3ನೇ ದಿನ ಬೀದಿ ಬದಿ ವ್ಯಾಪಾರಸ್ಥರಿಗೆ ಬ್ರೆಡ್ ವಿತರಣೆ
1 min readಮುಂದುವರಿದ ನವೀನ್ ಕಿರಣ್ ಸಮಾಜಿಕ ಸಪ್ತಾಹ
3ನೇ ದಿನ ಬೀದಿ ಬದಿ ವ್ಯಾಪಾರಸ್ಥರಿಗೆ ಬ್ರೆಡ್ ವಿತರಣೆ
ಚಿಕ್ಕಬಳ್ಳಾಪುರದ ಸಮಾಜಸೇವಕ, ಶಿಕ್ಷಣ ದಾನಿ ಎಂದೇ ಖ್ಯಾತಿ ಪಡೆದಿರುವ ಕೆವಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಕೆ ವಿ ನವೀನ್ ಕಿರಣ್ ಅವರ ಹುಟ್ಟುಹಬ್ಬದ ಪ್ರಯುಕ್ತ ಆರಂಭಿಸಲಾಗಿರುವ ನವೀನ್ ಕಿರಣ್ ಸಮಾಜ ಸೇವೆ ಸಪ್ತಾಹ ಇಂದು ೩ನೇ ದಿನಕ್ಕೆ ಕಾಲಿಟ್ಟಿದೆ. ಮೊದಲ ದಿನ ಗ್ರಂಥಾಲಯಕ್ಕೆ ಪುಸ್ತಕ, ಎರಡನೇ ದಿನ ಕಂಪ್ಯೂಟರ್ ವಿvರಣೆ ಮಾಡಲಾಗಿದ್ದು, ಇಂದು ಬೀದಿ ಬದಿ ವ್ಯಾಪಾರಸ್ಥರಿಗೆ ಬ್ರೆಡ್ ಬಿಸ್ಕೆಟ್ ವಿತರಿಸುವ ಮೂಲಕ ಸಪ್ತಾಹ ಮುಂದುವರಿಸಲಾಗಿದೆ.
ಕೆ ವಿ ನವೀನ್ ಕಿರಣ್ ಅವರ ೪೬ನೇ ಹುಟ್ಟುಹಬ್ಬದ ಅಂಗವಾಗಿ ಅವರ ಅಭಿಮಾನಿಗಳು ಹಮ್ಮಿಕೊಂಡಿರುವ ನವೀನ್ ಕಿರಣ್ ಸಮಾಜ ಸೇವೆ ಸಪ್ತಾಹ ಇಂದು ಚಿಕ್ಕಬಳ್ಳಾಪುರದಲ್ಲಿ ಸಮಾಜ ಸೇವೆಯ ಮೂಲಕವೇ ಆರಂಭಿಸಲಾಗಿದೆ. ಬೀದಿ ಬದಿ ವ್ಯಾಪಾರಸ್ಥರು ದಿನವಿಡೀ ದುಡಿದರೂ ಕುಟುಂಬ ನಿರ್ವಹಣೆಗೆ ಸಾಲದ ಸ್ಥಿತಿ ಇದೆ. ಹಾಗಾಗಿ ಅವರು ಬ್ರೆಡ್, ಬಿಸ್ಕೆಟ್‌ನಂತಹ ಪೌಷ್ಠಿಕ ಆಹಾರ ಸೇವನೆ ಎಂಬುದು ಗಗನ ಕುಸುಮವಾಗಿದೆ. ಹಾಗಾಗಿಯೇ ಬೀದಿ ಬದಿ ವ್ಯಾಪಾರಸ್ಥರಿಗೆ ಬ್ರೆಡ್ ಮತ್ತು ಬಿಸ್ಕೆಟ್ ವಿತ ಣೆಯನ್ನು ಇಂದು ಮಾಡಲಾಯಿತು.
ನವೀನ್ ಕಿರಣ್ ಸಮಾಜ ಸೇವೆಯ ಮೂರನೇ ದಿನವಾದ ಇಂದು ಕೆ ವಿ ನವೀನ್ ಕಿರಣ್ ಅವರ ೪೬ನೇ ಹುಟ್ಟುಹಬ್ಬದ ಪ್ರಯುಕ್ತ ಚಿಕ್ಕಬಳ್ಳಾಪುರದ ಪ್ರಶಾಂತನಗರ, ಸಿವಿಲ್ ಬಸ್ ನಿಲ್ದಾಣನಲ್ಲಿರುವ ಕಟ್ಟಡ ಕಾರ್ಮಿಕರು ಹಾಗೂ ಬೀದಿ ಬದಿ ವ್ಯಾಪಾರಸ್ಥರಿಗೆ ಬ್ರೆಡ್, ಬಿಸ್ಕೆಟ್ ವಿತರಣೆ ಮಾಡಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಚಿಕ್ಕಬಳ್ಳಾಪುರ ಸಂಚಾರಿ ಇನ್ಸ್ಪೆಕ್ಟರ್ ಮಂಜುಳಾ ಅವರು ನೆರೆವೇರಿಸಿದರು.
ಕಾರ್ಯಕ್ರಮದಲ್ಲಿ ಸಮಾನ ಮನಸ್ಕರ ಪರಿಸರ ವೇದಿಕೆಯ ಸದಸ್ಯ ಗುಂಪು ಮರದ ಆನಂದ್ ಮಾತನಾಡಿ, ಕೆವಿ ನವೀನ್ ಕಿರಣ್ ಅವರ ೪೬ನೇ ಹುಟ್ಟುಹಬ್ಬವನ್ನು ವಿವಿಧ ಸಮಾಜಿಕ ಕಾರ್ಯಕ್ರಮಗಳ ಮೂಲಕ ಆಚರಿಸುವುದು ಪ್ರತಿವರ್ಷ ನಡೆಯುತ್ತಿದೆ. ಇದು ಎಲ್ಲರಿಗೂ ಸಂತಸದ ವಿಚಾರವಾಗಿದೆ. ನವೀನ್ ಕಿರಣ್ ಅವರ ಸಾಧನೆಗಳ ಕುರಿತು ಪ್ರತಿಯೊಬ್ಬರಿಗೆ ತಿಳಿಸುವುದು ಮತ್ತು ಭವಿಷ್ಯದ ಪ್ರಜೆಗಳಾದ ಮಕ್ಕಳು ಇಂತಹ ವಿಶಾಲ ಮನೋಭಾವ ರೂಡಿಸಿಕೊಳ್ಳುವಂತೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ನವೀನ್ ಕಿರಣ್ ಅವರು ಸರಳ ವ್ಯಕ್ತಿ, ರಕ್ತದಾನಿ, ಸಮಾಜಮುಖಿ ಕಾರ್ಯಗಳನ್ನು ಚಿಕ್ಕಬಳ್ಳಾಪುರ ಜಿ¯್ಲೆಯಲ್ಲಿ ಮಾಡುತ್ತಿದ್ದು, ಅಂಥವರ ಗುಣಗಳನ್ನು ಪ್ರತಿಯೊಬ್ಬರು ಪಾಲಿಸಬೇಕು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಸಮಾನ ಮನಸ್ಕöರ ಪ್ರಕೃತಿ ಸಂರಕ್ಷಣಾ ವೇದಿಕೆ ಸದಸ್ಯರು, ಕಲೀಲ್, ಗೋಪಿನಾಥ್, ಯಶೋದಮ್ಮ ಇದ್ದರು.