ಸಾಕ್ಷಿಯಾಗಿದೆ ಎಂದರು.

ತಾಲೂಕಿನ ಜನತೆಗೆ ಯಾರು ಏನು ಎಂಬುದು ಅರಿವಾಗಿದೆ, ಇಂದು ನಮಗೆ ಕಷ್ಟವಾಗುತ್ತಿರಬಹುದು, ಆದರೆ ನೈತಿಕತೆಯ ನೆಲೆಗಟ್ಟಿನ ಮೇಲೆ ನಿಂತಿರುವ ನಮಗೆ ಜಯ ನಿಶ್ಚಿತ, ತಾಲೂಕಿನಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಅಧಿಕಾರಕ್ಕೆ ತರುತ್ತೇನೆ, ತಾಲೂಕಿನ ಅಭಿವೃದ್ಧಿ ಪಥದತ್ತ ಕೊಂಡೊಯ್ಯುತ್ತೇನೆ ಎಂದು ತಿಳಿಸಿದರು. ಮಾಜಿ ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ಸೇರಿದಂತೆ ನೂರಾರು ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು, ಬೈಕ್ ರ್ಯಾಲಿ ಮೂಲಕ ನಗರದ ಪ್ರಮುಖ ರಸ್ತೆಗಳಲ್ಲಿ ರಾಷ್ಟಧಜ ಹಿಡಿದು ದಕ್ಷಿಣ ಜಲಿಯನ್ ವಾಲಾಬಾಗ್ ಎಂದೇ ಬಿಂಬಿತವಾದ ವಿದುರಾಶ್ವತ್ಥ ಕ್ಕೆ ತೆರಳಿ, ಸ್ವಾತಂತ್ರ ಹೋರಾಟದಲ್ಲಿ ಹುತಾತ್ಮರಾದ ಸ್ವಾತಂತ್ರ ಹೋರಾಟಗಾರರ ಸ್ಥೂಪಕ್ಕೆ ಪುಪ್ಪನಮನ ಸಲ್ಲಿಸಿದರು.

 

 

About The Author

Leave a Reply

Your email address will not be published. Required fields are marked *