ಡಾ. ಸ್ವಾಮಿನಾಥನ್ ಆಯೋಗದ ವರದಿ ಜಾರಿಗೆ ಆಗ್ರಹ

ನೆಲಮಂಗಲದಲ್ಲಿ ಕೈಗಾರಿಕಾ ಉದ್ದೇಶಕ್ಕೆ ಭೂಸ್ವಾಧೀನ

ಅಕ್ರಮ ಭೂಮಿ ಮಂಜೂರು ವಜಾಗೆ ಒತ್ತಾಯ

ತಗಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉದ್ಘಾಟನೆ

December 25, 2024

Ctv News Kannada

Chikkaballapura

ರೈತರು ಕೃಷಿ, ತೋಟಗಾರಿಕೆ ಕ್ಷೇತ್ರಗಳನ್ನು ಉದ್ಯಮವಾಗಿಸಬೇಕು

1 min read

ರೈತರು ಕೃಷಿ, ತೋಟಗಾರಿಕೆ ಕ್ಷೇತ್ರಗಳನ್ನು ಉದ್ಯಮವಾಗಿಸಬೇಕು
ಶ್ರೀಶ್ರೀಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅಭಿಮತ

ಐಟಿಬಿಟಿಯಂತೆ ಕೃಷಿಗೂ ಒಳ್ಳೆಯ ದಿನಗಳು ಬರುವ ಕಾಲ ದೂರವಿಲ್ಲ. ಭೂತಾಯಿಗೆ ಬೆವರು ಹರಿಸಿ ದುಡಿಯುವ ರೈತರು ಕೃಷಿ ಮತ್ತು ತೋಟಗಾರಿಕೆ ವಲಯವನ್ನು ಉದ್ಯಮವಾಗಿಸುವತ್ತ ಚಿಂತಿಸಬೇಕಿದೆ ಎಂದು ಆದಿಚುಂಚನಗಿರಿ ಮಹಾಸಂಸ್ಥಾನಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಕರೆ ನೀಡಿದರು.

ಚಿಕ್ಕಬಳ್ಳಾಪುರ ನಗರ ಹೊರವಲಯದ ಹರ್ಷೋದಯ ಕಲ್ಯಾಣಮಂಟಪದಲ್ಲಿ ರಾಷ್ಟಿಯ ದಾಳಿಂಬೆ ಖರೀದಿದಾರ ಹಾಗೂ ಮಾರಾಟಗಾರರ ಸಮಾವೇಶ-2024ಕ್ಕೆ ಚಾಲನೆ ನೀಡಿ ಮಾತನಾಡಿದ ಆದಿಚುಂಚನಗಿರಿ ಮಹಾಸಂಸ್ಥಾನಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಆಧುನಿಕ ತಂತ್ರನದ ಫಲವಾಗಿ ಕೃಷಿಕ್ಷೇತ್ರ ಇಂದು ಲಾಭದಾಯಕವಾಗಿ ಬೆಳೆಯುತ್ತಿರುವುದು ಸಂತೋಷ ತಂದಿದೆ ಎಂದರು.

ಯುವಕರು ಕೃಷಿಯತ್ತ ಆಕರ್ಷಿತರಾಗಿ ತಂದೆ ತಾಯಿಯ ಕೃಷಿ ಕಾಯಕದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರೆ ಇಲ್ಲಿಯೇ ಸ್ವತಂತ್ರವಾಗಿ ಬದುಕು ಕಟ್ಟಿಕೊಳ್ಳಲು ಸಾಧ್ಯ. ಸಾಫ್ಟ್ವೇರ್ ವಿನಿಗಳಂತೆ ಗೌರವದ ಬದುಕನ್ನು ಕೃಷಿಯಲ್ಲಿ ಕಾಣಲು ಸಾಧ್ಯ. ಪರಾವಲಂಬಿಗಳಾಗಿ ಇನೊಬ್ಬರ ಕೈಕೆಳಗೆ ದುಡಿಯುವ ಬದಲು ನೀವೇ 10 ಮಂದಿಗೆ ಉದ್ಯೋಗ ಕೊಟ್ಟು ಇದ್ದಲ್ಲಿಯೇ ನೆಮ್ಮದಿಯಾಗಿ ಬದುಕುವುದನ್ನು ಕಲಿಯಿರಿ ಎಂದು ಸ್ವಾಮೀಜಿ ಕರೆ ನೀಡಿದರು.

ಯುವರೈತ ಮರಳುಕುಂಟೆ ಚೇತನ್ ಮಾತನಾಡಿ, ದಾಳಿಂಬೆ ಬೆಳೆ ರೈತರಿಗೆ ಲಾಭದಾಯಕ ಕೃಷಿಯಾಗಿದೆ. ಈಬಗ್ಗೆ ಜಿಲ್ಲೆಯ ರೈತರಿಗೆ ಸಂಪೂರ್ಣ ಮಾಹಿತಿ ನೀಡುವ ಭಾಗವಾಗಿ ಈ ಸಮಾವೇಶ ಏರ್ಪಡಿಸಲಾಗಿದೆ. ದಾಳಿಂಬೆ ಬೆಳೆಗೆ ರೋಗಬಾದೆ ಹೆಚ್ಚಿದೆ. ಎಂತಹ ಪರಿಸರದಲ್ಲಿ ಈ ಬೆಳೆ ಬೆಳೆಯಬಹುದು, ಯಾವ ರೋಗಕ್ಕೆ ಯಾವ ಔಷಧಿ ಬಳಸಬೇಕು.ಮಾರುಕಟ್ಟೆಯ ರೀತಿರಿವಾಜುಗಳೇನು ಎಂಬ ಬಗ್ಗೆ ತೋಟಗಾರಿಕೆ ಮತ್ತು ಕೃಷಿ ಒಂದೇ ಸೂರಿನಡಿ ಅರಿವು ಮೂಡಿಸಲು ರಾಷ್ಟಿಯ ದಾಳಿಂಬೆ ಖರೀದಿದಾರ ಹಾಗೂ ಮಾರಾಟಗಾರರ ಸಮಾವೇಶವನ್ನು ರೈತರೇ ಸೇರಿ ಮಾಡುತ್ತಿದ್ದಾವೆ ಎಂದರು.

ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆಂಜನೇಯರೆಡ್ಡಿ ಮಾತನಾಡಿ, ಜಿಲ್ಲಾ ಹಣ್ಣು ತರಕಾರಿ ಬೆಳೆಯುವಲ್ಲಿ ರಾಜ್ಯಕ್ಕೆ ಮಾದರಿಯಾಗಿದೆ. ದ್ರಾಕ್ಷಿಯನ್ನು ಹೆಚ್ಚಾಗಿ ಬೆಲೆಯುತ್ತಿದ್ದ ರೈತರು ಬದಲಾದ ಕೃಷಿಯಂತೆ ದಾಳಿಂಬೆ ಬೆಳೆದು ಲಾಭಮಾಡುವತ್ತ ಮನಸ್ಸು ಮಾಡಿದ್ದಾರೆ. ಇಂತಹ ಸಂದರ್ಭದಲ್ಲಿ ರಾಜ್ಯದ ದಾಳಿಂಬೆ ಬೆಳೆಗಾರರನ್ನು ಒಂದೆಡೆ ಸೇರಿಸಿ ಈ ಕ್ಷೇತ್ರದಲ್ಲಿ ಎದುರಾಗುವ ಸಮಸ್ಯೆ ಸವಾಲುಗಳ ಬಗ್ಗೆ  ಮೂಲಕ ರೈತರಿಗೆ ವೈನಿಕವಾಗಿ ಸಮಗ್ರ ಮಾಹಿತಿ ನೀಡಲು ಈ ಸಮಾವೇಶ ಮಾಡುತ್ತಿದ್ದಾರೆ. ಇದು ಯಶಸ್ವಿಯಾಗಲಿ ಎಂದರು.

 

About The Author

Leave a Reply

Your email address will not be published. Required fields are marked *