ಗಾಂಧಿ ಜಯಂತಿ ಪ್ರಯುಕ್ತ ನಂಜನಗೂಡಿನಲ್ಲಿ ಸ್ವಚ್ಛತಾ ಕಾರ್ಯ
1 min readಗಾಂಧಿ ಜಯಂತಿ ಪ್ರಯುಕ್ತ ನಂಜನಗೂಡಿನಲ್ಲಿ ಸ್ವಚ್ಛತಾ ಕಾರ್ಯ
ಕಪಿಲಾ ನದಿಯಲ್ಲಿ ಕೊಳೆತು ನಾರುತಿದ್ದ ತ್ಯಾಜ್ಯ ಹೊರಕ್ಕೆ
ಸಂಘ ಸಂಸ್ಥೆಗಳ ಮುಖಂಡರು, ವಿದ್ಯಾರ್ಥಿಗಳ ಕಾರ್ಯಕ್ಕೆ ಶ್ಲಾಘನೆ
ಮಹಾತ್ಮ ಗಾಂಧಿ ೧೫೫ನೇ ಜಯಂತಿ ಅಂಗವಾಗಿ ನಂಜನಗೂಡಿನ ಶಾಸಕ ದರ್ಶನ್ ದ್ರುವನಾರಾಯಣ್ ನೇತೃತ್ವದಲ್ಲಿ ಕಪಿಲ ನದಿಯ ಸುತ್ತಮುತ್ತ ಸ್ವಚ್ಛತಾ ಕಾರ್ಯವನ್ನು ಇಂದು ನಡೆಸಲಾಯಿತು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಟ್ರಸ್ಟ್ ಹಾಗೂ ನಂಜು0ಡೇಶ್ವರ ದೇವಸ್ಥಾನ, ರಾಷ್ಟಿಯ ಸೇವಾ ಯೋಜನೆ ಸೇರಿದಂತೆ ಹಲವು ಸಂಘ ಸಂಸ್ಥೆಗಳು ಸಾಥ್ ನೀಡಿದವು.
ದಕ್ಷಿಣ ಕಾಶಿ ನಂಜನಗೂಡಿನ ಪವಿತ್ರ ಯಾತ್ರಾಸ್ಥಳವಾದ ಶ್ರೀ ನಂಜು0ಡೇಶ್ವರ ಸ್ವಾಮಿ ದೇವಾಲಯದ ಸುತ್ತಮುತ್ತ ಹಾಗೂ ಕಪಿಲಾ ನದಿ ಸ್ನಾನಘಟ್ಟದ ಬಳಿ ಸ್ವಚ್ಛತಾ ಕಾರ್ಯ ಜೋರಾಗಿ ನಡೆಯಿತು. ಕಾಲೇಜು ವಿದ್ಯಾರ್ಥಿಗಳು ಕಪಿಲ ನದಿಗಳಿದು ನದಿಯಲ್ಲಿನ ತ್ಯಾಜ್ಯವನ್ನು ಸ್ವಚ್ಛ ಗೊಳಿಸಿದರೆ, ಮಹಿಳೆಯರು ನದಿಯ ಮೇಲ್ಭಾಗದಲ್ಲಿ ಪೊರಕ್ಕೆ ಹಿಡಿದು ಕಸ ಗುಡಿಸುವ ಮೂಲಕ ಸ್ವಚ್ಛಗೊಳಿಸಿದರು. ಕಪಿಲ ನದಿಯ ಒಳಭಾಗದಲ್ಲಿರುವ ಹಳೆ ಬಟ್ಟೆಗಳು ಸೇರಿದಂತೆ ಗಬ್ಬೆದ್ದು ನಾರುತ್ತಿದ್ದ ತ್ಯಾಜ್ಯವನ್ನು ಹೊರ ತೆಗೆದು ಟ್ರಾಕ್ಟರ್‌ನಲ್ಲಿ ಸಾಗಿಸಲಾಯಿತು.
ನಾಳೆ ಗಾಂಧೀಜಿಯವರ ಜನ್ಮ ದಿನಾಚರಣೆ ಅಂಗವಾಗಿ ತಾಲ್ಲೂಕಿನ ಬದನವಾಳು ಖಾದಿ ಗ್ರಾಮೋದ್ಯೋಗ ಕೇಂದ್ರದಲ್ಲಿ ಕಳೆದ ವರ್ಷದಂತೆ ಈ ಬಾರಿಯೂ ನಂಜನಗೂಡಿನಿ0ದ ಪಾದಯಾತ್ರೆ ನಡೆಸಿ, ಅಲ್ಲಿ ತಾಲ್ಲೂಕು ಆಡಳಿತದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ನಗರಸಭಾ ಅಧ್ಯಕ್ಷ ಶ್ರೀಕಂಠ ಸ್ವಾಮಿ, ಮಂಜುನಾಥ್, ದೇವಾಲಯ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ್ ಕುಮಾರ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಧರ್ಮರಾಜ್, ಅನುರಾಗ್ ಬಸವರಾಜ್, ಸೇರಿದಂತೆ ಹಲವರು ಭಾಗವಹಿಸಿದ್ದರು.