ಲಿನ್ ಫಾಕ್ಸ್ ಲಾಜಿಸ್ಟಿಕ್ಸ್ ಕಂಪನಿಯ ಮಹಿಳಾ ಕಾರ್ಮಿಕಳ ಸಾವು
1 min readಲಿನ್ ಫಾಕ್ಸ್ ಲಾಜಿಸ್ಟಿಕ್ಸ್ ಕಂಪನಿಯ ಮಹಿಳಾ ಕಾರ್ಮಿಕಳ ಸಾವು
ಬಿಒಪಿಟಿ ವಾಹನ ಚಾಲನೆ ಮಾಡುವ ಅವಘಡ ಮಹಿಳೆಯ ಸಾವುರ‍್ಯಾಕ್ ನಲ್ಲಿ ಮಹಿಳೆ ಸಿಲುಕಿ ಹಾಕಿಕೊಂಡಿದ್ದ ಮಹಿಳೆ ಆಸ್ಪತ್ರೆಯಲ್ಲಿ ಡೆತ್
ಸಾವು ಅನ್ನೋದೆ ಹಾಗೆ ಯಾರಿಗೆ ಯಾವಾಗ ಹೇಗೆ ಬರುತ್ತೆ ಅನ್ನೋದು ಹೇಳೋಕೆ ಆಗಲ್ಲ..ಅಲ್ಲೂ ಅಷ್ಟೇ ಅದೊಂದು ಲಾಜಿಸ್ಟಿಕ್ ಕಂಪನಿಯಲ್ಲಿ ಆಕೆ ಎಂದಿನ0ತೆ ತನ್ನ ಪಾಡಿಗೆ ಬ್ಯಾಟರಿ ಅಪರೇಟೆಡ್ ಸರಕು ಸಾಗಣೆ ವಾಹನ ಚಾಲನೆ ಮಾಡ್ತಿದ್ಲು…ಆದ್ರೆ ಅದೇ ವಾಹನ ಚಾಲನೆ ಈಗ ಆಕೆಯ ಜೀವವನ್ನೇ ಬಲಿಪಡೆದಿದೆ..ಅರೇ ಅದೇಗೆ ಅದೇನಾಯ್ತು ಅಂದ್ರ ಈ ಸ್ಟೋರಿ ನೋಡಿ.
ನೊಡಿದ್ರಲ್ಲಾ…ಅಲ್ಲೊಂದು ಕಾರ್ಖಾನೆಯಲ್ಲಿ ಮಹಿಳೆಯೊಬ್ಬಳು ಬ್ಯಾಟರಿ ಅಪರೇಟೇಡ್ ಸರಕು ಸಾಗಣೆ ವಾಹನ ಚಾಲನೆ ಮಾಡ್ತಿದ್ದಾಳೆ..ಆದ್ರೆ ಅದೊಂದು ಕ್ಷಣ ಆಕೆ ಚಲಾಯಿಸುತ್ತಿದ್ದ ವಾಹನ ಹಿಂಬದಿಗೆ ಹೋಗಿದ್ದು ವಾಹನದ ಮೇಲೆ ನಿಂತಿದ್ದ ಆಕೆ ಸರಕು ಸಾಗಣೆಗಳನ್ನ ಜೋಡಿಸಲು ಮಾಡಿದ್ದ ಬೃಹತ್ ಕಬ್ಬಿಣದ ರ‍್ಯಾಕ್ ನೊಳಗೆ ಸಿಲುಕಿ ಹಾಕಿಕೊಂಡಿದ್ದಾಳೆ….ಇದ್ರಿ0ದ ಆಕೆ ಇತ್ತ ಹೊರಗೂ ಬರಲಾಗದೆ ಅತ್ತ ಓಳಗೂ ಹೋಗಲಾಗದೆ ದೇಹ ಬ್ಯಾಟರಿ ಚಾಲಿತ ವಾಹನ ಹಾಗೂ ಹಿಂಭಾಗದ ಕಬ್ಬಿಣದ ರ‍್ಯಾಕ್ ಮಧ್ಯೆ ನಲುಗಿ ಹೋಗಿದ್ದಾಳೆ….ಕೂಡಲೇ ಅಕ್ಕ ಪಕ್ಕ ಕೆಲಸ ಮಾಡಿದವರು ಓಡೋಡಿ ಬಂದು ಆಕೆಯನ್ನ ಹೊರತೆಗೆಯುವ ಪ್ರಯತ್ನ ಮಾಡಿದ್ದಾರೆ..ಆದ್ರೆ ಅಷ್ಟರಲ್ಲಾಗಲೇ ದೇಹ ಅಪ್ಪಚ್ಚಿಯಾಗಿ ತೀವ್ರ ಅಸ್ವಸ್ಥಳಾಗಿದ್ದ ಆಕೆಯನ್ನ ಆಸ್ಪತ್ರೆಗೆ ಸಾಗಿಸಲಾಗಿತ್ತು…ಆದ್ರೂ ಆಕೆ ಬದುಕುಳಿದಿಲ್ಲ…ಅಂದಹಾಗೆ ಈ ಘಟನೆ ನಡೆದಿರೋದು ಚಿಕ್ಕಬಳ್ಳಾಪುರ ತಾಲೂಕಿನ ಸೇಟ್ ದಿನ್ನೆ ಬಳಿ ಇರುವ ಲಿನ್ ಫಾಕ್ಸ್ ಲಾಜಿಸ್ಟಿಕ್ ಕಂಪನಿಯಲ್ಲಿ…ಇನ್ನೂ ಮೃತಪಟ್ಟಿರೋದು ಸಂಧ್ಯಾ ಅಂತ ೨೫ ವರ್ಷದ ಮಹಿಳೆ…
ಹೌದು ಅಸ್ವಸ್ಥಳಾಗಿದ್ದ ಮಹಿಳೆಯನ್ನ ಕಂಪನಿಯವರೇ ಕಾರಲ್ಲಿ ಚಿಕ್ಕಬಳ್ಳಾಪುರ ನಗರದ ಖಾಸಗಿ ಆಸ್ಪತ್ರೆಗೆ ಕರೆತಂದಿದ್ರು…ಆಸ್ಪತ್ರೆಗೆ ಬರುವವರೆಗೂ ಆಸ್ಪತ್ರೆಯಲ್ಲೂ ಸಹ ಮಾತನಾಡಿಕೊಂಡು ಇದ್ದ ಮಹಿಳೆಗೆ ವೈದ್ಯರು ಪರೀಕ್ಷೆ ಮಾಡಿ ಚಿಕಿತ್ಸೆ ಆರಂಭ ಮಾಡಿದ್ರು…ಆದ್ರೆ ಅದೇನಾಯ್ತೋ ಏನೋ ಆಕೆ ಆಸ್ಪತ್ರೆಯ ಬೆಡ್ ಮೇಲೆಯೇ ಇದ್ದಕ್ಕಿದ್ದಂತೆ ಸಡನ್ ಆಗಿ ಆಕೆಯ ಹೃದಯ ಬಡಿತವೇ ನಿಂತು ಹೋಗಿ ಪ್ರಾಣಬಿಟ್ಟಿದ್ದಾಳೆ.
ಇನ್ನೂ ಘಟನೆ ನಂತರ ಆಸ್ಪತ್ರೆಗೆ ಕಾರ್ಮಿಕ ಇಲಾಖಾಧಿಕಾರಿಗಳು ಹಾಗೂ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ…ಇನ್ನೂ ಇಬ್ಬರು ಮಕ್ಕಳು ಇರುವ ಸಂಧ್ಯಾ ಸಾವನ್ನಪ್ಪಿದ್ದು ಗಂಡ ಹಾಗೂ ಕುಟುಂಬಸ್ಥರು ದುಃಖದ ಮಡುವಿನಲ್ಲಿ ಮುಳುಗುವಂತಾಗಿದ್ದು ಮಕ್ಕಳೂ ತಾಯಿಯಿಲ್ಲದ ತಬ್ಬಲಿಗಳಾಗುವಂತಾಗಿದೆ.