ಉಚಿತ ಜಾನುವಾರು ಮೇವು ವಿತರಣೆ

ವಿಶ್ವ ಪ್ರಸಿದ್ಧ ನಂದಿ ಗಿರಿಧಾಮಕ್ಕೆ ಪ್ರವಾಸಿಗರ ದಂಡು

ಕೇಂದ್ರ ಸಚಿವ ಅಮಿತ್ ಶಾ ವಿರುದ್ಧ ಶ್ರೀನಿವಾಸಪುರದಲ್ಲಿ ಪ್ರತಿಭಟನೆ

ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ಖಂಡನೆ

December 24, 2024

Ctv News Kannada

Chikkaballapura

ಹಳ್ಳಿ ಮಕ್ಕಳ ಶಿಕ್ಷಣಕ್ಕೆ ಸಮಾನ ಮನಸ್ಕ ವೇದಿಕೆ ಬೆಂಬಲ

1 min read

ಹಳ್ಳಿ ಮಕ್ಕಳ ಶಿಕ್ಷಣಕ್ಕೆ ಸಮಾನ ಮನಸ್ಕ ವೇದಿಕೆ ಬೆಂಬಲ
ಮಕ್ಕಳಿಗೆ ಕಲಿಕೋಪಕರಣ ವಿತರಿಸಿದ ವೇದಿಕೆ ಸದಸ್ಯರು

ಚಿಕ್ಕಬಳ್ಳಾಪುರ ತಾಲೂಕಿನ ಗುಂತಪ್ಪನಹಳ್ಳಿ ಸರ್ಕಾರಿ ಶಾಲಾ ಮಕ್ಕಳಿಗೆ ಸಮಾನ ಮನಸ್ಕ ಪ್ರಕೃತಿ ಸಂರಕ್ಷಣಾ ವೇದಿಕೆ ಕಲಿಕೋಪಕರಣಗಳನ್ನು ವಿತರಣೆ ಮಾಡಿದೆ. ಈ ಮೂಲಕ ಹಳ್ಳಿ ಮಕ್ಕಳ ಕಲಿಕೆಗೆ ಸಹಾಯ ಮಾಡಿದ್ದು, ಇಂಗ್ಲಿಷ್ ಕಲಿಕೆ ಸುಲಭಗೊಳಿಸಲು ಕನ್ನಡದಿಂದ ಇಂಗ್ಲಿಷ್ ಹಾಗೂ ಇಂಗ್ಲಿಷ್‌ನಿ0ದ ಕನ್ನಡ ತರ್ಜುಮೆ ಪುಸ್ತಕಗಳನ್ನು ನೀಡಲಾಗಿದೆ.

ಮಹಾತ್ಮ ಗಾಂಧಿ ಜಯಂತಿ ಆಚರಣೆಯ ಹಿನ್ನೆಲೆಯಲ್ಲಿ, ಗಾಂಧೀಜಿಯವರ ದೇಶಪ್ರೇಮ ಕುರಿತು ಮಕ್ಕಳಿಗೆ ತಿಳಿಸಿ, ದೇಶಭಕ್ತಿಯ ಮಹತ್ವ ತಲುಪಿಸಲಾಯಿತು. ಈ ವೇಳೆ ಗೌತಮ ಬುದ್ಧ ಪೌಂಡೆಷನ್ ಅಧ್ಯಕ್ಷ ಗಂಗರಾಜು ಮಕ್ಕಳಿಗೆ ಸಂವಿಧಾನದ ಮಹತ್ವವನ್ನು ವಿವರಿಸಿ, ಅದರ ಮೂಲಕ ತಮ್ಮ ಹಕ್ಕು ಅರಿತು ಸ್ವಚ್ಛೆ ನಿರ್ಣಯಗಳೊಂದಿಗೆ ಯಶಸ್ವಿ ಜೀವನ ರೂಪಿಸಿಕೊಳ್ಳಲು ತಿಳಿಸಿದರು.

ಗ್ರಾಮೀಣ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಹಾಗೂ ಖಾಸಗಿ ಮತ್ತು ಸರ್ಕಾರಿ ಶಾಲೆಗಳ ನಡುವಿನ ವಿದ್ಯಾಭ್ಯಾಸದ ಅಂತರ ಕಡಿಮೆ ಮಾಡುವ ಉದ್ದೇಶದಿಂದ ಕಲಿಕೋಪಕರಣಗಳನ್ನು ಒದಗಿಸುವುದು ಮುಖ್ಯ ಕರ್ತವ್ಯ ಎಂದು ವೇದಿಕೆ ಪ್ರತಿನಿಧಿಗಳು ಅಭಿಪ್ರಾಯಪಟ್ಟರು. ಸರ್ಕಾರ ಒದಗಿಸುವ ಉಪಕರಣಗಳ ಕೊರತೆಯಿಂದಾಗಿ, ಇಂತಹ ಸಮಾಜ ಸೇವಾ ಸಂಸ್ಥೆಗಳು ಶಾಲೆಗಳಿಗೆ ಬೆಂಬಲ ನೀಡುವುದು, ಮಕ್ಕಳಲ್ಲಿ ಶಿಕ್ಷಣದ ಕಾಳಜಿ ಹೆಚ್ಚಿಸಲು ಸಹಾಯಕವಾಗುತ್ತದೆ ಎಂದು ಈ ಸಂದರ್ಭದಲ್ಲಿ ಉಪಸ್ಥಿತಿಯಲ್ಲಿದ್ದವರು ಅಭಿಪ್ರಾಯಪಟ್ಟರು.

ಈ ಸಮಾರಂಭದಲ್ಲಿ ಸಮಾನ ಮನಸ್ಕ ಪ್ರಕೃತಿ ಸಂರಕ್ಷಣಾ ವೇದಿಕೆ ಸದಸ್ಯರು, ವಕೀಲ ಮಠಮಪ್ಪ ಆರ್, ಸರ್‌ಎಂ. ವಿಶ್ವೇಶ್ವರಯ್ಯ ಕಾರ್ಮಿಕರ ವೇದಿಕೆ ಅಧಧ್ಯಕ್ಷ ಪ್ರಕಾಶ್, ಮತ್ತು ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಭಗವಹಿಸಿದ್ದರು.

 

About The Author

Leave a Reply

Your email address will not be published. Required fields are marked *